
ಬಳ್ಳಾರಿ: ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆ ವೇಳೆ ಅವಘಡವೊಂದು ಸಂಭವಿಸಿದೆ. ಬಳ್ಳಾರಿ ಗ್ರಾಮಾಂತರ ಭಾಗದ ಮೋಕ ಎಂಬಲ್ಲಿ ನಡೆದ ‘ಜೋಡೋ’ಯಾತ್ರೆಯಲ್ಲಿ(Bharat Jodo Yatra) ಕಾರ್ಯಕರ್ತರಿಗೆ ಕರೆಂಟ್ ಶಾಕ್ ಹೊಡೆದಿದೆ. ಕಬ್ಬಿಣದ ಪೈಪ್ನಲ್ಲಿ ಬಾವುಟ ಹಿಡಿದು ಹೋಗುವಾಗ ಕಬ್ಬಿಣದ ಪೈಪ್ಗೆ ವಿದ್ಯುತ್ ತಂತಿ ತಗುಲಿ ಐವರು ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆಂಟ್ ಶಾಕ್ ಹೊಡೆದಿದೆ.
ಕೂಡಲೇ ಕಾರ್ಯಕರ್ತರನ್ನು ಆ್ಯಂಬುಲೆನ್ಸ್ನಲ್ಲಿ ಮೋಕಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಿಫ್ಟ್ ಮಾಡಲಾಯಿತು. ಆಸ್ಪತ್ರೆಗೆ ಶಾಸಕ ನಾಗೇಂದ್ರ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ, ಕಾರ್ಯಧ್ಯಕ್ಷ ಸಲೀಂ ಆಹಮ್ಮದ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ನಾವೆಲ್ಲ ಆರೋಗ್ಯವಾಗಿದ್ದೇವೆ ಕರೆಂಟ್ ಹೊಡೆದದ್ದು ನಿಜ ಆದ್ರೇ ಈಗ ಆರೋಗ್ಯವಾಗಿದ್ದೇವೆ ಎಂದು ಕರೆಂಟ್ ಹೊಡಿಸಿಕೊಂಡ ಕಾರ್ಯಕರ್ತ ಸ್ಪಷ್ಟನೆ ನೀಡಿದ್ದಾರೆ.
ವಿದ್ಯುತ್ ಪ್ರವಹಿಸಿ ಗಾಯಗೊಂಡಿದ್ದ ಕಾರ್ಯಕರ್ತರಿಗೆ ಪರಿಹಾರ
ಇನ್ನು ವಿದ್ಯುತ್ ಪ್ರವಹಿಸಿ ಗಾಯಗೊಂಡಿದ್ದ ಕಾರ್ಯಕರ್ತರಿಗೆ ರಾಹುಲ್ ಗಾಂಧಿ ಪರಿಹಾರ ಘೋಷಿಸಿದ್ದಾರೆ. ಆಸ್ಪತ್ರೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಗಾಯಾಳುಗಳ ಆರೋಗ್ಯ ವಿಚಾರಿಸಿ ಐವರು ಕಾರ್ಯಕರ್ತರಿಗೆ ತಲಾ 1 ಲಕ್ಷ ಪರಿಹಾರ ಘೋಷಿಸಿದ್ದಾರೆ.
Advertisement