ಬಲವಂತದ ಧಾರ್ಮಿಕ ಮತಾಂತರ, ಅಪ್ರಾಪ್ತ ಬಾಲಕಿಯ ಅತ್ಯಾಚಾರ: ಕೊಪ್ಪಳದ ಪಾದ್ರಿಯ ವಿರುದ್ಧ ಎಫ್ ಐ ಆರ್

ಬಲವಂತದ ಧಾರ್ಮಿಕ ಮತಾಂತರ ಆರೋಪದ ಮೇಲೆ ಒಂದೇ ಕುಟುಂಬದ ಮೂವರ ವಿರುದ್ಧ ಕೊಪ್ಪಳ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಮೂವರೂ ತಲೆಮರೆಸಿಕೊಂಡಿದ್ದು, ಕೊಪ್ಪಳದ ಕಾರಟಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಪ್ಪಳ: ಬಲವಂತದ ಧಾರ್ಮಿಕ ಮತಾಂತರ ಆರೋಪದ ಮೇಲೆ ಒಂದೇ ಕುಟುಂಬದ ಮೂವರ ವಿರುದ್ಧ ಕೊಪ್ಪಳ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಮೂವರೂ ತಲೆಮರೆಸಿಕೊಂಡಿದ್ದು, ಕೊಪ್ಪಳದ ಕಾರಟಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಬಡಕುಟುಂಬಗಳನ್ನೇ ಟಾರ್ಗೆಟ್ ಮಾಡಿ ಕ್ರೈಸ್ತ ಧರ್ಮಕ್ಕೆ  ಮತಾಂತರಿಸುತ್ತಿದ್ದ ಪ್ರಕರಣವೊಂದು ಕೊಪ್ಪಳ ಜಿಲ್ಲೆಯ ಕಾರಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಬಲವಂತದ ಮತಾಂತರದ ನಿಬಂಧನೆಗಳ ಅಡಿಯಲ್ಲಿ ಮೊದಲ ಪ್ರಕರಣ ದಾಖಲಾಗಿದ್ದರೆ, ಎರಡನೆಯದು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣವಾಗಿದೆ.

ಜಿಲ್ಲೆಯಲ್ಲಿ ಬಲವಂತದ ಮತಾಂತರ ಹಾಗೂ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದ್ದು, ಚರ್ಚ್ ಪಾಸ್ಟರ್  ಸತ್ಯನಾರಾಯಣ ಅಲಿಯಾಸ್ ಸ್ಯಾಮುಯೇಲ್ ಮತ್ತು ಪತ್ನಿ ಹಾಗೂ ಮಗ ಚಿರಂಜೀವಿ (17) ವಿರುದ್ಧ ಕೇಸ್ ದಾಖಲಾಗಿದೆ. ರಾಮನಗರದ ಶಂಕರ್ ಲಕ್ಷ್ಮಣ ಎಂಬುವವರು ಅದೇ ಗ್ರಾಮದ ಪಾದ್ರಿ ಸತ್ಯನಾರಾಯಣ ಸ್ಯಾಮ್ಯುವೆಲ್, ಪ್ರಚಾರಕರಾದ ಶಿವಮ್ಮ ಸತ್ಯನಾರಾಯಣ ಮತ್ತು ಜಿರಂಜೀವಿ ಸತ್ಯನಾರಾಯಣ ಎಂಬುವವರ ವಿರುದ್ಧ ದೂರು ನೀಡಿದ್ದಾರೆ.

ಕರಟಗಿಯ ರಾಮನಗರದಲ್ಲಿ ಗ್ರೇಸ್ ಪ್ರಾರ್ಥನಾ ಮಂದಿರ ನಡೆಸುತ್ತಿರುವ ಸ್ಯಾಮುಯೇಲ್, ಬಡವರನ್ನೇ ಟಾರ್ಗೆಟ್ ಮಾಡಿ ಕ್ರೈಸ್ತಧರ್ಮಕ್ಕೆ ಮತಾಂತರ ಮಾಡುತ್ತಿದ್ದ. ಹಿಂದೂ ದೇವತೆಗಳನ್ನ  ನದಿಯಲ್ಲಿ ಎಸೆಯುವಂತೆ ಹೇಳುತ್ತಿದ್ದ. ಅಲ್ಲದೇ ಮತಾಂತರವಾಗಿ ಹಿಂದೂ ದೇವರನ್ನ ಪೂಜೆ ಮಾಡಿದ್ರೆ ಕೊಲೆ, ಅತ್ಯಾಚಾರ ಮಾಡೋದಾಗಿ ಬೆದರಿಕೆ ಹಾಕುತ್ತಿದ್ದ. ಈ ಸಂಬಂಧ 4 ವರ್ಷಗಳ ಹಿಂದೆಯೇ ಮತಾಂತರಗೊಂಡ ಬಡ ಕುಟುಂಬ ಪೊಲೀಸ್ ಠಾಣೆಗೆ ದೂರು ನೀಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ದೂರಿನ ಪ್ರಕಾರ, ನಾಲ್ಕು ವರ್ಷಗಳ ಹಿಂದೆ ಶಂಕರ್ ಮತ್ತು ಅವರ ಕುಟುಂಬವನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸುವಂತೆ ಪಾದ್ರಿ ಒತ್ತಾಯಿಸಿದರು. ನಂತರ ಅವರು ಅಧಿಕೃತವಾಗಿ ಮತಾಂತರಗೊಳ್ಳದಿದ್ದರೂ ತಮ್ಮ ಹೊಸ ಧರ್ಮವನ್ನು ಆಚರಿಸುತ್ತಿದ್ದರು. ಬಡ ಕುಟುಂಬಗಳನ್ನು ಗುರಿಯಾಗಿಸಿಕೊಂಡು ಮತಾಂತರಕ್ಕೆ ಆಮಿಷ ಒಡ್ಡುತ್ತಿದ್ದ ಸ್ಯಾಮ್ಯುಯೆಲ್‌ನನ್ನು ಬಯಲಿಗೆಳೆಯಲು ಶಂಕರ್ ಕಾಯುತ್ತಿದ್ದ. ಆದರೆ ಈ ಮಧ್ಯೆ, ಶಂಕರ್ ಅವರ ಅಪ್ರಾಪ್ತ ಮಗಳ ಮೇಲೆ ಪಾದ್ರಿಯ ಮಗ ಅತ್ಯಾಚಾರವೆಸಗಿದ್ದಾನೆ, ಅವನು ಅಪ್ರಾಪ್ತನಾಗಿದ್ದನು ಮತ್ತು ನಂತರ ಶಂಕರ್ ದೂರು ನೀಡಿದ್ದಾನೆ, ”ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ದೂರುದಾರ ಮತ್ತು ಅವರ ಕುಟುಂಬ ವಾಸಿಸುವ ರಾಮನಗರ ಪ್ರದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಲವಂತದ ಮತಾಂತರದ  ಬಗ್ಗೆಯೂ ನಾವು ಪರಿಶೀಲಿಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com