ಆನ್ ಲೈನ್ ನಲ್ಲಿ ಮದ್ಯ ಮಾರಾಟ: ಪ್ರಸ್ತಾವನೆ ಕೈ ಬಿಡಲು ಸರ್ಕಾರದ ನಿರ್ಧಾರ

ಆನ್ ಲೈನ್ ಮಾರಾಟ ವ್ಯವಸ್ಥೆಯಿಂದ ಅಬಕಾರಿ ಇಲಾಖೆಗೆ ನಿರೀಕ್ಷಿತ ಮಟ್ಟದಲ್ಲಿ ಆದಾಯ ಬರುವುದಿಲ್ಲ, ಜೊತೆಗೆ ಹಲವು ಮದ್ಯದಂಗಡಿಗಳಲ್ಲಿ ಸಿಬ್ಬಂದಿ ತಮ್ಮ ನೌಕರಿ ಕಳೆದುಕೊಳ್ಳುತ್ತಾರೆ ಎಂದು ಹೇಳಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ರಾಜ್ಯಾದ್ಯಂತ ಆನ್ ಲೈನ್ ನಲ್ಲಿ ಮದ್ಯಮಾರಾಟ ಮಾಡುವುದನ್ನು ನಿಷೇಧಿಸಲು ಸರ್ಕಾರ ತೀರ್ಮಾನಿಸಿದೆ.

ಆನ್ ಲೈನ್ ಮಾರಾಟ ವ್ಯವಸ್ಥೆಯಿಂದ ಅಬಕಾರಿ ಇಲಾಖೆಗೆ ನಿರೀಕ್ಷಿತ ಮಟ್ಟದಲ್ಲಿ ಆದಾಯ ಬರುವುದಿಲ್ಲ, ಜೊತೆಗೆ ಹಲವು ಮದ್ಯದಂಗಡಿಗಳಲ್ಲಿ ಸಿಬ್ಬಂದಿ ತಮ್ಮ ನೌಕರಿ ಕಳೆದುಕೊಳ್ಳುತ್ತಾರೆ ಎಂದು ಹೇಳಲಾಗಿದೆ.

ಆನ್ ಲೈನ್ ನಲ್ಲಿ ಮದ್ಯ ಮಾರಾಟ ಪ್ರಸ್ತಾವನೆಯನ್ನು ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಮಾಡಿತ್ತು, ಆ ವೇಳೆ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದವು.

ಅದಾದ ನಂತರ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಮತ್ತೆ ಪ್ರಸ್ತಾಪ ಮಾಡಲಾಯಿತು,  ಆನ್‌ಲೈನ್ ಮದ್ಯ ಮಾರಾಟದ ಕಾರ್ಯಸಾಧ್ಯತೆಯನ್ನು ಅಧ್ಯಯನ ಮಾಡಲು ವಿವಿಧ ರಾಜ್ಯಗಳಿಗೆ ತನ್ನ ಅಧಿಕಾರಿಗಳನ್ನು ಕಳುಹಿಸುವಂತೆ ಅಂದಿನ ಸರ್ಕಾರ ಅಬಕಾರಿ ಇಲಾಖೆಗೆ ಸೂಚಿಸಿತ್ತು.

ಕೋವಿಡ್ ಸಾಂಕ್ರಾಮಿಕ ರೋಗದ ಸಮಯದಲ್ಲಿ ಸಹ, ಮದ್ಯದ ಮಳಿಗೆಗಳಲ್ಲಿ ಜನಸಂದಣಿಯನ್ನು ತಪ್ಪಿಸಲು ಸರ್ಕಾರವು ಆನ್‌ಲೈನ್ ಮಾರಾಟವನ್ನು ಪರಿಚಯಿಸಸಲು ಬಯಸಿತ್ತು.  ರಾಜ್ಯಾದ್ಯಂತ 14,000 ಕ್ಕೂ ಹೆಚ್ಚು ಮದ್ಯದಂಗಡಿಗಳ ಲೈಸೆನ್ಸ್ ದಾರರಿದ್ದಾರೆ.. ಸಾವಿರಾರು ಕುಟುಂಬಗಳು ಈ ಮಳಿಗೆಗಳನ್ನು ಅವಲಂಬಿಸಿವೆ ಎಂದು ಅಬಕಾರಿ ಖಾತೆ ಸಚಿವ ಕೆ.ಗೋಪಾಲಯ್ಯ ಹೇಳಿದ್ದಾರೆ.

ನಾವು ಆನ್ ಲೈನ್ ಮದ್ಯ ಮಾರಾಟಕ್ಕೆ ಅನುಮತಿ ನೀಡಿದರೇ ವ್ಯಾಪಾರದ ಮೇಲೆ ಹೊಡೆತ ಬೀಳುವ ಸಾಧ್ಯತೆಯಿದೆ. ಏಕೆಂದರೇ ಅನೇಕ ಗ್ರಾಹಕರು ಮನೆ ಬಾಗಿಲಿಗೆ ಮದ್ಯ ಪೂರೈಸಲು ಬಯಸುತ್ತಾರೆ. ಈ ಕಾರಣಕ್ಕಾಗಿಯೇ ನಾವು ಪ್ರಸ್ತಾವನೆಯನ್ನು ರದ್ಧುಗೊಳಿಸುತ್ತಿದ್ದೇವೆ ಎಂದಿದ್ದಾರೆ.

ಕಡಿಮೆ ಆದಾಯವಿರುವ ಜನರು ವಿಶೇಷವಾಗಿ ಕೊಳಗೇರಿಯಲ್ಲಿ ವಾಸಿಸುವವರಿಗೆ ಆನ್ ಲೈನ್ ಸೌಲಭ್ಯ ಪಡೆಯಲು ಸಾಧ್ಯವಾಗುವುದಿಲ್ಲ ಹೀಗಾಗಿ ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ಅವರು ತಮ್ಮ ಬಜೆಟ್ ಭಾಷಣದಲ್ಲಿ 2022-23ನೇ ಸಾಲಿನಲ್ಲಿ `29,000 ಕೋಟಿ ಅಬಕಾರಿ ಆದಾಯದ ಗುರಿ ಹೊಂದಿರುವುದಾಗಿ ಹೇಳಿದ್ದರು. ಆರು ತಿಂಗಳಲ್ಲಿ ಅಬಕಾರಿ ಇಲಾಖೆ ಈಗಾಗಲೇ 14,400 ಕೋಟಿ ಆದಾಯ ಗಳಿಸಿದೆ ಎಂದು ಗೋಪಾಲಯ್ಯ ತಿಳಿಸಿದ್ದಾರೆ.ನಾವು ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಗುರಿಯನ್ನು ಸಾಧಿಸುತ್ತೇವೆ" ಎಂದು ಅವರು ಹೇಳಿದರು.

ಇನ್ನು ಕೆಲವೇ ತಿಂಗಳುಗಳಲ್ಲಿ ವಿಧಾನಸಭೆ ಚುನಾವಣೆ ಎದುರಾಗಲಿದೆ, ಹೀಗಾಗಿ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡರೂ ಮುಂದಿನ ಚುನಾವಣೆ ಮೇಲೆ ಪರಿಣಾಮ ಬೀರಲಿದೆ, ಹೀಗಾಗಿ, ಸರ್ಕಾರ ಎಚ್ಚರಿಕೆಯ ಹೆಜ್ಜೆ ಇಡಬೇಕೆಂದು ಅಬಕಾರಿ ಇಲಾಖೆ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com