ಚರಂಡಿ ತುಂಬೆಲ್ಲಾ ಬೀಳಿಸಿದ ಕಟ್ಟಡಗಳ ಅವಶೇಷ, ನೀರು ತುಂಬಿಕೊಂಡು ದುರ್ನಾತ: ವೈಟ್‌ಫೀಲ್ಡ್ ನಿವಾಸಿಗಳ ಅಳಲು

ಕೆಸರು, ಕೊಚ್ಚೆ, ಹೂಳು ತುಂಬಿಕೊಂಡಿದ್ದ ರಾಜಕಾಲುವೆಗಳಿಂದ ದುರ್ನಾತ ಬೀರುತ್ತಿದೆ ಎಂದು ವೈಟ್‌ಫೀಲ್ಡ್ ಮತ್ತು ಪ್ರೆಸ್ಟೀಜ್ ಓಝೋನ್ ಅಪಾರ್ಟ್‌ಮೆಂಟ್ ನಿವಾಸಿಗಳು ಆರೋಪಿಸುತ್ತಿದ್ದಾರೆ. ಮುಚ್ಚಿಹೋಗಿರುವ ಚರಂಡಿಗಳನ್ನು ತೆರವುಗೊಳಿಸದಿದ್ದಲ್ಲಿ ಭವಿಷ್ಯದಲ್ಲಿ ಮತ್ತೆ ಪ್ರವಾಹ ಉಂಟಾಗುವ ಭೀತಿ ಇಲ್ಲಿನ ನಿವಾಸಿಗಳನ್ನು ಕಾಡುತ್ತಿದೆ. 
ಕೆ ಆರ್ ಪುರಂನ ಎಸ್ ಆರ್ ಲೇ ಔಟ್ ನಲ್ಲಿ ಬಿಬಿಎಂಪಿ ಕಾರ್ಮಿಕರಿಂದ ಒತ್ತುವರಿ ತೆರವು ಕಾರ್ಯಾಚರಣೆ
ಕೆ ಆರ್ ಪುರಂನ ಎಸ್ ಆರ್ ಲೇ ಔಟ್ ನಲ್ಲಿ ಬಿಬಿಎಂಪಿ ಕಾರ್ಮಿಕರಿಂದ ಒತ್ತುವರಿ ತೆರವು ಕಾರ್ಯಾಚರಣೆ
Updated on

ಬೆಂಗಳೂರು: ಕೆಸರು, ಕೊಚ್ಚೆ, ಹೂಳು ತುಂಬಿಕೊಂಡಿದ್ದ ರಾಜಕಾಲುವೆಗಳಿಂದ ದುರ್ನಾತ ಬೀರುತ್ತಿದೆ ಎಂದು ವೈಟ್‌ಫೀಲ್ಡ್ ಮತ್ತು ಪ್ರೆಸ್ಟೀಜ್ ಓಝೋನ್ ಅಪಾರ್ಟ್‌ಮೆಂಟ್ ನಿವಾಸಿಗಳು ಆರೋಪಿಸುತ್ತಿದ್ದಾರೆ. ಮುಚ್ಚಿಹೋಗಿರುವ ಚರಂಡಿಗಳನ್ನು ತೆರವುಗೊಳಿಸದಿದ್ದಲ್ಲಿ ಭವಿಷ್ಯದಲ್ಲಿ ಮತ್ತೆ ಪ್ರವಾಹ ಉಂಟಾಗುವ ಭೀತಿ ಇಲ್ಲಿನ ನಿವಾಸಿಗಳನ್ನು ಕಾಡುತ್ತಿದೆ. 

ದುರ್ವಾಸನೆ ಸಹಿಸಲಾಗದೆ ನಮ್ಮ ಮಕ್ಕಳು ನಾವಿರುವಲ್ಲಿಗೆ ಬರಲು ನಿರಾಕರಿಸುತ್ತಿದ್ದಾರೆ ಎಂದು 75 ವರ್ಷದ ವೃದ್ಧೆ ಮನೋರಮಾ ಅಳಲು ತೋಡಿಕೊಳ್ಳುತ್ತಿದ್ದಾರೆ. ವಾಯು ಮಾಲಿನ್ಯದಿಂದ ಲೋಹದ ವಸ್ತುಗಳು ಬಣ್ಣ ಬದಲಾಗುತ್ತಿವೆ ಎಂದು ಮತ್ತೊಬ್ಬ ನಿವಾಸಿ ಪ್ರಫುಲ್ಲ ಶೆಟ್ಟಿ ಹೇಳುತ್ತಾರೆ.

ನಾನು ದಿಪಾವಳಿ ಪಾರ್ಟಿಗೆ ಫ್ರೆಂಡ್ಸ್ ನ್ನು ಬರಲು ಹೇಳಿದ್ದೇನೆ, ಆದರೆ ಇಲ್ಲಿನ ವಾಸನೆ ನನಗೆ ನಿಜಕ್ಕೂ ಭಯವಾಗುತ್ತಿದೆ. ಚರಂಡಿಯಲ್ಲಿ ನೀರು, ಕಸ ತುಂಬಿಕೊಂಡು ದುರ್ನಾತ ಬೀರಿ ಖಾಯಿಲೆ ಹರಡುವ ಸಾಧ್ಯತೆ ಇದೆ, ಭವಿಷ್ಯದಲ್ಲಿ ಪ್ರವಾಹವುಂಟಾಗುವ ಸಾಧ್ಯತೆ ಕೂಡ ಇದೆ ಎಂದು ಪ್ರೆಸ್ಟೀಜ್ ಒಜೊನ್ ಅಪಾರ್ಟ್ ಮೆಂಟ್ ನಿವಾಸಿ ಪ್ರಫುಲ್ಲ ಹೇಳುತ್ತಾರೆ.

ಕಳೆದ ವರ್ಷ ಮಾರ್ಚ್ 31ರೊಳಗೆ ಕೆಸಿ ವ್ಯಾಲಿಯಲ್ಲಿ ಕೊಳಚೆ ನೀರು ಸಂಸ್ಕರಣೆಯಾಗಲಿದೆ ಎಂದು ಬಿಡಬ್ಲ್ಯುಎಸ್‌ಎಸ್‌ಬಿ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಿದ್ದರೂ ನೀರಿನ ಗುಣಮಟ್ಟ ಸುಧಾರಿಸಿಲ್ಲ ಎಂದು ವರ್ತೂರಿನ ನಿವಾಸಿ ಜಗದೀಶ್ ರೆಡ್ಡಿ ಆರೋಪಿಸುತ್ತಾರೆ. ಪೈಪ್‌ಲೈನ್ ಕುರಿತು ಸಣ್ಣ ನೀರಾವರಿ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಅಕ್ರಮವಾಗಿ ಕೆರೆಯನ್ನು ಇಬ್ಭಾಗ ಮಾಡಿ, ಬೆಳ್ಳಂದೂರು ಮತ್ತು ವರ್ತೂರು ಕೆರೆಗಳ ರಾಜಕಾಲುವೆಗಳ ಸುತ್ತಲೂ ಕಸವನ್ನು ಸುರಿಯಲಾಗುತ್ತದೆ, ಅದು ದಕ್ಷಿಣ ಪಿನಾಕಿನಿಯಲ್ಲಿ ಕೊನೆಗೊಳ್ಳುತ್ತದೆ.

ಬಿಬಿಎಂಪಿ ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ ಅವರಲ್ಲಿ ಈ ಬಗ್ಗೆ ಕೇಳಿದರೆ, ಅಂತಹ ಸಮಸ್ಯೆಯ ಬಗ್ಗೆ ನಮ್ಮ ಗಮನಕ್ಕೆ ಬಂದಿಲ್ಲ. ಸುತ್ತಮುತ್ತಲಿನ ನೀರು ಮತ್ತು ಗಾಳಿಯ ಗುಣಮಟ್ಟವನ್ನು ಮೌಲ್ಯಮಾಪನ ಮಾಡಲು ನಿವಾಸಿಗಳು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮುಂದೆ ಹೋಗಬಹುದು ಎನ್ನುತ್ತಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com