ನೀತಿ ಆಯೋಗ ಮಾದರಿಯಲ್ಲಿ ಕರ್ನಾಟಕ ಸರ್ಕಾರದಿಂದ ಎಸ್ಐಟಿಕೆ ರಚನೆ

ಕರ್ನಾಟಕ ರಾಜ್ಯ ಪರಿವರ್ತನೆ ಸಂಸ್ಥೆ (SITK)ಯನ್ನು ರಚಿಸಲು ರಾಜ್ಯ ಸರ್ಕಾರ ಕೊನೆಗೂ ಆದೇಶ ಹೊರಡಿಸಿದೆ. ಇದು ಕೇಂದ್ರ ಸರ್ಕಾರದ ನೀತಿ ಆಯೋಗದ ಮಾದರಿಯಲ್ಲಿ ಕರ್ನಾಟಕದಲ್ಲಿರುವ ರಾಜ್ಯ ನೀತಿ ಮತ್ತು ಯೋಜನೆ ಆಯೋಗವನ್ನು ಬದಲಾಯಿಸಲಿದೆ.
ಕೇಂದ್ರ ನೀತಿ ಆಯೋಗ
ಕೇಂದ್ರ ನೀತಿ ಆಯೋಗ

ಬೆಂಗಳೂರು: ಕರ್ನಾಟಕ ರಾಜ್ಯ ಪರಿವರ್ತನೆ ಸಂಸ್ಥೆ (SITK)ಯನ್ನು ರಚಿಸಲು ರಾಜ್ಯ ಸರ್ಕಾರ ಕೊನೆಗೂ ಆದೇಶ ಹೊರಡಿಸಿದೆ. ಇದು ಕೇಂದ್ರ ಸರ್ಕಾರದ ನೀತಿ ಆಯೋಗದ ಮಾದರಿಯಲ್ಲಿ ಕರ್ನಾಟಕದಲ್ಲಿರುವ ರಾಜ್ಯ ನೀತಿ ಮತ್ತು ಯೋಜನೆ ಆಯೋಗವನ್ನು ಬದಲಾಯಿಸಲಿದೆ.

ನವ ಭಾರತಕ್ಕೆ ಅನುಗುಣವಾಗಿ ನವ ಕರ್ನಾಟಕ ರೂಪಿಸಲು ಅದನ್ನು ಸಾಕಾರಗೊಳಿಸಲು ಹೊಸ ಸಂಸ್ಥೆಯನ್ನು ರಚಿಸಲಾಗುತ್ತದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಸ್ ಐಟಿಕೆಗೆ ಅಧ್ಯಕ್ಷರಾಗಿರುತ್ತಾರೆ. ಸರ್ಕಾರದ ಯೋಜನೆಗಳಲ್ಲಿ ತಜ್ಞರಾಗಿರುವ ಒಬ್ಬರು ಉಪಾಧ್ಯಕ್ಷರಾಗಿರುತ್ತಾರೆ.

ಎಸ್ ಐಟಿಕೆಯ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ರಾಜ್ಯ ಸರ್ಕಾರ ವರ್ಷಕ್ಕೆ 150 ಕೋಟಿ ರೂಪಾಯಿ ಒದಗಿಸಲಿದೆ. ಯೋಜನೆ, ಆರ್ಥಿಕತೆ, ಸಮಾಜ ಕಲ್ಯಾಣ, ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಆರೋಗ್ಯ, ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ಉದ್ಯೋಗ ಮತ್ತು ಶುದ್ಧ ಇಂಧನ ವಿಭಾಗಗಳಲ್ಲಿ ಸಲಹೆಗಾರರಾಗಿ ಎಂಟು ಮಂದಿ ತಜ್ಞರಿರುತ್ತಾರೆ.

ಯೋಜನೆ, ಕಾರ್ಯಕ್ರಮ ಅನುಷ್ಠಾನ ಮತ್ತು ಅಂಕಿಅಂಶಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಎಸ್‌ಐಟಿಕೆಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಸಲಹೆಗಾರರಾಗಿರುತ್ತಾರೆ. ಬಡತನ ನಿರ್ಮೂಲನೆ, ಆದಾಯ, ಆಹಾರ ಮತ್ತು ಪೋಷಣೆ, ಸೇವೆಗಳ ಸರಳೀಕರಣ, ಸ್ವಚ್ಛ ಮತ್ತು ಹಸಿರು ಇಂಧನ ಮತ್ತು ಇತರ ವಿಷಯಗಳಲ್ಲಿ ತಜ್ಞರನ್ನು ನೇಮಿಸಲಾಗುತ್ತದೆ.

ರಾಜ್ಯ ಸರ್ಕಾರವು IISc, IIMB ಮತ್ತು NLSIU ಸೇರಿದಂತೆ 14 ಹೆಸರಾಂತ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳನ್ನು ಮಧ್ಯಸ್ಥಗಾರರನ್ನಾಗಿ ನಾಮನಿರ್ದೇಶನ ಮಾಡುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com