ಸೂರ್ಯ ಗ್ರಹಣ ವೀಕ್ಷಿಸುವುದಕ್ಕಾಗಿ ಮಲ್ಪೆ ಬೀಚ್ ನಲ್ಲಿ ಸಕಲ ವ್ಯವಸ್ಥೆ 

ಅ.25 ರಂದು ಸೂರ್ಯ ಗ್ರಹಣ ಸಂಭವಿಸಲಿದ್ದು, ಆಸಕ್ತರು ಈ ಗ್ರಹಣವನ್ನು ಕಣ್ತುಂಬಿಕೊಳ್ಳುವುದಕ್ಕಾಗಿ ಉಡುಪಿಯ ಮಲ್ಪೆ ಬೀಚ್ ನಲ್ಲಿ ಸಕಲ ವ್ಯವಸ್ಥೆಗಳನ್ನೂ ಮಾಡಲಾಗಿದೆ. 
ಸೂರ್ಯ ಗ್ರಹಣ
ಸೂರ್ಯ ಗ್ರಹಣ

ಮಂಗಳೂರು: ಅ.25 ರಂದು ಸೂರ್ಯ ಗ್ರಹಣ ಸಂಭವಿಸಲಿದ್ದು, ಆಸಕ್ತರು ಈ ಗ್ರಹಣವನ್ನು ಕಣ್ತುಂಬಿಕೊಳ್ಳುವುದಕ್ಕಾಗಿ ಉಡುಪಿಯ ಮಲ್ಪೆ ಬೀಚ್ ನಲ್ಲಿ ಸಕಲ ವ್ಯವಸ್ಥೆಗಳನ್ನೂ ಮಾಡಲಾಗಿದೆ. 

ಪೂರ್ಣಪ್ರಜ್ಞಾ ಹವ್ಯಾಸಿ ಖಗೋಳಶಾಸ್ತ್ರಜ್ಞರ ಕ್ಲಬ್ (ಪಿಎಎಸಿ) ಯ ಸಂಯೋಜಕ, ಅತುಲ್ ಭಟ್ ಈ ಬಗ್ಗೆ ಮಾತನಾಡಿದ್ದು, ಸೂರ್ಯಗ್ರಹಣ ವೀಕ್ಷಿಸುವುದಕ್ಕಾಗಿ ಮಲ್ಪೆ ಬೀಚ್ ನಲ್ಲಿ ಅ.25 ರಂದು ಸಂಜೆ 5 ರಿಂದ ಸೂರ್ಯಾಸ್ತದವರೆಗೂ ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ಅವಕಾಶವಿದೆ ಎಂದು ಹೇಳಿದ್ದಾರೆ.
 
ಗ್ರಹಣ ವೀಕ್ಷಿಸುವುದಕ್ಕೆ ಉಡುಪಿ ಸೂಕ್ತ ಪ್ರದೇಶವಾಗಿದ್ದು, 5.08 ರಿಂದ 5.50 ನಿಮಿಷದವರೆಗೂ ಸೂರ್ಯ ಗ್ರಹಣ ಸಂಭವಿಸಲಿದೆ, ಮಲ್ಪೆ ಬೀಚ್ ನಲ್ಲಿ ಬೀಚ್ ಅಭಿವೃದ್ಧಿ ಸಮಿತಿಯ ವತಿಯಿಂದ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಅತುಲ್ ಭಟ್ ತಿಳಿಸಿದ್ದಾರೆ.
 
ಡಿಸಿ ಕೂರ್ಮ ಎಂ ರಾವ್, ಉಡುಪಿ ಶಾಸಕ ರಘುಪತಿ ಭಟ್, ಬಿಜೆಪಿ ನಾಯಕ ಯಶ್ ಪಾಲ್ ಸುವರ್ಣ, ಮುಖ್ಯ ಅತಿಥಿಗಳಾಗಿರಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com