ಆಹಾರ ಧಾನ್ಯಗಳ ಮೇಲೆ ಜಿಎಸ್ ಟಿ: ಅಕ್ಕಿ ಗಿರಣಿದಾರರಿಂದ ನಾಳೆ ಪ್ರತಿಭಟನೆ
ಆಹಾರ ಧಾನ್ಯ ಹಾಗೂ ನಿತ್ಯೋಪಯೋಗಿ ವಸ್ತುಗಳ ಮೇಲೆ ಶೇಕಡಾ 5ರಷ್ಟು ಜಿಎಸ್ ಟಿ ತೆರಿಗೆ ವಿನಾಯ್ತಿಯನ್ನು ಹೊರತುಪಡಿಸಿ ಹೊಸ ತೆರಿಗೆ ವಿಧಿಸಲು ಹೊರಡಿಸಿರುವ ಜಿಎಸ್ ಟಿ ಕೌನ್ಸಿಲ್ ಆದೇಶ ಹಿಂಪಡೆಯಬೇಕೆಂದು ಒತ್ತಾಯಿಸಿ ರಾಜ್ಯ ಅಕ್ಕಿ ಗಿರಣಿದಾರರ ಸಂಘ ನಾಳೆ ಜುಲೈ 15ರಂದು ಪ್ರತಿಭಟನೆ ಹಮ್ಮಿಕೊಂಡಿದೆ.
Published: 14th July 2022 02:54 PM | Last Updated: 14th July 2022 03:06 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಆಹಾರ ಧಾನ್ಯಗಳಾದ ಅಕ್ಕಿ, ರಾಗಿ, ಕಿರುಧಾನ್ಯ (ಸಿರಿಧಾನ್ಯ) ಬೇಳೆಗಳು, ಗೋಧಿ ಹಿಟ್ಟುಗಳು ಹಾಗೂ ನಿತ್ಯೋಪಯೋಗಿ ವಸ್ತುಗಳ ಮೇಲೆ ಶೇಕಡಾ 5ರಷ್ಟು ಜಿಎಸ್ ಟಿ-(ಸರಕು ಮತ್ತು ಸೇವಾ ತೆರಿಗೆ) ತೆರಿಗೆ ವಿನಾಯ್ತಿಯನ್ನು ಹೊರತುಪಡಿಸಿ ಹೊಸ ತೆರಿಗೆ ವಿಧಿಸಲು ಹೊರಡಿಸಿರುವ ಜಿಎಸ್ ಟಿ ಕೌನ್ಸಿಲ್ ಆದೇಶ ಹಿಂಪಡೆಯಬೇಕೆಂದು ಒತ್ತಾಯಿಸಿ ರಾಜ್ಯ ಅಕ್ಕಿ ಗಿರಣಿದಾರರ ಸಂಘ ನಾಳೆ ಜುಲೈ 15ರಂದು ಪ್ರತಿಭಟನೆ ಹಮ್ಮಿಕೊಂಡಿದೆ.
ರಾಜ್ಯ ಅಕ್ಕಿ ಗಿರಣಿದಾರರ ಸಂಘ ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಸಲ್ಲಿಸಲಿದ್ದು ಅತ್ಯಗತ್ಯ ಆಹಾರ ಧಾನ್ಯಗಳನ್ನು ಜಿಎಸ್ ಟಿ ತೆರಿಗೆಯಿಂದ ವಿನಾಯ್ತಿ ನೀಡಬೇಕೆಂದು ಒತ್ತಾಯಿಸುತ್ತಿದೆ. ಸಂಘದ ಪ್ರತಿಭಟನೆಗೆ ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.