ಆರ್ ಎಸ್ಎಸ್ ಮುಖಂಡನ ಕಾರಿನ ಮೇಲೆ ಬೆದರಿಕೆ ಸಂದೇಶ
ರಾಜ್ಯ
ಚಿಕ್ಕಮಗಳೂರು: ಆರ್ ಎಸ್ಎಸ್ ಮುಖಂಡನ ಕಾರಿನ ಮೇಲೆ ಕೊಲೆ ಬೆದರಿಕೆ ಸಂದೇಶ
ಆರ್ ಎಸ್ ಎಸ್ ಮುಖಂಡನ ಕಾರಿನ ಮೇಲೆ ಕಿಲ್ ಯೂ ಬರಹವನ್ನು ಕಿಡಿಗೇಡಿಗಳು ಬರೆದಿದ್ದಾರೆ.
ಚಿಕ್ಕಮಗಳೂರು: ಆರ್ ಎಸ್ ಎಸ್ ಮುಖಂಡನ ಕಾರಿನ ಮೇಲೆ ಕಿಲ್ ಯೂ ಬರಹವನ್ನು ಕಿಡಿಗೇಡಿಗಳು ಬರೆದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಪಟ್ಟಣದಲ್ಲಿರುವ ಲಕ್ಷ್ಮೀಶನಗರದಲ್ಲಿ ಜಿಲ್ಲಾ ಸಂಯೋಜಕ ಡಾ.ಶಶಿಧರ್ ಅವರ ಕಾರಿನ ಮೇಲೆ ಈ ಬರಹ ಬರೆಯಲಾಗಿದೆ.
ಡಾ. ಶಶಿಧರ್ ಅವರು ತಮ್ಮ ಮನೆಯ ಮುಂದೆ ಕಾರು ನಿಲ್ಲಿಸಿದ್ದಾಗ ಕಿಡಿಗೇಡಿಗಳು ಕಾರಿನ ನಾಲ್ಕೂ ಚಕ್ರಗಳ ಗಾಳಿಯನ್ನು ತೆಗೆದು ‘ಕಿಲ್ ಯೂ’ ಎಂದಷ್ಟೇ ಅಲ್ಲದೇ ಜಿಹಾದ್ ಶಬ್ದ ಹಾಗೂ ಅಶ್ಲೀಲ ಪದಗಳನ್ನು ಎಂದು ಬರೆದಿದ್ದಾರೆ. ಸ್ಥಳಕ್ಕೆ ಕಡೂರು ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ನನ್ನ ಕಾರಿನ ಮೇಲೆ ಕೆಲ ಜಿಹಾದಿಗಳು ಬೆದರಿಕೆ ಬರಹ ಬರೆದಿದ್ದಾರೆ. ಇದು ಹಿಂದೂ ಕಾರ್ಯಕರ್ತರ ಆತ್ಮಸ್ಥೈರ್ಯ ಕುಗ್ಗಿಸುವ ಯತ್ನ, ಸೂಕ್ತ ಭದ್ರತೆ ನೀಡುವಂತೆ ಪೊಲೀಸರಿಗೆ ಮನವಿ ಮಾಡಿರುವೆ ಎಂದು ಡಾ. ಶಶಿಧರ್ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ