
ಸಾಂಕೇತಿಕ ಚಿತ್ರ
ನವದೆಹಲಿ: ಕೊಡಗಿಗೆ ಆಗಮಿಸಿದ್ದ, ಪ್ರವಾಸಿಗರ ಮೇಲೆ ಹಿಂದೂ ಯುವಕರಿದ್ದ ಗುಂಪು ದಾಳಿ ನಡೆಸಿದೆ. ಮಡಿಕೇರಿಯ ಮಂಡಲಪಟ್ಟಿ ಪ್ರವಾಸ ತಾಣದಲ್ಲಿ ಈ ಘಟನೆ ನಡೆದಿದೆ.
ಅನಾಮಿಕ ದುಷ್ಕರ್ಮಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ನಂದಾ ಕಿಶನ್, ಸಮನ್ ಸಾಜಿದ್, ಶಂಶೀರ್ ಹಾಗೂ ಇಬ್ಬರು ಯುವತಿಯರು ಓರ್ವ ಹಿಂದೂ ಯುವತಿ ಮಡಿಕೇರಿಯ ಪ್ರವಾಸಕ್ಕೆ ಹೋಗಿದ್ದರು. ಯುವಕರು ಪ್ರವಾಸಕ್ಕೆ ತೆರಳಲು ಪೋಷಕರಿಂದಲೂ ಅನುಮತಿ ಪಡೆದಿದ್ದರು. ಪ್ರವಾಸ ಮುಗಿಸಿ ವಾಪಸ್ಸಾಗಲು ಕಾರಿನ ಬಳಿ ಬಂದಾಗ ಅವರನ್ನು ಐವರು ಯುವಕರ ಗುಂಪು ತಡೆದಿದೆ.
ಹಿಂದೂ ಯುವತಿಯೊಬ್ಬರು ಇಬ್ಬರು ಮುಸ್ಲಿಮ್ ಯುವಕರೊಂದಿಗೆ ಪ್ರವಾಸಕ್ಕೆ ಬಂದಿದ್ದರ ವಿರುದ್ಧ ಯುವಕರ ಗುಂಪು ಆಕ್ಷೇಪ ವ್ಯಕ್ತಪಡಿಸಿದೆ. ತಕ್ಷಣವೇ 5 ಯುವಕರೊಂದಿಗೆ ಇನ್ನೂ ಒಂದಷ್ಟು ಮಂದಿ ಸೇರಿಕೊಂಡು ಸಮನ್, ಶಂಶೀರ್ ವಿರುದ್ಧ ದಾಳಿ ನಡೆಸಿದ್ದಾರೆ, ಇಬ್ಬರು ಯುವತಿಯರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲಾಗಿದ್ದು ದಾಳಿಯ ಘಟನೆಯನ್ನು ಹೆಮ್ಮೆಯಿಂದ ಸಾಮಾಜಿಕ ಜಾಲತಾಣದಲ್ಲಿ ವಿವರಿಸಲಾಗಿದೆ.
ನಂದಾ ಕಿಶನ್ ಅವರು ಅನಾಮಿಕ ದುಷ್ಕರ್ಮಿಗಳ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ.