ಹಿಂದೂ-ಮುಸ್ಲಿಮ್ ಐಕ್ಯತೆಗೆ ಸಾಕ್ಷಿ: ಕೋಮು, ಧಾರ್ಮಿಕ ಸೌಹಾರ್ದತೆಗೆ ಗದಗ ಜಿಲ್ಲೆಯ ಈ ಗ್ರಾಮಸ್ಥರು ಮಾದರಿ!

ರಾಜ್ಯದ ವಿವಿಧೆಡೆ ಕೋಮುಗಲಭೆಗಳು ನಡೆಯುತ್ತಿರುವ ಹೊತ್ತಿನಲ್ಲಿ ಇಲ್ಲಿ ಹಿಂದೂ-ಮುಸ್ಲಿಮರು ಒಂದೆಡೆ ಸೇರಿ ಗಣೇಶ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ಗದಗ ಪಟ್ಟಣದಿಂದ 5 ಕಿಲೋ ಮೀಟರ್ ದೂರದಲ್ಲಿರುವ ಕಳಸಾಪುರ ಕಳೆದ ಎಂಟು ವರ್ಷಗಳಿಂದ ಕೋಮು ಮತ್ತು ಧಾರ್ಮಿಕ ಸೌಹಾರ್ದತೆಗೆ ಮಾದರಿಯಾಗಿದೆ.
ಗದಗ ಪಟ್ಟಣದ ಕಳಸಾಪುರ ಗ್ರಾಮದಲ್ಲಿ ಹಿಂದೂ-ಮುಸ್ಲಿ ಮರಿಂದ ಗಣೇಶ ಹಬ್ಬ ಆಚರಣೆ (ಸಂಗ್ರಹ ಚಿತ್ರ)
ಗದಗ ಪಟ್ಟಣದ ಕಳಸಾಪುರ ಗ್ರಾಮದಲ್ಲಿ ಹಿಂದೂ-ಮುಸ್ಲಿ ಮರಿಂದ ಗಣೇಶ ಹಬ್ಬ ಆಚರಣೆ (ಸಂಗ್ರಹ ಚಿತ್ರ)

ಗದಗ: ರಾಜ್ಯದ ವಿವಿಧೆಡೆ ಕೋಮುಗಲಭೆಗಳು ನಡೆಯುತ್ತಿರುವ ಹೊತ್ತಿನಲ್ಲಿ ಇಲ್ಲಿ ಹಿಂದೂ-ಮುಸ್ಲಿಮರು ಒಂದೆಡೆ ಸೇರಿ ಗಣೇಶ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ಗದಗ ಪಟ್ಟಣದಿಂದ 5 ಕಿಲೋ ಮೀಟರ್ ದೂರದಲ್ಲಿರುವ ಕಳಸಾಪುರ ಕಳೆದ ಎಂಟು ವರ್ಷಗಳಿಂದ ಕೋಮು ಮತ್ತು ಧಾರ್ಮಿಕ ಸೌಹಾರ್ದತೆಗೆ ಮಾದರಿಯಾಗಿದೆ.

ಕೋವಿಡ್‌ನಿಂದಾಗಿ ಕಳೆದ ಎರಡು ವರ್ಷಗಳಿಂದ ಇಲ್ಲಿ ಯಾವುದೇ ಧಾರ್ಮಿಕ ಆಚರಣೆಗಳು ಇರಲಿಲ್ಲ, ಈ ವರ್ಷ ಅದ್ದೂರಿಯಾಗಿ ಗಣೇಶೋತ್ಸವ ಆಚರಣೆ ಮಾಡುತ್ತಿದ್ದಾರೆ. ಅಂಜುಮನ್-ಎ-ಇಸ್ಲಾಂ ಸಮಿತಿಯ ಸದಸ್ಯರು ಮತ್ತು ಇತರ ಮುಸ್ಲಿಮರು ಕಳೆದ ಎರಡು ವಾರಗಳಿಂದ ಗ್ರಾಮದ ಹಿರಿಯರು ಒಟ್ಟಾಗಿ ಗಣೇಶೋತ್ಸವಕ್ಕೆ ನಿಧಿ ಸಂಗ್ರಹಿಸಲು ಪ್ರಾರಂಭಿಸಿದ್ದಾರೆ.

ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ 11 ದಿನಗಳ ಕಾಲ ಹಬ್ಬ ಆಚರಿಸಲಾಗುತ್ತದೆ. ಹಬ್ಬದ ದಿನವಾದ ಬುಧವಾರ ಎರಡೂ ಸಮುದಾಯದವರು ಪೂಜೆ, ವಿಧಿವಿಧಾನಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಮೂರ್ತಿಗೆ ದಿನಕ್ಕೆರಡು ಬಾರಿ ಪೂಜೆ ಸಲ್ಲಿಸಲಾಗುವುದು. ಕೊನೆಯ ದಿನದಂದು ವಿಗ್ರಹವನ್ನು ನಿಮಜ್ಜನ ಮಾಡುವ ಮೊದಲು ಮೆರವಣಿಗೆಯಲ್ಲಿ ಗ್ರಾಮದಲ್ಲಿ ಕೊಂಡೊಯ್ಯಲಾಗುತ್ತದೆ.

ವಿಶಿಷ್ಟ ಆಚರಣೆಯನ್ನು ವೀಕ್ಷಿಸಲು ಸುತ್ತಮುತ್ತಲಿನ ಗ್ರಾಮಗಳು ಮತ್ತು ಗದಗ ಪಟ್ಟಣದ ಜನರು ಈ ಗ್ರಾಮಕ್ಕೆ ಭೇಟಿ ನೀಡುತ್ತಾರೆ. ಕಳಸಾಪುರ ಗಣೇಶನನ್ನು ಈಗ ‘ಕೋಮು ಸೌಹಾರ್ದ ಗಣೇಶ’ ಎಂದು ಕರೆಯುತ್ತಾರೆ. ಗ್ರಾಮದಲ್ಲಿ ಇಲ್ಲಿಯವರೆಗೆ ಒಂದೇ ಒಂದು ಕೋಮು ಘರ್ಷಣೆ ಕಂಡಿಲ್ಲ. ಸಣ್ಣಪುಟ್ಟ ಘಟನೆಗಳು ನಡೆದರೆ ಎರಡೂ ಸಮುದಾಯದ ಹಿರಿಯರು ಒಟ್ಟಾಗಿ ಕುಳಿತು ಪರಿಹರಿಸುತ್ತಾರೆ.

ರಂಜಾನ್ ಮತ್ತು ಇತರ ಮುಸ್ಲಿಂ ಹಬ್ಬಗಳಲ್ಲಿ ಇಲ್ಲಿ ಹಿಂದೂಗಳೂ ಭಾಗವಹಿಸುತ್ತಾರೆ. ರಾಜ್ಯದ ಇತರ ಭಾಗಗಳಲ್ಲಿ ಹಿಜಾಬ್, ಗಣೇಶ ದಂಗಲ್ ಮತ್ತು ಇತರ ಕೋಮು ಗಲಭೆಗಳನ್ನು ನಾವು ಕಾಣುತ್ತೇವೆ, ಕೇಳಿದ್ದೇವೆ. ಆದರೆ ನಮ್ಮ ಗ್ರಾಮದಲ್ಲಿ ಅಂತಹ ಘಟನೆಗಳು ಸಂಭವಿಸಲು ನಾವು ಬಿಡುವುದಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com