
ಚಿತ್ರದುರ್ಗ: ಚಿತ್ರದುರ್ಗದಲ್ಲಿ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಶರಣರ ವಿರುದ್ಧ ವಿರುದ್ಧ ಪೋಕ್ಸೋ ಕಾಯ್ದೆಯಡಿ ಮತ್ತೆ ಕೇಸು ದಾಖಲಾಗಿದ್ದು ಅವರ ಪದಚ್ಯುತಿಗಾಗಿ ಒತ್ತಡ, ಆಗ್ರಹ ಹೆಚ್ಚಾಗುತ್ತಿದೆ. ಮುರುಘಾ ಪೀಠಾಧ್ಯಕ್ಷ ಬದಲಾವಣೆಗೆ ಒತ್ತಡ ಹೆಚ್ಚಿದ್ದು, ಕಳಂಕ ಹೊತ್ತ ಶ್ರೀಗಳು ಪೀಠಾಧ್ಯಕ್ಷರಾಗಿ ಮುಂದುವರಿಯಬಾರದು, ಕೇಸ್ಗಳ ಮೇಲೆ ಕೇಸ್ ದಾಖಲಾಗ್ತಿದ್ರೂ ಬದಲಾವಣೆ ಯಾಕಿಲ್ಲ ಎಂದು ಅನೇಕರು ಆಕ್ರೋಶ ಹೊರಹಾಕುತ್ತಿದ್ದಾರೆ.
ಮುರುಘಾ ಮಠದ ಬಗ್ಗೆ ಈಗ ದಿನಕ್ಕೊಂದು ವಿಷಯಗಳು ಹೊರಬರುತ್ತಿವೆ. ಈ ಮಧ್ಯೆ ಮುರುಘಾ ಶ್ರೀಗಳನ್ನು ಪೀಠದಿಂದ ಕೆಳಗಿಳಿಸಬೇಕೆಂದು ಮಠದ ಭಕ್ತರು, ಮಾಜಿ ಶಾಸಕರು, ಮಾಜಿ ಸಚಿವರ ನಿಯೋಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಿ ಒತ್ತಾಯಿಸಿದ್ದಾರೆ.
ಈ ಬಗ್ಗೆ ಇಂದು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮುರುಘಾ ಮಠದ ವಿಚಾರಗಳು, ಅಲ್ಲಿನ ಆಡಳಿತಕ್ಕೆ ಆಗುತ್ತಿರುವ ತೊಂದರೆಗಳನ್ನು ಹೇಳಿದ್ದಾರೆ. ಕಾನೂನು ಪ್ರಕಾರ ಟ್ರಸ್ಟ್ ಇದೆ, ಕಾನೂನಿನಡಿಯಲ್ಲಿ ಮುಂದಿನ ಕ್ರಮಗಳು ಏನು ಮಾಡಬೇಕೆಂದು, ಕಾನೂನು ಪ್ರಕಾರ ಏನೆಲ್ಲಾ ಅವಕಾಶ ಇದೆ ಎಂದು ಚರ್ಚೆ, ಪರಿಶೀಲನೆ ನಡೆಸುತ್ತಿದ್ದೇವೆ, ಏನೇ ಮಾಡಿದರೂ ಕಾನೂನಿನ ಚೌಕಟ್ಟಿನಡಿಯಲ್ಲಿಯೇ ಮಾಡುತ್ತೇವೆ ಎಂದರು.
ಈ ಮಧ್ಯೆ, ಮುರುಘಾ ಮಠದಲ್ಲಿ ನಿನ್ನೆ 4 ವರ್ಷದ ಹೆಣ್ಣು ಮಗುವೊಂದು ಪತ್ತೆಯಾಗಿದ್ದು ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಆ ಮಗು ದಿಢೀರನೆ ಪತ್ತೆಯಾಗಿದ್ದು ಹೇಗೆ, ಮಠದಲ್ಲಿ ತಂದು ಬಿಟ್ಟವರ್ಯಾರು ಎಂಬ ಪ್ರಶ್ನೆ ಉಂಟಾಗಿದೆ.
Advertisement