“ದೇವರಾಜ್ ಅರಸು ನಮಗೆ‌ ಬಹು ದೊಡ್ಡ ಪ್ರೇರಣೆ”: ಸಿಎಂ ಬಸವರಾಜ ಬೊಮ್ಮಾಯಿ

ದೇವರಾಜ್ ಅರಸು ಅವರ 107ನೇ ಜನ್ಮ ದಿನಾಚರಣೆ ಅಂಗವಾಗಿ ವಿಧಾನಸೌಧದ ಪಶ್ವಿಮದ್ವಾರದ ಬಳಿ ಇರುವ ದೇವರಾಜ್ ಅರಸು ಪುತ್ಥಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ಮಾಲಾರ್ಪಣೆ ಮಾಡಿದರು.
ದೇವರಾಜ್ ಅರಸು ಅವರ 107ನೇ ಜನ್ಮ ದಿನಾಚರಣೆ ಅಂಗವಾಗಿ ವಿಧಾನಸೌಧದ ಪಶ್ವಿಮದ್ವಾರದ ಬಳಿ ಇರುವ ದೇವರಾಜ್ ಅರಸು ಪುತ್ಥಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ಮಾಲಾರ್ಪಣೆ ಮಾಡಿದರು. 
ದೇವರಾಜ್ ಅರಸು ಅವರ 107ನೇ ಜನ್ಮ ದಿನಾಚರಣೆ ಅಂಗವಾಗಿ ವಿಧಾನಸೌಧದ ಪಶ್ವಿಮದ್ವಾರದ ಬಳಿ ಇರುವ ದೇವರಾಜ್ ಅರಸು ಪುತ್ಥಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ಮಾಲಾರ್ಪಣೆ ಮಾಡಿದರು. 

ಬೆಂಗಳೂರು: ದೇವರಾಜ್ ಅರಸು ಅವರ 107ನೇ ಜನ್ಮ ದಿನಾಚರಣೆ ಅಂಗವಾಗಿ ವಿಧಾನಸೌಧದ ಪಶ್ವಿಮದ್ವಾರದ ಬಳಿ ಇರುವ ದೇವರಾಜ್ ಅರಸು ಪುತ್ಥಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ಮಾಲಾರ್ಪಣೆ ಮಾಡಿದರು. 

ಕಾರ್ಯಕ್ರಮದಲ್ಲಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ಕುಮಾರ ಬಂಗಾರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಬಳಿಕ ದೇವರಾಜ ಅರಸು ಜನ್ಮದಿನ ಉತ್ಸವದಲ್ಲಿ ಮಾತನಾಡಿದ ಸಿಎಂ, ಕರ್ನಾಟಕದ ಇವತ್ತಿನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕದ‌ ಯಶಸ್ಸಿಗೆ ಬಹುಪಾಲು ಅರಸು ಅವರ‌ ದೂರದೃಷ್ಟಿಯೇ ಕಾರಣ. ಮುಖ್ಯಮಂತ್ರಿ ಆದ ಮೇಲೆ ‌ಭೂ ಸುಧಾರಣೆ ಕಾಯ್ದೆ ಜಾರಿಗೆ ತಂದರು. ಉಳುವವನೇ ಒಡೆಯ ಚಳವಳಿಗೆ ಕಾನೂನಿನ ಶಕ್ತಿ ತುಂಬಿದರು. ಕರ್ನಾಟಕದಲ್ಲಿ ಆಹಾರೋತ್ಪಾದನೆ‌ ಗಣನೀಯವಾಗಿ ಏರಲು ಭೂ ಸುಧಾರಣೆಯೇ ಕಾರಣ ಎಂದರು.

ಮನುಷ್ಯ ಹೇಳ್ತಾನೆ ಭೂಮಿ ನನ್ನದು ನನ್ನದು ಅಂತಾನೆ. ಆದರೆ ಸ್ಮಶಾನ ಕಂಡಾಗ ಅಲ್ಲಿ ಮನುಷ್ಯ ನನ್ನವನು ಅಂತಾ ಭೂಮಿ ಹೇಳುತ್ತದೆ. ಪ್ರಗತಿಪರ ದೂರದೃಷ್ಟಿಗೆ ದೇವರಾಜ ಅರಸು ಅವರ‌ ನಿಲುವುಗಳೇ ಕಾರಣ. ಜನತಾ ಮನೆ, ಪಡಿತರ ವ್ಯವಸ್ಥೆ ಆರಂಭವಾಗಿದ್ದು ಅರಸು ಕಾಲದಲ್ಲಿ. ವ್ಯವಸಾಯದಲ್ಲಿ ಸುಧಾರಣೆ, ಕಾಳಿ ವಿದ್ಯುತ್ ಯೋಜನೆ ತಂದಿದ್ದು ಅರಸು ಅವರು ಎಂದು ಸಿಎಂ ಹೇಳಿದರು.

ಸಣ್ಣ ಸಣ್ಣ ಸಮಾಜದಲ್ಲಿದ್ದವರನ್ನ‌ ಗುರುತಿಸಿ ನಾಯಕತ್ವ ಬೆಳೆಸಿದರು. ಅನೇಕರನ್ನ ಗುರುತಿಸಿ ಅವರ ನಾಯಕತ್ವ ಬೆಳೆಸಿ ರಾಜ್ಯ ನಾಯಕರನ್ನಾಗಿ ಮಾಡಿದ್ದರು. ಇವತ್ತು ಸಾಮಾಜಿಕ ನ್ಯಾಯ ಪ್ರತಿಪಾದನೆ ಕೇವಲ ಭಾಷಣಕ್ಕೆ ಸೀಮಿತವಾಗಿದೆ. ಆದರೆ ಸಾಮಾಜಿಕ ನ್ಯಾಯ ಪ್ರತಿಪಾದಿಸಿ ಅದನ್ನು ಅರಸು ಅವರು ಜಾರಿಗೆ ತಂದರು. ಸಮಾಜದ ಕಟ್ಟಕಡೆಯವರಿಗೆ ನ್ಯಾಯ ಸಿಗಬೇಕಿದೆ ಎಂದು ತಿಳಿಸಿದರು.

ಸರಕಾರ ಕೈಗೊಂಡ ಕ್ರಮಗಳ ಬಗ್ಗೆ ಮಾತನಾಡಿದ ಮುಖ್ಯಮಂತ್ರಿಗಳು, 2,439 ಹಾಸ್ಟೆಲ್ ಗಳು ರಾಜ್ಯದಲ್ಲಿವೆ. ಇವುಗಳಿಗೆ ಹೆಚ್ಚಿನ ಅನುದಾನ ನೀಡಲಾಗುವುದು. ದೇವರಾಜ ಅರಸು ಹೆಸರಲ್ಲಿ ಪಿಹೆಚ್‌ಡಿ ಮಾಡ್ತಿರುವವರಿಗೆ ಹೆಚ್ಚಿನ ಅನುದಾನ ಕೊಡಲಾಗುವುದು. ಈವರೆಗೆ ನಿಂತುಹೋಗಿದ್ದ ಮಹಿಳೆಯರಿಗೆ ಟೈಲರಿಂಗ್ ತರಬೇತಿ ಮುಂದುವರಿಸುತ್ತೇವೆ. ಹಿಂದುಳಿದ ವರ್ಗದ ನಿಗಮ ಮಂಡಳಿಗೆ ಹೆಚ್ಚಿನ ಅನುದಾನ ನೀಡಲಾಗುವುದು. 5 ಲಕ್ಷ ಜನರಿಗೆ ಪುನರ್‌ ಕೆಲಸ ನೀಡಲು ಕ್ರಮಕೈಗೊಳ್ಳಲಾಗುವುದು. ಅರಸು ಅವರು ನಮಗೆ‌ ಬಹು ದೊಡ್ಡ ಪ್ರೇರಣೆ. ಅವರ ಮಾರ್ಗದರ್ಶನದಲ್ಲಿ ನಮ್ಮ‌ ಸರ್ಕಾರ ಹೆಜ್ಜೆ ಇಡಲಿದೆ. ಇತ್ತೀಚೆಗೆ ಹಿಂದುಳಿದ ಮಠಗಳು ಉತ್ತಮ ಕೆಲಸ‌ ಮಾಡ್ತಿವೆ. ಹಿಂದುಳಿದ ಮಠಗಳಿಗೆ 129 ಕೋಟಿ ಅನುದಾನ ಬಿಡುಗಡೆ ಮಾಡಿದ್ದೇವೆ. ಸಾಧಕರಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಅರಸು ಅವರು ಪ್ರೇರಣೆಯಾಗಿ ನಮ್ಮ ಮುಂದೆ ನಿಂತಿದ್ದಾರೆ. ಅರಸು ಅವರ ದೂರದೃಷ್ಟಿ ವಿಚಾರಗಳಿಗೆ ಸರ್ಕಾರ ಕಂಕಣಬದ್ದವಾಗಿದೆ ಎಂದು ಕಾರ್ಯಕ್ರಮದಲ್ಲಿ ಬಸವರಾಜ ಬೊಮ್ಮಾಯಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com