ಚಿತ್ರದುರ್ಗ: 65 ವರ್ಷಗಳ ನಂತರ 126 ಅಡಿ ದಾಟಿದ ವಾಣಿ ವಿಲಾಸ ಸಾಗರ ಜಲಾಶಯದ ನೀರಿನ ಮಟ್ಟ!

ಮಧ್ಯ ಕರ್ನಾಟಕದ ಏಕೈಕ ಜಲಾಶಯ ವಾಣಿ ವಿಲಾಸ ಸಾಗರದ ನೀರಿನ ಮಟ್ಟ ಗುರುವಾರ 126.50 ಅಡಿ ದಾಟಿದೆ. 65 ವರ್ಷಗಳ ನಂತರ ಈ ಜಲಾಶಯದಲ್ಲಿ ಇಷ್ಟು ಅಡಿ ನೀರು ತುಂಬಿದೆ. 1957 ರಲ್ಲಿ ಕೊನೆಯದಾಗಿ ಇಷ್ಟು ಪ್ರಮಾಣದ ನೀರು ಸಂಗ್ರಹವಾಗಿತ್ತು.
ವಾಣಿ ವಿಲಾಸ ಸಾಗರ ಜಲಾಶಯ
ವಾಣಿ ವಿಲಾಸ ಸಾಗರ ಜಲಾಶಯ

ಚಿತ್ರದುರ್ಗ: ಮಧ್ಯ ಕರ್ನಾಟಕದ ಏಕೈಕ ಜಲಾಶಯ ವಾಣಿ ವಿಲಾಸ ಸಾಗರದ ನೀರಿನ ಮಟ್ಟ ಗುರುವಾರ 126.50 ಅಡಿ ದಾಟಿದೆ. 65 ವರ್ಷಗಳ ನಂತರ ಈ ಜಲಾಶಯದಲ್ಲಿ ಇಷ್ಟು ಅಡಿ ನೀರು ತುಂಬಿದೆ. 1957 ರಲ್ಲಿ ಕೊನೆಯದಾಗಿ ಇಷ್ಟು ಪ್ರಮಾಣದ ನೀರು ಸಂಗ್ರಹವಾಗಿತ್ತು.

ಭದ್ರಾ ಮೇಲ್ದಂಡೆ ಯೋಜನೆಯಿಂದ ನೀರು ಹರಿಸುವುದರ ಜೊತೆಗೆ ಮಲೆನಾಡು ಪ್ರದೇಶ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಇತ್ತೀಚೆಗೆ ಎಡೆಬಿಡದೆ ಸುರಿಯುತ್ತಿರುವ ಮಳೆ ಅಣೆಕಟ್ಟಿನ ನೀರಿನ ಮಟ್ಟದಲ್ಲಿ ಹೆಚ್ಚಾಗಲು ಕಾರಣವಾಗಿದೆ.ಇದರಿಂದ ಅಂತರ್ಜಲವೂ ವೃದ್ಧಿಯಾಗಿದೆ. ಕೆಲ ದಿನಗಳಿಂದ ಸ್ಥಗಿತಗೊಂಡಿದ್ದ ಬೋರ್‌ವೆಲ್‌ಗಳು ನೀರನ್ನು ಪಂಪ್ ಮಾಡಲು ಪ್ರಾರಂಭಿಸಿವೆ, ಇದರಿಂದಾಗಿ ಬರಪೀಡಿತ ಪ್ರದೇಶ ಜಲಸಮೃದ್ಧವಾಗಿದೆ.

ಭದ್ರ ಮೇಲ್ದಂಡೆ ಯೋಜನೆಯಿಂದ ನೀರನ್ನು ಹರಿಸುತ್ತಿರುವುದರಿಂದ 30 ಟಿಎಂಸಿ ಮತ್ತು 130 ಅಡಿ ಎತ್ತರದ ವಾಣಿ ವಿಲಾಸ ಜಲಾಶಯದ ನೀರಿನ ಮಟ್ಟ ಕಳೆದ ನಾಲ್ಕು ವರ್ಷಗಳಿಂದ 100 ಅಡಿ ದಾಟುತ್ತಿದೆ. 1911ರಲ್ಲಿ ಮೊದಲ ಬಾರಿಗೆ 100 ಅಡಿ ದಾಟಿತ್ತು. 2021ರಲ್ಲಿಯೂ ನೀರಿನ ಮಟ್ಟ 100 ಅಡಿ ಮೀರಿತ್ತು. ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ 1897ರಲ್ಲಿ ಈ ಜಲಾಶಯ ನಿರ್ಮಾಣವನ್ನು ಆರಂಭಿಸಲಾಗಿತ್ತು. 1932ರಲ್ಲಿ ಮೊದಲ ಬಾರಿಗೆ ಜಲಾಶಯದಲ್ಲಿ ಗರಿಷ್ಠ 125. 50 ಅಡಿ ನೀರು ಸಂಗ್ರಹವಾಗಿತ್ತು.

1933 ರಲ್ಲಿ (125. 25 ಅಡಿ) 1934 (130) ಅಡಿ ನೀರು ಸಂಗ್ರಹವಾಗಿತ್ತು. ಈ ಬಾರಿಯೂ ನೀರಿನ ಮಟ್ಟ 130 ಅಡಿ ದಾಟುವ ಸಾಧ್ಯತೆಯಿದೆ ಎಂದು ಜಲಾಶಯ ನಿರ್ವಹಣಾ ಪ್ರಾಧಿಕಾರದ ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿವೆ. ಒಂದು ವೇಳೆ ಜಲಾಶಯ ಭರ್ತಿಯಾದರೆ ನೀರನ್ನು ನದಿಗೆ ಹರಿಯ ಬಿಡಲಾಗುತ್ತದೆ. ಆದಾಗ್ಯೂ, ಇದು ಜಲಾಶಯದ ಒಟ್ಟು ಒಳಹರಿವಿನ ಮೇಲೆ ಅವಲಂಬಿತವಾಗಿದೆ. ಗುರುವಾರ ಜಲಾಶಯಕ್ಕೆ 3,043 ಕ್ಯೂಸೆಕ್ ಒಳ ಹರಿವಿತ್ತು. ಹೊರ ಹರಿವು ಇರಲಿಲ್ಲ. ಈ ಜಲಾಶಯ ನೀರನ್ನು ಹಿರಿಯೂರು, ಚಳ್ಳಕೆರೆ, ನಾಯಕನಹಟ್ಟಿಯ ಸೈನ್ಸ್ ಸಿಟಿಯ ಕುಡಿಯುವ ನೀರಿನ ಮೂಲವಾಗಿದೆ. ಜಲಾಶಯ ಭರ್ತಿಯಾಗಿರುವುದು ಒಳ್ಳೆಯ ಸಂಕೇತ ಎನ್ನುತ್ತಾರೆ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್. 

ಶೀಘ್ರದಲ್ಲಿಯೇ ಗಂಗಾ ಪೂಜೆ ನೆರವೇರಿಸಲಾಗುವುದು, ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಲು ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದ್ದು, ತ್ವರಿತಗತಿಯಲ್ಲಿ ಕಾಮಗಾರಿ ನಡೆಯಲಿದ ಎಂದು ಅವರು ತಿಳಿಸಿದ್ದಾರೆ.  ವಾಣಿ ವಿಲಾಸ ಸಾಗರ ಜಲಾಶಯ ಭರ್ತಿಯಾದರೆ ಜಲಾಶಯದಿಂದ ನೀರನ್ನು ಹೊರ ಬಿಡುವುದರಿಂದ ಹಿರಿಯೂರು, ಚಳ್ಳಕೆರೆ ಭಾಗದಲ್ಲಿನ 11 ಹಳ್ಳಿಗಳಿಗೆ ಸಮಸ್ಯೆಯಾಗಲಿದ್ದು, ಜನ, ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಅವರು ಸೂಚಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com