ಅಂದು ಸಿದ್ದರಾಮಯ್ಯ...ಇಂದು ಡಿ ಕೆ ಶಿವಕುಮಾರ್ ಕೈ ಹಿಡಿದು ಭಾರತ್ ಜೋಡೋ ಯಾತ್ರೆಯಲ್ಲಿ ಓಡಿದ ರಾಹುಲ್ ಗಾಂಧಿ
ತುಮಕೂರು: ಇಂದು ತುಮಕೂರು ಜಿಲ್ಲೆಯ ಪೊಚ್ಚಕಟ್ಟೆಯಿಂದ ಭಾರತ್ ಜೋಡೋ ಯಾತ್ರೆ ಆರಂಭಿಸಿದ ರಾಹುಲ್ ಗಾಂಧಿ ಮತ್ತು ಕೈ ನಾಯಕರು ಕಾರ್ಯಕರ್ತರು ಹುಳಿಯಾರು, ಚಿಕ್ಕನಾಯಕನಹಳ್ಳಿಗೆ ತಲುಪಿದರು.
ಭಾರತ್ ಜೋಡೋ ಯಾತ್ರೆಯಲ್ಲಿ (Bharath Jodo Yatra) ಜಡಿ ಮಳೆಗೂ ಜಗ್ಗದ ರಾಹುಲ್‌ಗಾಂಧಿ (Rahul Gandhi) ರನ್ನಿಂಗ್ ಮಾಡುವ ಮೂಲಕ ಕಾಂಗ್ರೆಸ್ ನಾಯಕರನ್ನು ಹುರಿದುಂಬಿಸಿಸುತ್ತಿದ್ದಾರೆ.
ಕುರುಬ ಸಮುದಾಯದ ಸದಸ್ಯರು ಉಣ್ಣೆಯ ಹೊದಿಕೆಗಳನ್ನು ಹೆಗಲಿಗೆ ಧರಿಸಿ ಕಾಂಗ್ರೆಸ್ ನಾಯಕರನ್ನು ಪೊಚ್ಚಕಟ್ಟೆಯಲ್ಲಿ ಸ್ವಾಗತಿಸಿದರು. ಅಲ್ಲಿಂದ ಹುಳಿಯಾರ್ ಮೂಲಕ ಚಿಕ್ಕನಾಯಕನಹಳ್ಳಿಗೆ ಯಾತ್ರೆ ಸಾಗಿತು. ಅಂದು ಸಿದ್ದರಾಮಯ್ಯ ಅವರ ಕೈ ಹಿಡಿದು ಓಡಿದ್ದ ರಾಹುಲ್ ಗಾಂಧಿಯವರು ಇಂದು ಕಾಂಗ್ರೆಸ್ ನ ಬಾವುಟ ಹಿಡಿದು ಡಿ ಕೆ ಶಿವಕುಮಾರ್ ಜೊತೆ ಓಡಿ ಗಮನ ಸೆಳೆದರು.
ಇಂದು ಬಸವನಗುಡಿ ಬಳಿ ಡಿಕೆ ಶಿವಕುಮಾರ್ ಕೈ ಹಿಡಿದುಕೊಂಡು ಹೈಸ್ಪೀಡ್ ರನ್ನಿಂಗ್ ಮಾಡಿದ್ದಾರೆ. ಪಾದಯಾತ್ರೆ ವೇಳೆ ಕಾಂಗ್ರೆಸ್ ಧ್ವಜವನ್ನು ಡಿಕೆಶಿ ಕೈಗಿಟ್ಟ ರಾಹುಲ್, ಸುಮಾರು 100 ಮೀಟರ್‌ನಷ್ಟು ದೂರ ಒಂದೇ ಸಮನೇ ಓಡಿದ್ದಾರೆ. ಈ ವೇಳೆ ರಾಹುಲ್ ಕಾಲನ್ನು ಉಳುಕಿಸಿಕೊಂಡಿದ್ದಾರೆ. ರಾಹುಲ್ ಗಾಂಧಿ ಸ್ಪೀಡ್‌ಗೆ ಓಡದ ಡಿಕೆಶಿ ಸ್ವಲ್ಪ ದೂರ ಓಡಿ ಸುಸ್ತಾಗಿ ಬಳಿಕ ನಡೆದುಕೊಂಡು ಪಾದಯಾತ್ರೆ ಮುಂದುವರೆಸಿದ್ದಾರೆ. ಇದನ್ನು ಟ್ವೀಟ್ ಮೂಲಕ ಶೇರ್ ಮಾಡಿರುವ ಡಿ ಕೆ ಶಿವಕುಮಾರ್, ಕನಸಿನ ಬೆನ್ನತ್ತಿ ಹೋಗುವುದಾಗಿ ಬರೆದುಕೊಂಡಿದ್ದಾರೆ.
ಇಲ್ಲಿಂದ ಭಾರತ್ ಜೋಡೋ ಯಾತ್ರೆ ಚಿತ್ರದುರ್ಗ ಜಿಲ್ಲೆಯನ್ನು ಪ್ರವೇಶಿಸಲಿದೆ.

