ಹೊಸ ವರ್ಷಕ್ಕೆ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್: ಬಿಎಂಟಿಸಿ ವಜ್ರ ಬಸ್‌ನ ದೈನಂದಿನ-ಮಾಸಿಕ ಪಾಸ್‌ ದರ ಶೇ. 20ರಷ್ಟು ಹೆಚ್ಚಳ!

ನಿತ್ಯೋಪಯೋಗಿ ವಸ್ತುಗಳ ಬೆಲೆ ಗಗನಕ್ಕೇರಿದೆ. ಪೆಟ್ರೋಲ್, ಡಿಸೇಲ್ ದರ ಕೂಡ ಹೆಚ್ಚಾಗಿದ್ದು, ಸಾರ್ವಜನಿಕರಿಗೆ ಬದುಕು ಸಾಗಿಸೋದೇ ಹೊರೆಯಾಗಿದೆ. ಪ್ರಯಾಣಿಕರಿಗೆ ಬಿಎಂಟಿಸಿ ಶಾಕ್ ನೀಡಿದ್ದು, ಮತ್ತೆ ಬಸ್ ಟಿಕೆಟ್ ದರ ಏರಿಕೆಯಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಿತ್ಯೋಪಯೋಗಿ ವಸ್ತುಗಳ ಬೆಲೆ ಗಗನಕ್ಕೇರಿದೆ. ಪೆಟ್ರೋಲ್, ಡಿಸೇಲ್ ದರ ಕೂಡ ಹೆಚ್ಚಾಗಿದ್ದು, ಸಾರ್ವಜನಿಕರಿಗೆ ಬದುಕು ಸಾಗಿಸೋದೇ ಹೊರೆಯಾಗಿದೆ. ಪ್ರಯಾಣಿಕರಿಗೆ ಬಿಎಂಟಿಸಿ ಶಾಕ್ ನೀಡಿದ್ದು, ಮತ್ತೆ ಬಸ್ ಟಿಕೆಟ್ ದರ ಏರಿಕೆಯಾಗಿದೆ.

ಬೆಂಗಳೂರಿನ ಪ್ರಯಾಣಿಕರಿಗೆ ಬಿಎಂಟಿಸಿ ಬಸ್ ದರದ ಶಾಕ್ ನೀಡಿದ್ದು, ಜನವರಿಯಿಂದ ಜಾರಿಗೆ ಬರುವಂತೆ ಬಿಎಂಟಿಸಿ ವಜ್ರ ಎಸಿ ಬಸ್‌ ಪಾಸ್‌ ದರದಲ್ಲಿ ಶೇ. 20 ರಷ್ಟು ಹೆಚ್ಚಿಸಿದೆ. ಹೆಚ್ಚುತ್ತಿರುವ ಇಂಧನ ಬೆಲೆಯ ಹಿನ್ನಲೆ, ಮಾಸಿಕ ಪಾಸ್, ದಿನದ ಪಾಸ್ ಹಾಗೂ ದಿನದ ಟಿಕೆಟ್ ದರ ವನ್ನ ಹೆಚ್ಚಿಸುವ ಮೂಲಕ ಬಿಎಂಟಿಸಿ ಪ್ರಯಾಣಿಕರಿಗೆ ಶಾಕ್​ ನೀಡಿದೆ. ಹೊಸ ವರ್ಷದ ಮೊದಲ ವಾರದಿಂದಲೇ ಬಿಎಂಟಿಸಿ ಪ್ರಯಾಣಿಕರಿಗೆ ನಿರಾಸೆ ಮೂಡಿಸಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಭಾನುವಾರ ಜನವರಿ 1 ರಿಂದ ಹವಾ ನಿಯಂತ್ರಿತ (ಎಸಿ) ಬಸ್‌ನ ದೈನಂದಿನ ಮತ್ತು ಮಾಸಿಕ ಪಾಸ್ ದರವನ್ನು ಶೇ.20ರ ರಷ್ಟು ಏರಿಕೆ ಮಾಡಿದೆ. ಈ ವಿಚಾರವಾಗಿ ಗುರುವಾರ ಸಭೆ ನಡೆಸಿದ ಅಧಿಕಾರಿಗಳು ದರ ಏರಿಕೆ ಬಗ್ಗೆ ನಿರ್ಧರಿಸಿದ್ದಾರೆ.

ವಜ್ರ ( ವೋಲ್ವೋ) ಪ್ರಸ್ತುತ ಮಾಸಿಕ ದರ 1428+ ಜಿಎಸ್ಟಿ 72 ಒಟ್ಟು 1500 ರೂಪಾಯಿಗಳಿತ್ತು, ಸದ್ಯ ಪರಿಷ್ಕೃತ ವಜ್ರ ಮಾಸಿಕ ಪಾಸಿನ ದರ 1714.29 ಪೈಸೆ + ಜಿಎಸ್ಟಿ 85.71= ಒಟ್ಟು 1800 ರೂಪಾಯಿಯಾಗಿದೆ. ವಜ್ರ ವೋಲ್ವೋ ಪ್ರಸ್ತುತ ದೈನಿಕ ಪಾಸಿನ ದರ 95+ ಜಿಎಸ್ಟಿ 5 = 100 ರೂಪಾಯಿ ಇತ್ತು, ಪರಿಷ್ಕೃತ ದರ 114.29+ 5.21= 120 ರೂಪಾಯಿಗೆ ಹೆಚ್ಚಳವಾಗಿದೆ.

ಬೆಂಗಳೂರಿನಂತಹ ಸಂಚಾರ ದಟ್ಟಣೆ ಇರುವ ನಗರದಲ್ಲಿ ಸಾರ್ವಜನಿಕ ಸಾರಿಗೆಯ ಪ್ರಯಾಣ ದರವನ್ನು ಹೆಚ್ಚಿಸುವುದು ಒಳ್ಳೆಯ ಲಕ್ಷಣವಲ್ಲ. ವಜ್ರ ದರಗಳು ಪ್ರತಿ 2ಕಿಲೋ ಮೀಟರ್‌ಗೆ ಒಂದು ಹಂತದಂತೆ ಒಟ್ಟು 20ಕಿ.ಮೀ.ಯ 10 ಹಂತವರೆಗೆ ದರ ಬದಲಾಗುವುದಿಲ್ಲ. 20 ಕಿಲೋ ಮೀಟರ್‌ಗಿಂತ ಹೆಚ್ಚು ಪ್ರಯಾಣಿಸುವವರು 2023 ಜನವರಿ 5 ರಿಂದ ಹೆಚ್ಚು ಹಣ ಪಾವತಿಸಬೇಕಾಗುತ್ತದೆ.

ಡಿಸೆಂಬರ್ 2020 ರಲ್ಲಿ ಬಿಎಂಟಿಸಿ ನಾನ್-ಎಸಿ ಮಾಸಿಕ ಪಾಸ್ ಹೊಂದಿರುವವರಿಗೆ ಭಾನುವಾರದಂದು ವಜ್ರ ಸೇವೆಗಳಲ್ಲಿ ಪ್ರಯಾಣಿಸಲು ಅವಕಾಶ ನೀಡಿತ್ತು. ಉಳಿದ ದಿನಗಳಲ್ಲಿ ನಾನ್ ಎಸಿ ಪಾಸ್ ಹೊಂದಿರುವವರು ವಜ್ರ ಬಸ್ ಗಳಲ್ಲಿ ಅನಿಯಮಿತ ಪ್ರಯಾಣಕ್ಕೆ 20 ರೂಪಾಯಿ ಟಿಕೆಟ್ ಖರೀದಿಸಬೇಕಿತ್ತು.

ನಾನ್ ಎಸಿ ಮಾಸಿಕ ಪಾಸ್ ಹೊಂದಿರುವವರಿಗೆ ಭಾನುವಾರದಂದು ನಾವು ವಜ್ರ ಬಸ್‌ಗಳಲ್ಲಿ ಉಚಿತ ಪ್ರಯಾಣವನ್ನು ಹಿಂಪಡೆದಿದ್ದೇವೆ. ನಾನ್ ಎಸಿ ಮಾಸಿಕ ಪಾಸ್ ಹೊಂದಿರುವವರು ವಜ್ರ ಬಸ್‌ಗಳಲ್ಲಿ ಪ್ರಯಾಣಿಸಲು ನಾವು ಎಲ್ಲಾ ದಿನಗಳಲ್ಲಿ ದರವನ್ನು 20 ರಿಂದ 25 ರೂ.ಗೆ ಹೆಚ್ಚಿಸಿದ್ದೇವೆ ಎಂದು ಬಿಎಂಟಿಸಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com