ಇನ್ನು ಎಷ್ಟು ದಿನ ಮನೆಯಿಲ್ಲದೆ ಬೀದಿಯಲ್ಲೇ ಹೇಗೆ ಬದುಕಲಿ: ಸಚಿವರಿಂದ ಕಪಾಳ ಮೋಕ್ಷಕ್ಕೊಳಗಾದ 'ಆಶ್ರಯ' ಐಕಾನ್ ಕೆಂಪಮ್ಮ!
ಮೈಸೂರು: ಆಶ್ರಯ ಮನೆ ಹಂಚಿಕೆಯಲ್ಲಿ ತನ್ನ ಹೆಸರು ಕೈ ಬಿಟ್ಟಿದ್ದಕ್ಕೆ ಆಕ್ರೋಶಗೊಂಡ ಕೆಂಪಮ್ಮ ಎಂಬ ಮಹಿಳೆಗೆ ಸಚಿವ ಸೋಮಣ್ಣ ಕಪಾಳ ಮೋಕ್ಷ ಮಾಡಿದ್ದರು. ಇದಾದ ನಂತರ ಆಶ್ರಯ ಮನೆಗಾಗಿ ಹೆಣಗಾಡುತ್ತಿರುವ ಹಲವಾರು ಕುಟುಂಬಗಳಿಗೆ ಐಕಾನ್ ಆಗಿ ಕೆಂಪಮ್ಮ ಹೊರಹೊಮ್ಮಿದ್ದಾರೆ.
ಎರಡು ದಶಕಗಳಿಂದ ಮನೆಯಿಲ್ಲದೇ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆಂಪಮ್ಮ ದಿನವೂ ನೋವು ಅನುಭವಿಸುತ್ತಿದ್ದಾರೆ. ಫಲಾನುಭವಿಗಳ ಪಟ್ಟಿಯಲ್ಲಿ ತನ್ನ ಹೆಸರು ಇಲ್ಲದ್ದನ್ನು ವಿರೋಧಿಸಿ ಕೆಂಪಮ್ಮ ಸಚಿವರ ಬಳಿ ತಮ್ಮ ಅಸಮಾಧಾನ ವ್ಯಕ್ತ ಪಡಿಸಿದ್ದರು. ತಾವು ಮಾಡಿದ್ದಕ್ಕೆ ಪಶ್ಚಾತ್ತಾಪ ಪಡುವುದಿಲ್ಲ, ನನ್ನ ಇಬ್ಬರು ಮಕ್ಕಳ ಜೊತೆ ಕಳೆದ 20 ವರ್ಷಗಳಿಂದ ಬೀದಿಯಲ್ಲಿದ್ದೇನೆ, ಇರಲೊಂದು ಸೂರಿಲ್ಲದೇ ಎಷ್ಟು ದಿನ ಇರಬೇಕು ಎಂದು ಕೆಂಪಮ್ಮ ಪ್ರಶ್ನಿಸಿದ್ದಾರೆ.
ಪುಟ್ಟರಾಜ ನಾಯಕ್ ಅವರನ್ನು ಮದುವೆಯಾದ ನಂತರ ಕೆಂಪಮ್ಮ ಪತಿ ಜೊತೆ ಸಣ್ಣ ಬಾಡಿಗೆ ಮೆನಯಲ್ಲಿ ವಾಸವಾಗಿದ್ದರು. “ನನ್ನ ಪತಿ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದರು. ನಂತರ ನಾವು ಮತ್ತೆ ಬೀದಿಗೆ ಬಂದೆವು. ನನ್ನ ಪತಿ ಅವರ ಮನೆಯಲ್ಲಿ ಸಾಯುವುದು ಅವರಿಗೆ ಬೇಕಿರಲಿಲ್ಲ, ನನ್ನ ಪತಿ ಬೀದಿಯಲ್ಲಿ ಸತ್ತರು. ನಂತರ, ನಾನು ಕೃಷಿ ಕೂಲಿಯಾಗಿ ಕೆಲಸ ಮಾಡಿದೆ.
ಐದು ಕಬ್ಬಿಣದ ಸೀಟು ಖರೀದಿಸಿದೆ, ರಸ್ತೆಬದಿಯಲ್ಲಿ ಒಂದು ಸಣ್ಣ ಗುಡಿಸಲು ಹಾಕಿಕೊಂಡು ನನ್ನ ಇಬ್ಬರು ಮಕ್ಕಳೊಂದಿಗೆ ಒಂಬತ್ತು ವರ್ಷಗಳ ಕಾಲ ವಾಸಿಸುತ್ತಿದ್ದೇನೆ, ಐದು ವರ್ಷಗಳ ಹಿಂದೆ ಮನೆಗಾಗಿ ಅರ್ಜಿ ಸಲ್ಲಿಸಿದ್ದಳು. ಫಲಾನುಭವಿಗಳ ಪಟ್ಟಿಯಿಂದ ನನ್ನ ಹೆಸರು ಕಾಣೆಯಾಗಿದೆ ಎಂದು ತಿಳಿದಾಗ, ನನಗೆ ಕೋಪ ಬಂತು.
ಏನಾಗಿದೆ ಎಂಬುದನ್ನು ಸಚಿವರಿಗೆ ಮನವರಿಕೆ ಮಾಡಿಕೊಡಲು ಹೋದೆ, ನನಗೆ ಯಾರ ಬೆಂಬಲವಿಲ್ಲ, ಹೀಗಾಗಿ ನಾನು ಅಧಿಕಾರಿಗಳ ವಿರುದ್ಧ ದೂರು ನೀಡಲು ನನಗೆ ಸಾಮರ್ಥ್ಯವಿಲ್ಲ ಎಂದು ಪರಿಗಣಿಸಿದ್ದರು. ನಾನು ಆಧಾರ್ ಕಾರ್ಡ್ ಮತ್ತು ದಾಖಲೆಗಳನ್ನು ನೀಡಿಲ್ಲ ಎಂದು ಹೇಳಿದ್ದಾರೆ, ಆದರೆ ಅದೆಲ್ಲಾ ಸುಳ್ಳು ಎಂದು ಕೆಂಪಮ್ಮ ವಿವರಿಸಿದ್ದಾರೆ.
ಸ್ಥಳೀಯ ಅಧಿಕಾರಿಗಳು ನನಗೆ ಬೆಂಬಲವಿಲ್ಲ ಮತ್ತು ಅವರ ವಿರುದ್ಧ ದೂರು ನೀಡಲು ನಾನು ಚೆನ್ನಾಗಿಲ್ಲ ಎಂದು ಭಾವಿಸಿರಬಹುದು. ನನ್ನ ಆಧಾರ್ ಕಾರ್ಡ್ ಮತ್ತು ಇತರ ದಾಖಲೆಗಳನ್ನು ನಾನು ನೀಡಿಲ್ಲ ಎಂದು ಅವರು ನನಗೆ ಹೇಳಿದರು, ಅದು ನಿಜವಲ್ಲ, ”ಎಂದು ಅವರು ಹೇಳಿದರು.
ಬೇರೆಯವರೆಲ್ಲಾ ದೀಪಾವಳಿ ಆಚರಿಸುತ್ತಿದ್ದಾರೆ, ಆದರೆ ನಾವು ಇನ್ನೂ ಅಡುಗೆ ಮಾಡಿಲ್ಲ, ಸ್ನಾನ ಮಾಡಿಲ್ಲ, ಹೊಟ್ಟೆ ಪಾಡಿಗಾಗಿ ಅಕ್ಕ ಪಕ್ಕದ ಮನೆಯವರ ಬಾಗಿಲು ತಟ್ಟುತ್ತಿದ್ದೇವೆ ಎಂದು ಕೆಂಪಮ್ಮ ನೊಂದು ನುಡಿದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ