ರಾಜ್ಯ ಸರ್ಕಾರ ಯು ಟರ್ನ್: ಸರ್ಕಾರಿ ಕಚೇರಿಗಳಲ್ಲಿ ಫೋಟೋ, ವಿಡಿಯೊಗೆ ನಿರ್ಬಂಧ ಆದೇಶ ಮಧ್ಯರಾತ್ರಿ ವಾಪಸ್!
ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಅಂದರೆ ಖಾಸಗಿ ವ್ಯಕ್ತಿಗಳು ಅನಧಿಕೃತವಾಗಿ ಫೋಟೋ ತೆಗೆಯುವುದು, ವಿಡಿಯೊ ಮಾಡುವುದಕ್ಕೆ ನಿರ್ಬಂಧ ಹೇರಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹಿಂಪಡೆದಿದೆ.
Published: 16th July 2022 09:05 AM | Last Updated: 16th July 2022 01:49 PM | A+A A-

ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಸರ್ಕಾರಿ ಕಚೇರಿಯ ಸಂಗ್ರಹ ಚಿತ್ರ
ಬೆಂಗಳೂರು: ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಅಂದರೆ ಖಾಸಗಿ ವ್ಯಕ್ತಿಗಳು ಅನಧಿಕೃತವಾಗಿ ಫೋಟೋ ತೆಗೆಯುವುದು, ವಿಡಿಯೊ ಮಾಡುವುದಕ್ಕೆ ನಿರ್ಬಂಧ ಹೇರಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹಿಂಪಡೆದಿದೆ.
U-Turn!
— Devaraj Hirehalli Bhyraiah (@swaraj76) July 16, 2022
Order prohibiting the photo/videography by private persons in government offices withdrawn over night following the instructions of @CMofKarnataka @BSBommai @XpressBengaluru @AshwiniMS_TNIE @DgpKarnataka @IASassociation @GOKegovernance @gokRDPR pic.twitter.com/q9lMRFgQZj
ಸಾರ್ವಜನಿಕರು ಸರ್ಕಾರಿ ಕಚೇರಿಯ ಸಮಯದಲ್ಲಿ ಬಂದು ಫೋಟೋ, ವಿಡಿಯೊ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತಾರೆ. ಇದು ದುರ್ಬಳಕೆಯಾಗುವ ಸಾಧ್ಯತೆಯಿದೆ. ಇದರಿಂದ ಸರ್ಕಾರಕ್ಕೆ ಮತ್ತು ಸರ್ಕಾರದ ಇಲಾಖೆಗಳ ಘನತೆಗೆ ಕುಂದುಂಟಾಗುತ್ತದೆ. ವಿಶೇಷವಾಗಿ ಮಹಿಳಾ ನೌಕರರಿಗೆ ತೊಂದರೆಯುಂಟಾಗುತ್ತದೆ. ಹೀಗಾಗಿ ಸರ್ಕಾರಿ ಕಚೇರಿಯ ಸಮಯದಲ್ಲಿ ಸಾರ್ವಜನಿಕರು ಅನಧಿಕೃತವಾಗಿ ನಿಷೇಧಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಸರ್ಕಾರಕ್ಕೆ ಮನವಿ ಮಾಡಿತ್ತು.
ಸರ್ಕಾರಿ ಕಚೇರಿಗಳಲ್ಲಿ ಫೋಟೋ ವಿಡಿಯೊ ಮಾಡುವುದನ್ನು ನಿಷೇಧಿಸಿ ಸರ್ಕಾರ ನಿನ್ನೆ ಅಂದರೆ ಜುಲೈ 15ರಂದು ಆದೇಶ ಹೊರಡಿಸಿ ಕೆಲವೇ ಗಂಟೆಗಳಲ್ಲಿ ನಿನ್ನೆಯೇ ಮತ್ತೆ ಆದೇಶವನ್ನು ಹಿಂಪಡೆದಿದೆ. ಸರ್ಕಾರದ ಈ ನಡೆ ಸಾರ್ವಜನಿಕರ ನಗೆಪಾಟಲಿಗೀಡುಮಾಡಿದೆ.