ಬೆಂಗಳೂರು: ಗಂಡನ ಜೊತೆ ಹೊಂದಿಕೊಂಡು ಬಾಳುವಂತೆ ಬುದ್ಧಿ ಹೇಳಿದ್ದಕ್ಕೆ ತಾಯಿಯನ್ನ ಕೊಂದ ಸಾಕುಮಗಳು?
ಬೆಂಗಳೂರು: ನಗರದ ಹೊರವಲಯದ ಸರ್ಜಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 75 ವರ್ಷದ ವೃದ್ದೆಯೊಬ್ಬರು ಕೊಲೆಯಾಗಿದ್ದಾರೆ.
ಮುನಿಯಮ್ಮ ಆಕೆಯ ಮನೆಯಲ್ಲಿಯೇ ಶವವಾಗಿ ಪತ್ತೆಯಾಗಿದ್ದು, ಸಾಕು ಮಗಳು ಚಂದ್ರಮ್ಮ ಮೇಲೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಮೃತ ಮುನಿಯಮ್ಮ ಕೋಟೆ ರಸ್ತೆ ನಿವಾಸಿಯಾಗಿದ್ದು, ತರಕಾರಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಮುನಿಯಮ್ಮ ತನ್ನ ಮಕ್ಕಳೊಂದಿಗೆ ಉತ್ತಮ ಸಂಬಂಧ ಹೊಂದಿರಲಿಲ್ಲ, ಹೀಗಾಗಿ ಅವರು ತಮ್ಮ ಸಾಕು ಮಗಳು ಚಂದ್ರಮ್ಮ ಜೊತೆ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಚಂದ್ರಮ್ಮ ಅವರು ಕೆಲವು ವರ್ಷಗಳ ಹಿಂದೆ ಮದುವೆಯಾಗಿದ್ದರು, ಆದರೆ ಪತಿಯನ್ನು ತೊರೆದು ಮುನಿಯಮ್ಮನ ಜೊತೆ ವಾಸಿಸುತ್ತಿದ್ದರು. ಇದರಿಂದ ಮನನೊಂದ ಮುನಿಯಮ್ಮ, ಚಂದ್ರಮ್ಮನನ್ನು ಬೈಯುತ್ತಿದ್ದಳು.
ಶನಿವಾರ ಕೊಲೆ ನಡೆದಿರುವುದು ಬೆಳಕಿಗೆ ಬಂದಿದ್ದು, ಘಟನೆ ನಡೆದಾಗ ತಾನು ಮನೆಯಲ್ಲಿರಲಿಲ್ಲ ಎಂದು ಹೇಳಿರುವ ಚಂದ್ರಮ್ಮ, ತಾನು ಮನೆಗೆ ಹಿಂತಿರುಗಿದಾಗ ತನ್ನ ತಾಯಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು ಎಂದು ಹೇಳಿದ್ದಾರೆ.
ಮುನಿಯಮ್ಮನಿಗೆ ಕೋಲಿನಿಂದ ತಲೆಯ ಮೇಲೆ ಹೊಡೆದಿರುವ ಗಾಯದ ಗುರುತುಗಳು ಪತ್ತೆಯಾಗಿವೆ. ಮನೆಯಲ್ಲಿದ್ದ ಯಾವುದೇ ಬೆಲೆಬಾಳುವ ವಸ್ತುಗಳು ಕಳ್ಳತನವಾಗಿಲ್ಲ. ವಿಚಾರಣೆಗಾಗಿ ಚಂದ್ರಮ್ಮನನ್ನು ಸರ್ಜಾಪುರ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ