ಅಕ್ಟೋಬರ್‌ನಲ್ಲಿ ನೈತಿಕ ಶಿಕ್ಷಣ ಕುರಿತು ಸಮಿತಿ ರಚನೆ: ಸಚಿವ ಬಿ.ಸಿ.ನಾಗೇಶ್

ನೈತಿಕ ಶಿಕ್ಷಣ ವಿಷಯದಲ್ಲಿ ಭಗವದ್ಗೀತೆ ಅಳವಡಿಸಲಾಗುತ್ತಿದೆ ಎಂಬ ವಿವಾದದ ಹೊರತಾಗಿ, ಪ್ರಸ್ತಕ ಶೈಕ್ಷಣಿಕ ವರ್ಷದಲ್ಲೇ ನೈತಿಕ ಶಿಕ್ಷಣವನ್ನು ಹೇಗೆ ಜಾರಿಗೆ ತರಬೇಕು ಎಂಬುದರ ಕುರಿತು ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.
ಬಿ.ಸಿ ನಾಗೇಶ್
ಬಿ.ಸಿ ನಾಗೇಶ್

ಬೆಂಗಳೂರು: ನೈತಿಕ ಶಿಕ್ಷಣ ವಿಷಯದಲ್ಲಿ ಭಗವದ್ಗೀತೆ ಅಳವಡಿಸಲಾಗುತ್ತಿದೆ ಎಂಬ ವಿವಾದದ ಹೊರತಾಗಿ, ಪ್ರಸ್ತಕ ಶೈಕ್ಷಣಿಕ ವರ್ಷದಲ್ಲೇ ನೈತಿಕ ಶಿಕ್ಷಣವನ್ನು ಹೇಗೆ ಜಾರಿಗೆ ತರಬೇಕು ಎಂಬುದರ ಕುರಿತು ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಈ ಸಂಬಂಧ ಅಕ್ಟೋಬರ್‌ನಲ್ಲಿ ಸಮಿತಿ ರಚಿಸಲು ನಿರ್ಧರಿಸಿದೆ.

ನೈತಿಕ ಶಿಕ್ಷಣದ ಬಗ್ಗೆ ಶಿಫಾರಸು ಮಾಡುವ ತಜ್ಞರ ಸಮಿತಿಯನ್ನು ನಾವು ಅಕ್ಟೋಬರ್ ನಲ್ಲಿ ರಚಿಸುತ್ತೇವೆ. ಈ ಸಮಿತಿಯ ವರದಿಯ ಆಧಾರದ ಮೇಲೆ, ನೈತಿಕ ಶಿಕ್ಷಣದ ಅಡಿಯಲ್ಲಿ ಏನನ್ನು ಕಲಿಸಬೇಕು ಎಂಬುದರ ಬಗ್ಗೆ ನಾವು ನಿರ್ಧರಿಸುತ್ತೇವೆ ಎಂದು ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಅವರು ಹೇಳಿದ್ದಾರೆ.

ನೈತಿಕ ಶಿಕ್ಷಣದ ಕುರಿತು ಅಕ್ಟೋಬರ್ ಮೊದಲ ವಾರದಲ್ಲಿ ವಿಚಾರ ಸಂಕಿರಣ ನಡೆಸಿ ಎಲ್ಲವನ್ನೂ ಅಂತಿಮಗೊಳಿಸಲಾಗುವುದು. ಇದರ ಫಲಿತಾಂಶದ ಮೇಲೆ, ತರಗತಿಗಳಲ್ಲಿ ಏನು ಕಲಿಸಬೇಕು ಎಂಬುದನ್ನು ನಿರ್ಧರಿಸಲು ಸಮಿತಿಯನ್ನು ರಚಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಈ ಹಿಂದಿನ ವರ್ಷಗಳಲ್ಲಿ ನೈತಿಕ ಶಿಕ್ಷಣವನ್ನು ಕಲಿಸಲಾಗುತ್ತಿತ್ತು. ಶಿಕ್ಷಣದ ಮುಖ್ಯ ಉದ್ದೇಶ ಮಗುವಿನ ವ್ಯಕ್ತಿತ್ವ ನಿರ್ಮಾಣವಾಗಿದೆ. ಪೋಷಕರು ಸಹ ನೈತಿಕ ಶಿಕ್ಷಣದ ತರಗತಿಗಳನ್ನು ಬಯಸುತ್ತಾರೆ ಎಂದು ಸಚಿವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com