100 ಕೋಟಿ ರು. ಭೂ ಹಗರಣ: ಬಿಡಿಎ ಅಧಿಕಾರಿಗಳ ವಿರುದ್ಧ ಎಫ್ ಐಆರ್

ಬಿಡಿಎ ಸ್ವಾಧೀನಪಡಿಸಿಕೊಂಡ ಜಾಗಕ್ಕೆ ಕಾನೂನು ಬಾಹಿರವಾಗಿ ಬದಲಿ ಜಾಗವನ್ನು ಪಡೆದು ಮಾರಾಟ ಮಾಡುವ ಮೂಲಕ ಪ್ರಾಧಿಕಾರಕ್ಕೆ 100 ಕೋಟಿ ರು. ನಷ್ಟಕ್ಕೆ ಕಾರಣರಾದವರ ವಿರುದ್ಧ ಶನಿವಾರ ಎಫ್ಐಆರ್‌ ದಾಖಲಾಗಿದೆ.
ಬಿಡಿಎ
ಬಿಡಿಎ

ಬೆಂಗಳೂರು: ಬಿಡಿಎ ಸ್ವಾಧೀನಪಡಿಸಿಕೊಂಡ ಜಾಗಕ್ಕೆ ಕಾನೂನು ಬಾಹಿರವಾಗಿ ಬದಲಿ ಜಾಗವನ್ನು ಪಡೆದು ಮಾರಾಟ ಮಾಡುವ ಮೂಲಕ ಪ್ರಾಧಿಕಾರಕ್ಕೆ 100 ಕೋಟಿ ರು. ನಷ್ಟಕ್ಕೆ ಕಾರಣರಾದವರ ವಿರುದ್ಧ ಶನಿವಾರ ಎಫ್ಐಆರ್‌ ದಾಖಲಾಗಿದೆ.

ಪ್ರಾಧಿಕಾರವು ಸ್ವಾಧೀನಪಡಿಸಿಕೊಂಡ ಜಾಗಕ್ಕೆ ಕಾನೂನು ಬಾಹಿರವಾಗಿ ಬದಲಿ ಜಾಗವನ್ನು ಪಡೆದು ನಾಗರಾಜ್ ಹಾಗೂ ಬಿಡಿಎ ಅಧಿಕಾರಿಗಳು ಆ ಜಾಗವನ್ನು ಮಾರಾಟ  ಮಾಡಿದ್ದಾರೆ.

ಈ ಬಿಎಂಟಿಎಫ್ ಸರ್ಕಾರಿ ವ್ಯಾಪ್ತಿಯ ಆಸ್ತಿ ರಕ್ಷಿಸಲು ಮತ್ತು ರಾಜ್ಯದಲ್ಲಿ ಸ್ಥಾಪಿಸಲಾದ ವಿಶೇಷ ಪೊಲೀಸ್ ವ್ಯವಸ್ಥೆ ಆಗಿದೆ. ಇಲ್ಲಿ ನಾಗರಾಜ್ ಎಂಬುವವರ ಜೊತೆ ಅಧಿಕಾರಿಗಳು ಕೈ ಜೋಡಿಸಿದ್ದಾರೆ ಎಂದು ದೂರು ದಾಖಲಿಸಲಾಗಿದೆ. ಹೊರತು ಇನ್ನಿತರ ಅಧಿಕಾರಿಗಳ ಹೆಸರು ಇಲ್ಲವೇ ಎಷ್ಟು ಮಂದಿ ಸಿಬ್ಬಂದಿ ಶಾಮೀಲಾಗಿದ್ದಾರೆ ಎಂದು ನಮೂದಿಸಲಾಗಿಲ್ಲ.

ನಾಗರಾಜ್ ಎಂಬುವವರು ಈರಣ್ಣ ಅವರ ಬಳಿ ಇದ್ದ ಆಸ್ತಿಯ ಜನರಲ್ ಪವರ್ ಆಫ್ ಅಟಾರ್ನಿ (ಜಿಪಿಎ) ಪಡೆದು ತನ್ನ ಸ್ವಂತ ಜಮೀನು ಎಂದು ತೋರಿಸಿದ್ದಾರೆ. ಅಲ್ಲಿ ಬಡಾವಣೆ ನಿರ್ಮಿಸಿ ಇತರರಿಗೆ ಮಾರಾಟ ಮಾಡಿದ್ದಾರೆ. ಈ ಮಧ್ಯೆ ಕಂದಾಯ ಇಲಾಖೆ ಭೂ ಮಾಲೀಕರಿಂದ ಜಮೀನು ಪಡೆದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.

ಆ ಮಾಲೀಕರಿಗೆ ಪರ್ಯಾಯ ಭೂಮಿ ವ್ಯವಸ್ಥೆ ಮಾಡಬೇಕೆಂದು ಕೋರಿತ್ತು.  ನಾಗರಾಜ್ ಕಂದಾಯ ನಿವೇಶನದಾರರಿಂದ ನಿವೇಶನಗಳನ್ನು ತನ್ನ ಹೆಸರಿಗೆ ಬರೆಯಿಸಿಕೊಂಡು ತನಗೆ ಬದಲಿ ನಿವೇಶನಗಳನ್ನು ಮಂಜೂರು ಮಾಡಿ ಎಂದು ಬಿಡಿಎಗೆ ಅರ್ಜಿ ಸಲ್ಲಿಸಿದ್ದರು. ಈ ರೀತಿ ಮಾಡಲು ಸಾಧ್ಯವಿಲ್ಲ ಎಂದು ಅವರ ಅರ್ಜಿಯನ್ನು ಬಿಡಿಎ ತಿರಸ್ಕರಿಸಿತ್ತು.

2012ರಲ್ಲಿ ಆಕಾವತಿ ಬಡಾವಣೆಯ ವಿವಿಧ ಸರ್ವೇ ನಂಬರ್ ಗಳಲ್ಲಿನ 4.3 ಎಕರೆ ಜಮೀನು ಮಂಜೂರು ಮಾಡಲಾಗಿತ್ತು. ಈ ಜಾಗ ಬಫರ್ ಜೋನ್ ಸೇರಿದಂತೆ ಇನ್ನಿತರ ಕಾರಣ ನೀಡಿ ಇಲ್ಲಿ ಮನೆ ಮಾಡಲು ಅಸಾಧ್ಯ ಎಂದಿದ್ದ ನಾಗರಾಜ್ ಬೇರೆಡೆ ತಮಗೆ ಭೂಮಿ ನೀಡುವಂತೆ ಕೋರಿ ಬಿಡಿಎಗೆ ಅರ್ಜಿ ಸಲ್ಲಿಸಿದ್ದರು.

ಬಿಡಿಎ 2014ರಲ್ಲಿ ನಾಗರಾಜ್‌ ಮನವಿಯನ್ನು ಒಪ್ಪಿಕೊಂಡಿತು. ಅವರ ಹೆಸರಿಗೆ ಥಣಿಸಂದ್ರದಲ್ಲಿ ಇತರ ಪ್ರಮುಖ ಸ್ಥಳಗಳಲ್ಲಿ ಭೂಮಿಯನ್ನು ಮಂಜೂರು ಮಾಡಿದ್ದು, ಆಸ್ತಿಯನ್ನು ಅವರ ಹೆಸರಿಗೆ ನೋಂದಾಯಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com