ಮೈಸೂರು: ಕೆಎಸ್ಆರ್ ಟಿಸಿ ಬಸ್ಸು ಹರಿದು 14 ವರ್ಷದ ಬಾಲಕ ಸಾವು

ಬಸ್ ಅಪಘಾತದಲ್ಲಿ ಜನರು ಪ್ರಾಣ ಕಳೆದುಕೊಳ್ಳುವ ಪ್ರಕರಣ ಮತ್ತೆ ಮುಂದುವರಿದಿದೆ. ಕೆಎಸ್​ಆರ್​ಟಿಸಿ ಬಸ್ ಹರಿದು 14 ವರ್ಷದ ಬಾಲಕ ಮೃತಪಟ್ಟ ಘಟನೆ ಮೈಸೂರು ಜಿಲ್ಲೆ ನಂಜನಗೂಡು ಬಳಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮೈಸೂರು: ಬಸ್ ಅಪಘಾತದಲ್ಲಿ ಜನರು ಪ್ರಾಣ ಕಳೆದುಕೊಳ್ಳುವ ಪ್ರಕರಣ ಮತ್ತೆ ಮುಂದುವರಿದಿದೆ. ಕೆಎಸ್​ಆರ್​ಟಿಸಿ ಬಸ್ ಹರಿದು 14 ವರ್ಷದ ಬಾಲಕ ಮೃತಪಟ್ಟ ಘಟನೆ ಮೈಸೂರು ಜಿಲ್ಲೆ ನಂಜನಗೂಡು ಬಳಿ ನಡೆದಿದೆ.

ಹೆಚ್​ಡಿ ಕೋಟೆ ತಾಲ್ಲೂಕು ನಂಜೀಪುರ ಗ್ರಾಮದ ಪ್ರಜ್ವಲ್ ಎಂಬ 14 ವರ್ಷದ ಬಾಲಕ ಮೃತಪಟ್ಟಿದ್ದಾನೆ. ತಂದೆಯ ಜೊತೆ ಬಸ್ ಹತ್ತುವಾಗ ಕೆಳಗೆ ಬಿದ್ದು ಬಸ್ ಚಕ್ರಕ್ಕೆ ಸಿಲುಕಿ ದುರ್ಘಟನೆ ಸಂಭವಿಸಿದೆ. ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಣ್ಣೆದೆರೇ ಮಗನನ್ನು ಕಳೆದುಕೊಂಡ ಬಾಲಕನ ತಂದೆಯ ಆಕ್ರಂದನ ಕಲ್ಲು ಹೃದಯಿಗಳನ್ನು ಸಹ ಕರುಳು ಹಿಂಡುವಂತಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com