ಗಣೇಶೋತ್ಸವ ಧಾರ್ಮಿಕ ಸಮಸ್ಯೆಯಲ್ಲ, ಕೆಲವು ಸೆಕ್ಯುಲರ್ ಗಳಿಂದ ವಿವಾದ ಸೃಷ್ಟಿ: ಸಂದರ್ಶನದಲ್ಲಿ ಸಚಿವ ಬಿಸಿ ನಾಗೇಶ್

ಪಠ್ಯಪುಸ್ತಕಗಳ ಪರಿಷ್ಕರಣೆಯಿಂದ ಹಿಡಿದು ಸರ್ಕಾರವು ಶಾಲಾ-ಕಾಲೇಜುಗಳಲ್ಲಿ 'ಗಣೇಶೋತ್ಸವ'ಕ್ಕೆ ಅವಕಾಶಕ್ಕೆ ಸಂಬಂಧಿಸಿದಂತೆ ವಿವಾದಗಳ ಸರಮಾಲೆಯನ್ನೆ ಹೊತ್ತಿಕೊಂಡಿದೆ.
ಬಿಸಿ ನಾಗೇಶ್
ಬಿಸಿ ನಾಗೇಶ್

ಬೆಂಗಳೂರು: 2023 ರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ.  ರಾಜ್ಯವು ವಿವಿಧ ಕ್ಷೇತ್ರಗಳಲ್ಲಿ ಸಮಸ್ಯೆಗಳ ಸರಣಿಗೆ ಸಾಕ್ಷಿಯಾಗಿದೆ, ಶಿಕ್ಷಣ ಕ್ಷೇತ್ರದಲ್ಲಿ 'ವಿವಾದಗಳ' ಬಿರುಗಾಳಿಯೇ ಬೀಸುತ್ತಿದೆ, ಪಠ್ಯಪುಸ್ತಕಗಳ ಪರಿಷ್ಕರಣೆಯಿಂದ ಹಿಡಿದು ಸರ್ಕಾರವು ಶಾಲಾ-ಕಾಲೇಜುಗಳಲ್ಲಿ 'ಗಣೇಶೋತ್ಸವ'ಕ್ಕೆ ಅವಕಾಶಕ್ಕೆ ಸಂಬಂಧಿಸಿದಂತೆ ವಿವಾದಗಳ ಸರಮಾಲೆಯನ್ನೆ ಹೊತ್ತಿಕೊಂಡಿದೆ.

ಬಿಜೆಪಿ ಅಧಿಕಾರಕ್ಕೆ ಬಂದಾಗ ವಿದ್ಯಾರ್ಥಿಗಳಿಗೆ ರಾಷ್ಟ್ರೀಯತೆ ಮತ್ತು ದೇಶಪ್ರೇಮವನ್ನು ಕಲಿಸಲು ಪ್ರಯತ್ನಿಸುತ್ತಿದೆ, ಕೆಲವು ಶಕ್ತಿಗಳು ಅದನ್ನು ವಿರೋಧಿಸುತ್ತವೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿರುವ ಸಂದರ್ಶನದಲ್ಲಿ  ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿದ್ದಾರೆ.

‘ಹಿಜಾಬ್’ ಪಠ್ಯಪುಸ್ತಕ ಪರಿಷ್ಕರಣೆ ಮತ್ತು ಗಣೇಶೋತ್ಸವ, ಶಿಕ್ಷಣ ಕ್ಷೇತ್ರವೇ ಸಂಕಷ್ಟಕ್ಕೆ ಸಿಲುಕುತ್ತದೆ. ಏಕೆ?

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ವಿದ್ಯಾರ್ಥಿಗಳಿಗೆ ರಾಷ್ಟ್ರೀಯತೆ ಮತ್ತು ದೇಶಭಕ್ತಿಯನ್ನು ಕಲಿಸಲು ಪ್ರಯತ್ನಿಸಿದಾಗ ಅದನ್ನು ವಿರೋಧಿಸುವ ಶಕ್ತಿಗಳಿವೆ.  ಕೆಲವು ವರ್ಷಗಳ ಹಿಂದೆ ಪಠ್ಯಪುಸ್ತಕಗಳ ಪರಿಷ್ಕರಣೆ ಸಮಿತಿಯ ಮಾಜಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರು 'ನಾಡಗೀತೆ'ಯ ತಿರುಚಿದ ಆವೃತ್ತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಫಾರ್ವರ್ಡ್ ಮಾಡಿದ್ದಾರೆ ಎಂಬ ವಿಷಯವನ್ನು ಕೆಲವು ಕವಿಗಳು ತರಾಟೆಗೆ ತೆಗೆದುಕೊಂಡರು. ಆದರೆ ಬರಗೂರು ರಾಮಚಂದ್ರಪ್ಪ ಅವರು ತಮ್ಮದೇ ಟಿಪ್ಪಣಿಗಳೊಂದಿಗೆ ‘ರಾಷ್ಟ್ರಗೀತೆ’ಯನ್ನು ತಿರುಚಿದಾಗ ಯಾವ ಸಮಸ್ಯೆಯೂ ಆಗಲಿಲ್ಲ.  ವಿರೋಧಿಸುವುದಕ್ಕಾಗಿಯೇ ಸರ್ಕಾರವನ್ನು ವಿರೋಧಿಸುವುದು ಗುಣವಾಗಿದೆ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲಾ ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು, ಕೇಂದ್ರದಿಂದ 6 ಸಾವಿರ ರೂ. ಸೇರಿದಂತೆ 10 ಸಾವಿರ ರೂ.ಗಳು ಕೂಡ ಬರುತ್ತಿರುವ ಕಾರಣ ರೈತರು ಸಂತಸಗೊಂಡಿದ್ದಾರೆ.

ಆದರೆ ಸಮಸ್ಯೆ ಪ್ರಸ್ತಾಪವಾದ ನಂತರ, ನೀವು ಪಠ್ಯಪುಸ್ತಕಗಳನ್ನು ಪರಿಷ್ಕರಿಸಿದ್ದೀರಿ?

ಚಕ್ರತೀರ್ಥ ಸಮಿತಿಯಿಂದ ಸಣ್ಣಪುಟ್ಟ ದೋಷಗಳಿದ್ದು ಅದನ್ನು ಸರಿಪಡಿಸಲಾಗಿದೆ. ಆದರೂ ನಾರಾಯಣಗುರುವಿನ ಅಧ್ಯಾಯವನ್ನು ತೆಗೆದುಹಾಕಲಾಗಿದೆ ಎಂದು ಸುಳ್ಳುಸುದ್ದಿ ಹಬ್ಬಿಸಲಾಯಿತು. ಆದರೆ ಶಿಕ್ಷಕರ ಮೇಲಿನ ಹೊರೆಯನ್ನು ಕಡಿಮೆ ಮಾಡಲು ನಾವು ಅದನ್ನು ಸಮಾಜ ವಿಜ್ಞಾನದಿಂದ ಕನ್ನಡಕ್ಕೆ ಬದಲಾಯಿಸಿದ್ದೇವೆ.

ಈಗ ಶಾಲೆಗಳಲ್ಲಿ ಗಣೇಶೋತ್ಸವ ಆಚರಿಸಲು ಅವಕಾಶ ಮಾಡಿಕೊಟ್ಟಿದ್ದರಿಂದ ಸಮಸ್ಯೆಯಾಗಿದೆಯೇ?

ಗಣೇಶೋತ್ಸವ ಒಂದು ಸಮಸ್ಯೆಯಲ್ಲ, ಆದರೆ ಸೆಕ್ಯುಲರ್‌ಗಳೆಂದು ಕರೆಯಲ್ಪಡುವವರು ಯಾವಾಗಲೂ ಕೆಲವು ಸಮಸ್ಯೆಗಳನ್ನು ಸೃಷ್ಟಿಸುತ್ತಾರೆ. 1893ರಲ್ಲಿ ಬಾಲಗಂಗಾಧರನಾಥ ತಿಲಕರು ರಾಷ್ಟ್ರೀಯತೆಯ ಆಂದೋಲನದ ಭಾಗವಾಗಿ ಗಂಗೇಶ ಉತ್ಸವವನ್ನು ಸಾಮಾಜಿಕ ಕ್ಷೇತ್ರಕ್ಕೆ ತಂದರು. ಇದು ಬ್ರಿಟಿಷರ ವಿರುದ್ಧ ಹೋರಾಡಲು ಭಾರತೀಯ ಸಮಾಜವನ್ನು ಒಗ್ಗೂಡಿಸಲು ಮತ್ತು ಇದೇ  ಕ್ರಮ ಅನುಸರಿಸಿದ್ದರು. ಸ್ವಾತಂತ್ರ್ಯದ ಮೊದಲು ಶಾಲೆಗಳಲ್ಲಿ ಸರಸ್ವತಿ ಪೂಜೆಯನ್ನು ಸಹ ಆಚರಿಸಲಾಯಿತು.

ಬಿಜೆಪಿ ಬೆಂಬಲಿತ ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಾದಿ ಶಾಲೆಗಳಲ್ಲಿ ಈದ್ ಮಿಲಾದ್ ಮತ್ತು ನಮಾಜ್ ಗೆ ಅವಕಾಶ ನೀಡಬೇಕೆಂದು ಕೇಳಿದ್ದಾರಲ್ಲ?

ಪ್ರತಿಯೊಬ್ಬರಿಗೂ ತಮ್ಮ ಬೇಡಿಕೆಗಳನ್ನು ಮುಂದಿಡಲು ಸ್ವಾತಂತ್ರ್ಯವಿದೆ, ಆದರೆ ಅದನ್ನು ನಿರ್ಧರಿಸುವುದು ಸರ್ಕಾರ. ಹಿಂದೂಗಳು ಬಯಸಿದರೂ ಶಾಲೆಗಳಲ್ಲಿ ಅಯ್ಯಪ್ಪ ಪೂಜೆ, ಯುಗಾದಿಯಂತಹ ಧಾರ್ಮಿಕ ಆಚರಣೆಗಳಿಗೆ ಅವಕಾಶ ನೀಡುವಂತಿಲ್ಲ. ನ್ಯಾಯಾಲಯವು ಅದನ್ನು ಸ್ಪಷ್ಟಪಡಿಸಿದೆ ಮತ್ತು ಕರ್ನಾಟಕ ಶಿಕ್ಷಣ ಕಾಯಿದೆ ಕೂಡ ಅಂತಹ ಧಾರ್ಮಿಕ ಆಚರಣೆಗಳನ್ನು ಅನುಮತಿಸುವುದಿಲ್ಲ.

ವಿಡಿ ಸಾವರ್ಕರ್ ವಿಚಾರ ಈಗ ತಾರಕಕ್ಕೇರಿದೆಯಲ್ಲ?

ಸಾವರ್ಕರ್  ತಮ್ಮ ಇಡೀ ಕುಟುಂಬವನ್ನೇ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದ ಮಹಾನ್ ವ್ಯಕ್ತಿ. ಯಾರಾದರೂ ಪೋಸ್ಟರ್‌ಗಳಲ್ಲಿ ಅವರ ಫೋಟೋವನ್ನು ಹಾಕಲು ನಿರ್ಧರಿಸಿದರೆ, ಸರ್ಕಾರಕ್ಕೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ‘ಮುಸ್ಲಿಂ ಪ್ರದೇಶಗಳಲ್ಲಿ ಸಾವರ್ಕರ್ ಅವರ ಪೋಸ್ಟರ್‌ಗಳನ್ನು ಏಕೆ ಹಾಕಲು ಸಾಧ್ಯವಿಲ್ಲ’ ಎಂಬ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು. ಇವೆಲ್ಲ ಅವರ ಖಾಸಗಿ ಆಸ್ತಿಯೇ?

ಈ ಸಮಸ್ಯೆಗಳು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆಯೇ?

ಇಲ್ಲವೇ ಇಲ್ಲ. ಬಿಜೆಪಿ ಯಾವಾಗಲೂ ಜನರ ಕಲ್ಯಾಣಕ್ಕಾಗಿ ಆಡಳಿತ ನಡೆಸುತ್ತಿದೆ. ಶ್ಯಾಮ್ ಪ್ರಸಾದ್ ಮುಖರ್ಜಿ ಮತ್ತು ದೀನದಯಾಳ್ ಉಪಾಧ್ಯಾಯರಂತಹ ನಾಯಕರು ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಲ್ಯಾಣಕ್ಕಾಗಿ  'ಅಂತ್ಯೋದಯ' ಯೋಜನೆ ಕಲ್ಪಿಸಿದ್ದರು. ನಾವು ಚುನಾವಣೆ ಗೆಲ್ಲುವ ಉದ್ದೇಶದಿಂದ ಕಾರ್ಯಕ್ರಮಗಳನ್ನು ರೂಪಿಸುವುದಿಲ್ಲ.

ಶಾಲೆಗಳಲ್ಲಿ ರಾಷ್ಟ್ರಗೀತೆ ಕಡ್ಡಾಯಗೊಳಿಸಿ ಆದೇಶ ಹೊರಡಿಸಲು ಕಾರಣವೇನು?

ಅಲ್ಪಸಂಖ್ಯಾತರ ಸ್ಥಾನಮಾನ ಹೊಂದಿರುವ ಕೆಲವು ಶಿಕ್ಷಣ ಸಂಸ್ಥೆಗಳು ನಿಯಮಗಳನ್ನು ಪಾಲಿಸುತ್ತಿಲ್ಲ. ಅವರು ನಿಯಮಗಳನ್ನು ಉಲ್ಲಂಘಿಸಿದರೆ, ಕರ್ನಾಟಕ ಶಿಕ್ಷಣ ಕಾಯ್ದೆಯ ನಿಬಂಧನೆಗಳ ಪ್ರಕಾರ ಅವರನ್ನು ಹೇಗೆ ಎದುರಿಸಬೇಕೆಂದು ನಮಗೆ ತಿಳಿದಿದೆ.

ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್‌ ನೀಡಲು ಇಲಾಖೆ ಬಳಿ ಹಣವಿರಲಿಲ್ಲವೇ?

ಹಾಗೆ ಹೇಳುವುದು ತಪ್ಪು, ಶಿಕ್ಷಣದಲ್ಲಿನ ಗುಣಾತ್ಮಕ ಬದಲಾವಣೆಗಳತ್ತ ನಮ್ಮ ಗಮನವಿದೆ ಎಂದು ನಾವು ಹೇಳಿದ್ದೇವೆ. ಈಗಾಗಲೇ ನಾವು ಆದೇಶ ಹೊರಡಿಸಿದ್ದೇವೆ, ನಾವು ಬೂಟುಗಳಿಗಾಗಿ 46 ಕೋಟಿ ರೂಪಾಯಿಗಳನ್ನು  'ಕಲಿಕಾ ಚೇತರಿಕೆ' ಗಾಗಿ ಮತ್ತು 176 ರೂಪಾಯಿಗಳನ್ನು ಖರ್ಚು ಮಾಡುತ್ತೇವೆ. ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಚಿಂತನೆ ನಡೆಸಿದ್ದೇವೆ.

ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಮೊಟ್ಟೆಗಳ ವಿತರಣೆ ಹೇಗೆ?

ಕೇಂದ್ರದ 40 ಕೋಟಿ ಅನುದಾನ ಬಳಸಿಕೊಂಡು ಕಳೆದ ಮೂರು ತಿಂಗಳಿಂದ ಮಕ್ಕಳಿಗೆ ಮೊಟ್ಟೆ ವಿತರಿಸುತ್ತಿದ್ದೇವೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿ ಅನುಸರಿಸಿ ನಾವು ಮಕ್ಕಳ ಆರೋಗ್ಯ ಮತ್ತು ಪೌಷ್ಟಿಕಾಂಶದ ಬಗ್ಗೆ ಕಾಳಜಿ ವಹಿಸುತ್ತೇವೆ.

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಕೇಂದ್ರ ಸಂಸದೀಯ ಮಂಡಳಿ ಸದಸ್ಯರನ್ನಾಗಿ ನೇಮಕ ಮಾಡಿರುವುದು ಚುನಾವಣೆ ಮೇಲೆ ಯಾವ ಪರಿಣಾಮ ಬೀರಲಿದೆ?

ಬಿಜೆಪಿ ಕೇಡರ್ ಆಧಾರಿತ ಪಕ್ಷ,  ತನ್ನ ಸಂಘಟನಾ ಬಲದ ಮೇಲೆ ಸಾಗುತ್ತದೆ. ಯಡಿಯೂರಪ್ಪ ಅವರ ನೇಮಕ ಖಂಡಿತವಾಗಿಯೂ ಹೆಚ್ಚುವರಿ ಪ್ರಯೋಜನವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com