ಡಿಸೆಂಬರ್ 17ರಂದು ತವರು ಕ್ಷೇತ್ರ ಶಿಗ್ಗಾವಿಯಲ್ಲಿ ಗ್ರಾಮ ವಾಸ್ತವ್ಯ ಹೂಡಲು ಸಿಎಂ ಬೊಮ್ಮಾಯಿ ಯೋಜನೆ

ಸಿಎಂ ತವರು ಕ್ಷೇತ್ರವಾದ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಾಡ ಗ್ರಾಮದಲ್ಲಿ ಡಿಸೆಂಬರ್ 17ರಂದು ಕಂದಾಯ ಸಚಿವ ಆರ್.ಅಶೋಕ್ ಅವರೊಂದಿಗೆ ‘ಗ್ರಾಮ ವಾಸ್ತವ್ಯ’ದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಳ್ಳುವ ಸಾಧ್ಯತೆ ಇದೆ.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ
Updated on

ಬೆಂಗಳೂರು: ಸಿಎಂ ತವರು ಕ್ಷೇತ್ರವಾದ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಾಡ ಗ್ರಾಮದಲ್ಲಿ ಡಿಸೆಂಬರ್ 17ರಂದು ಕಂದಾಯ ಸಚಿವ ಆರ್.ಅಶೋಕ್ ಅವರೊಂದಿಗೆ ‘ಗ್ರಾಮ ವಾಸ್ತವ್ಯ’ದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಇದೇ ಮೊದಲ ಬಾರಿಗೆ ಬೊಮ್ಮಾಯಿ ಅವರು ಗ್ರಾಮ ವಾಸ್ತವ್ಯದಲ್ಲಿ ಭಾಗಿಯಾಗುತ್ತಿದ್ದು, ಈ ಮೂಲಕ ತಮ್ಮ ನಿಕಟಪೂರ್ವ ಸಿಎಂ ಬಿ ಎಸ್ ಯಡಿಯೂರಪ್ಪನವರನ್ನು ಅನುಸರಿಸಲಿದ್ದಾರೆ.  

ಈ ಬಗ್ಗೆ ಮಾತನಾಡಿರುವ ಕಂದಾಯ ಸಚಿವ ಆರ್.ಅಶೋಕ್, ಗ್ರಾಮ ವಾಸ್ತವ್ಯ ಹೆಚ್ಚಿನ ಸಂಖ್ಯೆಯಲ್ಲಿ ಜನರಿಗೆ ಉಪಯೋಗವಾಗುತ್ತಿರುವುದರಿಂದ ಜನಪ್ರಿಯವಾಗಿದೆ. ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮಗಳ ಪೂರ್ವಭಾವಿಯಾಗಿ ಅಧಿಕಾರಿಗಳು ಪ್ರತಿ ಮನೆಗೆ ತೆರಳಿ ಅವರ ಸಮಸ್ಯೆಗಳ ಕುರಿತು ಚರ್ಚಿಸುತ್ತಾರೆ. ಡಿಸಿಗಳು, ತಹಶೀಲ್ದಾರ್‌ಗಳು ಮತ್ತು ಎಸ್‌ಪಿಗಳು ಸೇರಿದಂತೆ ಇಂತಹ ವಾಸ್ತವ್ಯದ ಸಮಯದಲ್ಲಿ ಇಡೀ ಸರ್ಕಾರದ ಆಡಳಿತ ಯಂತ್ರವು ಸಿಎಂ ಜೊತೆಗೆ ಇರುವುದರಿಂದ ಜನರ ಸಮಸ್ಯೆಗಳನ್ನು ಬಗೆಹರಿಸುವುದು ಸುಲಭವಾಗುತ್ತದೆ. ಗ್ರಾಮಸ್ಥರ ಬೇಡಿಕೆಗಳು ಕೃತಕ ಅಂಗಗಳಿಂದ ಹಿಡಿದು ದೈಹಿಕವಾಗಿ ಅಶಕ್ತರವರೆಗೆ ಸ್ಮಶಾನಕ್ಕಾಗಿ ಭೂಮಿಯನ್ನು ಹುಡುಕುವವರೆಗೆ ವಯಸ್ಸಾದವರಿಗೆ ಪಿಂಚಣಿವರೆಗೆ ಹೀಗೆ ಸಾಗುತ್ತದೆ ಎಂದರು. 

ಇಂತಹ ಭೇಟಿಗಳಲ್ಲಿ ವಿವಿಧ ಗ್ರಾಮಗಳ ಜನರು ಒಂದೇ ಸ್ಥಳದಲ್ಲಿ ಸೇರುತ್ತಾರೆ. ಅಲ್ಲದೆ, ಅನೇಕ ಮತದಾರರನ್ನು ತಲುಪಬಹುದು. ಶಿಗ್ಗಾವಿ ಅವರ ತವರು ಕ್ಷೇತ್ರವಾಗಿರುವುದರಿಂದ ಇದು ಖಂಡಿತವಾಗಿ ಸಿಎಂಗೆ ನೆರವಾಗಲಿದೆ. ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ಗ್ರಾಮ ವಾಸ್ತವ್ಯಕ್ಕೆ ಯೋಜನೆ ರೂಪಿಸಲಾಗುತ್ತಿದೆ. 

ಈ ಬಗ್ಗೆ ಸಿಎಂ ಕಚೇರಿ ಮೂಲಗಳು ಯಾವುದೇ ಮಾಹಿತಿಯನ್ನು ದೃಢಪಡಿಸಿಲ್ಲ, ಸಚಿವ ಅಶೋಕ್ ಅವರು ರಾತ್ರಿ ವಾಸ್ತವ್ಯ ಹೂಡುವ ಸ್ಥಳದಲ್ಲಿಯೇ ಸಿಎಂ ಕೂಡ ವಾಸ್ತವ್ಯ ಹೂಡಬಹುದು. ಅವರು ಆಸಕ್ತಿ ತೋರಿಸಿದ್ದಾರೆ, ಆದರೆ ಇನ್ನೂ ದೃಢೀಕರಿಸಿಲ್ಲ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com