ಎರಡು ವರ್ಷ ಸರಳ ಆಚರಣೆ ನಂತರ ಈ ವರ್ಷ ಮೈಸೂರಿನಲ್ಲಿ ಅದ್ದೂರಿ ವಿಜಯದಶಮಿ: ಹೇಗಿರಲಿದೆ ನವರಾತ್ರಿ ತೆರೆಯ ಉತ್ಸವ?

ನವರಾತ್ರಿ ಹಬ್ಬದ ಕೊನೆಯ ಘಟಕ್ಕೆ ಬಂದು ನಿಂತಿದೆ. ನಾಳೆ ಅಂದರೆ ಅಕ್ಟೋಬರ್ 5 ರಂದು ಮೈಸೂರಿನಲ್ಲಿ ನಡೆಯಲಿರುವ 10 ದಿನಗಳ ದಸರಾ ಮಹೋತ್ಸವದ ವಿಜಯದಶಮಿ ಉತ್ಸವದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮೈಸೂರು: ನವರಾತ್ರಿ ಹಬ್ಬದ ಕೊನೆಯ ಘಟಕ್ಕೆ ಬಂದು ನಿಂತಿದೆ. ನಾಳೆ ಅಂದರೆ ಅಕ್ಟೋಬರ್ 5 ರಂದು ಮೈಸೂರಿನಲ್ಲಿ ನಡೆಯಲಿರುವ 10 ದಿನಗಳ ದಸರಾ ಮಹೋತ್ಸವದ ವಿಜಯದಶಮಿ ಉತ್ಸವದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. 

ಕಳೆದೆರಡು ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ನವರಾತ್ರಿಯನ್ನು ಸರಳವಾಗಿ ಆಚರಿಸಲಾಗಿತ್ತು. ಚಾಮುಂಡಿ ತಾಯಿಯ ಮೆರವಣಿಗೆ, ಗಜಪಯಣವನ್ನು ಬಹುತೇಕರಿಗೆ ಹತ್ತಿರದಿಂದ ಕಣ್ತುಂಬಿಕೊಳ್ಳಲು ಸಾಧ್ಯವಾಗಿರಲಿಲ್ಲ. ಸಾಂಕ್ರಾಮಿಕ ರೋಗದಿಂದಾಗಿ ಕಳೆದ ಎರಡು ವರ್ಷಗಳಿಂದ ಮೈಸೂರು ಅರಮನೆಯಲ್ಲಿ ಜಂಬೂ ಸವಾರಿ ಉತ್ಸವವನ್ನು ನಿರ್ಬಂಧಿಸಲಾಗಿತ್ತು.

ಆದರೆ ಈ ವರ್ಷ ಮೈಸೂರಿನಲ್ಲಿ ಕೂಡ ನವರಾತ್ರಿಯ 10ನೇ ದಿನದ ದಶಮಿ ಉತ್ಸವ ಅದ್ದೂರಿಯಾಗಿ ನಡೆಯುತ್ತಿದೆ. ದೇಶದ ವಿವಿಧ ಭಾಗಗಳಿಂದ ಮತ್ತು ವಿದೇಶಗಳಿಂದ ಲಕ್ಷಾಂತರ ಜನರು ಈ ಕಾರ್ಯಕ್ರಮವನ್ನು ವೀಕ್ಷಿಸುವ ನಿರೀಕ್ಷೆಯಿದೆ. ವಿಜಯದಶಮಿಯ ಕೊನೆಯ ದಿನದಂದು ಕೊನೆಗೊಳ್ಳುವ ಒಂಬತ್ತು ದಿನಗಳ ನವರಾತ್ರಿ ಉತ್ಸವ ಅಂದರೆ ದುಷ್ಟ ಸಂಹಾರ ಶಿಷ್ಟ ಪಾಲನೆ ಕೆಡುಕಿನ ಮೇಲೆ ವಿಜಯದ ಸಂಕೇತವಾಗಿದೆ. 

ಈ ಬಾರಿಯ ವಿಜಯೋತ್ಸವದ ಮೆರವಣಿಗೆಯು ಮೈಸೂರಿನಿಂದ  5 ಕಿಲೋಮೀಟರ್‌ಗಳ ಉದ್ದಕ್ಕೂ ಬನ್ನಿಮಂಟಪದ ಮೈದಾನದವರೆಗೆ ಜನಸಾಗರದ ಮೂಲಕ ನಡುವೆ ಆನೆಗಳು, ಕುದುರೆಗಳು, ಟೇಬಲ್‌ಲಾಕ್ಸ್ ಮತ್ತು ನೂರಾರು ಸಾಂಸ್ಕೃತಿಕ ತಂಡಗಳ ಭವ್ಯವಾದ ಮತ್ತು ವರ್ಣರಂಜಿತ ಮೆರವಣಿಗೆಯನ್ನು ಒಳಗೊಂಡಿರುತ್ತದೆ.

57 ವರ್ಷ ವಯಸ್ಸಿನ ಆನೆ ಅಭಿಮನ್ಯು ತನ್ನ ಬೆನ್ನಿನ ಮೇಲೆ ಚಿನ್ನದ ರಥವನ್ನು ಹೊರಲಿದ್ದು, ಇತರ ಆನೆಗಳ ಜೊತೆಗೆ ಲಕ್ಷ್ಮಿ ಮತ್ತು ಚೈತ್ರ (ಕುಮ್ಕಿ ಆನೆಗಳು) ಸುತ್ತಲೂ ಇರುತ್ತವೆ. ಕಳೆದ ಒಂದೂವರೆ ತಿಂಗಳಿನಿಂದ ಮೆರವಣಿಗೆಗೆ ತರಬೇತಿ ನೀಡಲು ಅರಣ್ಯದ ವಿವಿಧ ಶಿಬಿರಗಳಿಂದ ಕರೆತರಲಾದ 14 ಆನೆಗಳ ಪೈಕಿ ಒಂಬತ್ತು ಆನೆಗಳು ಮೆರವಣಿಗೆಯಲ್ಲಿ ಭಾಗಿಯಾಗಲಿವೆ. ಈ ವರ್ಷ, ಹಿಂದಿನ ವರ್ಷಗಳಲ್ಲಿ ಹೌದಾವನ್ನು ಹೊತ್ತಿದ್ದ 63 ವರ್ಷದ ಅರ್ಜುನ, ನಿವೃತ್ತಿಯ ನಂತರ ಮೊದಲ ಬಾರಿಗೆ ಮೆರವಣಿಗೆಯಲ್ಲಿ ನಿಶಾನೆ ಆನೆಯಾಗಿ ಭಾಗವಹಿಸುತ್ತಿದೆ. 

ಜನಪದ ಕಲಾವಿದರು, ಸಾಂಸ್ಕೃತಿಕ ತಂಡಗಳು ಆನೆಗಳ ಹಿಂದೆ ಸಾಗಲಿವೆ
ರಾಜ್ಯದ ವಿವಿಧ ಜಿಲ್ಲೆಗಳ ವಿವಿಧ ಸಂಸ್ಕೃತಿಗಳನ್ನು ಪ್ರತಿನಿಧಿಸುವ ಟ್ಯಾಬ್ಲಾಕ್ಸ್ ಮೆರವಣಿಗೆಯಲ್ಲಿ ಸಾಗಲಿವೆ. ರಾಜ್ಯ ಸರ್ಕಾರ ಕೈಗೊಂಡಿರುವ ವಿವಿಧ ಕಾರ್ಯಕ್ರಮಗಳನ್ನು ಒಳಗೊಂಡ ಟ್ಯಾಬ್ಲಾಕ್ಸ್ ಇರುತ್ತದೆ. ಟ್ಯಾಬ್ಲಾಕ್ಸ್ ಜೊತೆಗೆ, ನೂರಾರು ಜಾನಪದ ಕಲಾವಿದರು ಮತ್ತು ಸಾಂಸ್ಕೃತಿಕ ತಂಡಗಳು ಮೈಸೂರು ಅರಮನೆಯಿಂದ ಬನ್ನಿಮಂಟಪದವರೆಗೆ ಮೆರವಣಿಗೆ ನಡೆಸುತ್ತವೆ.

ಮೈಸೂರು ಅರಮನೆಯ ಉತ್ತರ ದ್ವಾರದಲ್ಲಿ ಮಧ್ಯಾಹ್ನ 2.36 ರಿಂದ 2.50 ರವರೆಗಿನ ಶುಭ ಮುಹೂರ್ತದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಂದಿಧ್ವಜ ಪೂಜೆ ನೆರವೇರಿಸುವರು. ಅಭಿಮನ್ಯುವಿನ 750 ಕೆಜಿ ತೂಕದ ಚಿನ್ನದ ಪಲ್ಲಕ್ಕಿಯಲ್ಲಿ ಇರಿಸಲಾಗಿರುವ ಚಾಮುಂಡೇಶ್ವರಿ ದೇವಿಯ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸಿಎಂ ಅವರು ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಬನ್ನಿಮಂಟಪ ಮೈದಾನದಲ್ಲಿ ಸಂಜೆ 7 ಗಂಟೆಗೆ ನಡೆಯುವ ಪಂಜಿನ ಕವಾಯತು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗೌರವ ವಂದನೆ ಸ್ವೀಕರಿಸಿದ ನಂತರ ಸಂಭ್ರಮಾಚರಣೆಗೆ ತೆರೆ ಬೀಳಲಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com