ರೌಡಿಗಳಿಗೆ, ರೌಡಿಶೀಟರ್ ಗಳಿಗೆ ಪಕ್ಷದಲ್ಲಿ ಅವಕಾಶವಿಲ್ಲ, ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ: ಸಿಎಂ ಬೊಮ್ಮಾಯಿ
ಭಾರತೀಯ ಜನತಾ ಪಕ್ಷಕ್ಕೆ ರೌಡಿಗಳ ಮೇಲೆ ಆಸಕ್ತಿ ಇಲ್ಲ, ಅವರನ್ನು ಹತ್ತಿರಕ್ಕೆ ಸೇರಿಸುವುದಿಲ್ಲ, ಪಕ್ಷಕ್ಕೆ ಕೂಡ ಸೇರಿಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
Published: 01st December 2022 01:42 PM | Last Updated: 01st December 2022 02:46 PM | A+A A-

ಸಿಎಂ ಬೊಮ್ಮಾಯಿ
ಬೆಂಗಳೂರು: ಭಾರತೀಯ ಜನತಾ ಪಕ್ಷಕ್ಕೆ ರೌಡಿಗಳ ಮೇಲೆ ಆಸಕ್ತಿ ಇಲ್ಲ, ಅವರನ್ನು ಹತ್ತಿರಕ್ಕೆ ಸೇರಿಸುವುದಿಲ್ಲ, ಪಕ್ಷಕ್ಕೆ ಕೂಡ ಸೇರಿಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿಂದು ಕೆಂಗಲ್ ಹನುಮಂತಯ್ಯ ಅವರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರೌಡಿಗಳಿಗೆ, ರೌಡಿಶೀಟರ್ ಗಳಿಗೆ ಪಕ್ಷದಲ್ಲಿ ಯಾವುದೇ ಅವಕಾಶಗಳನ್ನು ಕೊಡುವುದಿಲ್ಲ. ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು.
ಬಿಜೆಪಿ ತತ್ವಗಳಲ್ಲಿ ನಂಬಿಕೆ ಇಟ್ಟಿರುವ ಪಕ್ಷವಾಗಿದೆ. ರೌಡಿಗಳಿಗೆ, ಪಾತಕಿಗಳಿಗೆ ನಾವು ಬಾಗಿಲು ತೆರೆಯುವುದಿಲ್ಲ ಎಂದರು. ಇತ್ತೀಚೆಗೆ ಬಿಜೆಪಿ ಸಂಸದರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಕುಖ್ಯಾತ ಪಾತಕಿ ಸೈಲಂಟ್ ಸುನಿಲ್ ಕೂಡ ಬಂದು ವೇದಿಕೆ ಹಂಚಿಕೊಂಡಿದ್ದನು.
ಇದನ್ನೂ ಓದಿ: ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ ಸಚಿವ ವಿ.ಸೋಮಣ್ಣ ಮನೆಗೆ ಭೇಟಿ: ಕಾಂಗ್ರೆಸ್ ಟೀಕೆ
ನಿನ್ನೆ ಸಚಿವ ಸೋಮಣ್ಣ ನಿವಾಸಕ್ಕೆ ವಿಲ್ಸನ್ ಗಾರ್ಡನ್ ನಾಗ ಬಂದಿದ್ದು ಅದು ಕೂಡ ಚರ್ಚೆಯಾಗುತ್ತಿದೆ. ಇತ್ತೀಚೆಗೆ ಬಿಜೆಪಿ ನಾಯಕರ ಸಂಪರ್ಕಕ್ಕೆ ಬೆಂಗಳೂರಿನ ಅನೇಕ ರೌಡಿ ಶೀಟರ್ ಗಳು ಬರುತ್ತಿರುವುದು ಪ್ರತಿಪಕ್ಷ ಕಾಂಗ್ರೆಸ್ ಬಿಜೆಪಿಯನ್ನು ಮತ್ತು ಅದರ ನಾಯಕರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಬಿಜೆಪಿ ನಾಯಕರು, ಸಚಿವರೆಲ್ಲ ಸಾಲು ಸಾಲಾಗಿ ರೌಡಿಗಳೊಂದಿಗೆ ಕುಚಿಕು ಕುಚಿಕು ಡಾನ್ಸ್ ಆಡುತ್ತಾ ಭುಗತಲೋಕವನ್ನು ಮಟ್ಟ ಹಾಕುವ ಪೊಲೀಸರ ಸ್ಥೈರ್ಯವನ್ನು ಕುಸಿಯುವಂತೆ ಮಾಡಿದ್ದಾರೆ.
— Karnataka Congress (@INCKarnataka) December 1, 2022
ರೌಡಿಗಳ ಕಾಲರ್ ಹಿಡಿದು ಎಳೆದು ತರುತ್ತಿದ್ದ ಪೊಲೀಸರು ಈಗ ಅದೇ ರೌಡಿಗಳಿಗೆ ಎಸ್ಕಾರ್ಟ್ ಒದಗಿಸುವಂತಹ ಸ್ಥಿತಿ ನಿರ್ಮಿಸಿದೆ @BJP4Karnataka .