ಕೊಡಗು: ಕಾಡಾನೆಗಳ ದಾಳಿಗೆ ಗುಡಿಸಲು ಧ್ವಂಸ, ಕ್ಷಣಮಾತ್ರದಲ್ಲಿ ದಂಪತಿ ಬಚಾವ್, ನಿರ್ಗತಿಕರಾದ ಆದಿವಾಸಿ ಕುಟುಂಬ

ಎಡೆಬಿಡದೆ ಸುರಿಯುತ್ತಿರುವ ಮಳೆಯ ಅವಾಂತರದ ನಡುವೆಯೂ ದಕ್ಷಿಣ ಕೊಡಗಿನ ಗ್ರಾಮಗಳಲ್ಲಿ ಮನುಷ್ಯ-ಆನೆಗಳ ನಡುವಿನ ಸಂಘರ್ಷ ನಿರಂತರವಾಗಿ ಹೆಚ್ಚುತ್ತಿದೆ. 
ಮಳೆ ಕಳೆದುಕೊಂಡು ನಿರಾಶ್ರಿತರಾದ ದಂಪತಿ
ಮಳೆ ಕಳೆದುಕೊಂಡು ನಿರಾಶ್ರಿತರಾದ ದಂಪತಿ

ಮಡಿಕೇರಿ: ಎಡೆಬಿಡದೆ ಸುರಿಯುತ್ತಿರುವ ಮಳೆಯ ಅವಾಂತರದ ನಡುವೆಯೂ ದಕ್ಷಿಣ ಕೊಡಗಿನ ಗ್ರಾಮಗಳಲ್ಲಿ ಮನುಷ್ಯ-ಆನೆಗಳ ನಡುವಿನ ಸಂಘರ್ಷ ನಿರಂತರವಾಗಿ ಹೆಚ್ಚುತ್ತಿದೆ. 

ಇದೇ ವೇಳೆ ನಿರಂತರ ಹವಾಮಾನ ವೈಪರೀತ್ಯದಿಂದಾಗಿ ಅರಣ್ಯ ಇಲಾಖೆ ಆನೆಗಳನ್ನು ಕಾಡಿಗಟ್ಟಲು ಸಾಧ್ಯವಾಗುತ್ತಿಲ್ಲ. ಗುರುವಾರ ಮಧ್ಯರಾತ್ರಿ ಮೂರು ಆನೆಗಳ ಹಿಂಡು ಅಮ್ಮತ್ತಿ ಸಮೀಪದ ಚೆನ್ನಯ್ಯನಕೋಟೆ ಗ್ರಾಮದ ಚೊಟ್ಟೆಪಾರೆ ವ್ಯಾಪ್ತಿಯ ಆದಿವಾಸಿ ಬುಡಕಟ್ಟು ಕುಟುಂಬದ ಗುಡಿಸಲಿನ ಮೇಲೆ ದಾಳಿ ಮಾಡಿವೆ. ಗ್ರಾಮಸ್ಥರಾದ ಲಕ್ಷ್ಮಿ ಮತ್ತು ಶಿವ ಚೊಟ್ಟೆಪಾರೆ ಬುಡಕಟ್ಟು ಬಡಾವಣೆಯ ನಿವಾಸಿಗಳಾಗಿದ್ದು ಹಳೆಯ ಗುಡಿಸಲಿನಲ್ಲಿ ವಾಸವಾಗಿದ್ದರು. 

ಕಳೆದ ರಾತ್ರಿ ಮೂರು ಕಾಡಾನೆಗಳು ಗುಡಿಸಲಿನ ಒಂದು ಭಾಗಕ್ಕೆ ಹಾನಿ ಮಾಡಿ ಮನೆಯಲ್ಲಿ ಕೂಡಿಟ್ಟಿದ್ದ ಆಹಾರ ಪದಾರ್ಥಗಳನ್ನು ತಿಂದು ತೇಗಿದ್ದು ನಂತರ ಇಡೀ ಗುಡಿಸಲನ್ನು ಉರುಳಿಸಿ ಕಾಡಿಗೆ ಮರಳಿವೆ. ಇನ್ನು ಕಾಡಾನೆ ಹಿಂಡು ಕಂಡ ಲಕ್ಷ್ಮಿ ಮತ್ತು ಶಿವ ಸ್ಥಳದಿಂದ ತಪ್ಪಿಸಿಕೊಂಡು ನೆರೆಹೊರೆಯವರ ಗುಡಿಸಲಿನಲ್ಲಿ ಆಶ್ರಯ ಪಡೆದಿದ್ದಾರೆ.

ಮನೆ ಕಳೆದುಕೊಂಡು ಲಕ್ಷ್ಮಿ ಮತ್ತು ಶಿವ ನಿರಾಶ್ರಿತರಾಗಿದ್ದು, ಅಕ್ಕಪಕ್ಕದ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಇನ್ನು ನಿರಾಶ್ರಿತ ದಂಪತಿಗೆ ಅರಣ್ಯ ಇಲಾಖೆ ಯಾವುದೇ ಪರಿಹಾರ ಅಥವಾ ಬೆಂಬಲ ನೀಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಈ ನಡುವೆ ವಿರಾಜಪೇಟೆ ತಾಲೂಕು ತಹಶೀಲ್ದಾರ್ ಅವರು ಪ್ರಕರಣದ ತನಿಖೆಗೆ ಆದೇಶಿಸಿದ್ದು ಅದೇನೇ ಇದ್ದರೂ, ದಂಪತಿಗಳು ಈಗ ನಿರಾಶ್ರಿತರಾಗಿದ್ದು ಬೆಂಬಲಕ್ಕಾಗಿ ಎದುರು ನೋಡುತ್ತಿದ್ದಾರೆ ಎಂದರು.

ಮುಂಗಾರು ಹಂಗಾಮಿನ ನಡುವೆಯೇ ಗ್ರಾಮಗಳಲ್ಲಿ ಆನೆಗಳ ಹಾವಳಿ ಹೆಚ್ಚಾಗುತ್ತಿದ್ದು, ಮೇವು ಅರಸಿ ಹಿಂಡು ಹಿಂಡು ಆನೆಗಳು ಗ್ರಾಮಗಳಿಗೆ ಮುತ್ತಿಗೆ ಹಾಕುತ್ತಿವೆ. ವಿರಾಜಪೇಟೆಯ ಕುಂದಾ ಬೆಟ್ಟದಲ್ಲಿ ಹೆಚ್ಚಿನ ಸಂಖ್ಯೆಲ್ಲಿ ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು, ಹವಾಮಾನ ವೈಪರೀತ್ಯದಿಂದ ಆನೆಗಳನ್ನು ಹಿಮ್ಮೆಟ್ಟಿಸುವ ಕಾರ್ಯಾಚರಣೆ ನಡೆಸಲು ಅರಣ್ಯ ಇಲಾಖೆಗೆ ಸಾಧ್ಯವಾಗುತ್ತಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com