ಮೈಸೂರು ಅರಮನೆ ಮುಂಭಾಗ ಗಜಪಡೆಗಳಿಗೆ ಅದ್ದೂರಿ ಸ್ವಾಗತ
ರಾಜ್ಯ
2022ರ ಮೈಸೂರು ದಸರಾ ಮಹೋತ್ಸವ: ಅರಮನೆ ಆವರಣದಲ್ಲಿ ಗಜಪಡೆಗೆ ಸಾಂಪ್ರದಾಯಿಕ ಸ್ವಾಗತ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಆಚರಣೆಗೆ ಮುನ್ನುಡಿ ಬರೆದಾಗಿದೆ. ಮೊನ್ನೆ ಭಾನುವಾರ ಜಂಬೂ ಸವಾರಿಯಲ್ಲಿ ಚಾಮುಂಡಿ ದೇವಿಯನ್ನು ಹೊತ್ತೊಯ್ಯುವ ಮತ್ತು ಅದರ ಹಿಂದೆ ಸಾಗುವ ಗಜಪಡೆಗಳಿಗೆ ಕಾಡಿನಿಂದ ಪೂಜೆ ನೆರವೇರಿಸಿ ನಾಡಿನತ್ತ ಕಳುಹಿಸಿದ್ದ ಗಜಪಡೆಗಳು ಇಂದು ಬುಧವಾರ ಮೈಸೂರು ಪುರವನ್ನು ಪ್ರವೇಶಿಸಿವೆ.
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಆಚರಣೆಗೆ ಮುನ್ನುಡಿ ಬರೆದಾಗಿದೆ. ಮೊನ್ನೆ ಭಾನುವಾರ ಜಂಬೂ ಸವಾರಿಯಲ್ಲಿ ಚಾಮುಂಡಿ ದೇವಿಯನ್ನು ಹೊತ್ತೊಯ್ಯುವ ಮತ್ತು ಅದರ ಹಿಂದೆ ಸಾಗುವ ಗಜಪಡೆಗಳಿಗೆ ಕಾಡಿನಿಂದ ಪೂಜೆ ನೆರವೇರಿಸಿ ನಾಡಿನತ್ತ ಕಳುಹಿಸಿದ್ದ ಗಜಪಡೆಗಳು ಇಂದು ಬುಧವಾರ ಮೈಸೂರು ಪುರವನ್ನು ಪ್ರವೇಶಿಸಿವೆ.
ಇಂದು ಮೈಸೂರು ಅರಮನೆ ಮುಂದೆ ಗಜಪಡೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಸ್ವಾಗತಿಸಿದರು.ಅರಮನೆಯ ಆನೆ ಬಾಗಿಲಲ್ಲಿ ಅಂಬಾರಿ ಹೊರಲಿರುವ ಅಭಿಮನ್ಯು ಸೇರಿದಂತೆ 9 ಆನೆಗಳಿಗೆ ಪೂಜೆ ಸಲ್ಲಿಸಿದ ಸಚಿವರು, ಬಳಿಕ ಕಾವಾಡಿಗರು ಮತ್ತು ಮಾವುತರಿಗೆ ಅಗತ್ಯ ಸಾಮಗ್ರಿಗಳನ್ನು ವಿತರಿಸಿದರು.
ಅರಮನೆ ಆವರಣದಲ್ಲಿ ಅಂಬಾರಿ ಹೊರಲಿರುವ ಅಭಿಮನ್ಯು, ಭೀಮ, ಮಹೇಂದ್ರ, ಗೋಪಾಲಸ್ವಾಮಿ, ಅರ್ಜುನ, ಧನಂಜಯ, ಕಾವೇರಿ, ಚೈತ್ರ, ಲಕ್ಷ್ಮಿ ಆನೆಗಳಿಗೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ ಗಜಪಡೆಯನ್ನು ಸ್ವಾಗತಿಸಲಾಯಿತು ಎಂದು ಸಚಿವರು ತಿಳಿಸಿದ್ದಾರೆ.

