ಹಾಲಿನ ಉತ್ಪನ್ನಗಳು-ಆಹಾರ ಧಾನ್ಯಗಳ ಬೆಲೆ ಹೆಚ್ಚಳ, ನಾಳೆಯಿಂದಲೇ ಜಾರಿ: ಜೀವನ ಮತ್ತಷ್ಟು ದುಬಾರಿ

ಮೊಸರು, ಮಜ್ಜಿಗೆ, ತುಪ್ಪ ಸೇರಿದಂತೆ ಹಲವು ಹಾಲಿನ ಉತ್ಪನ್ನಗಳ ದರ ನಾಳೆಯಿಂದ ಹೆಚ್ಚಳವಾಗಲಿದೆ. ಹಾಲಿನ ಉತ್ಪನ್ನಗಳು ಮತ್ತು ಆಹಾರ ಧಾನ್ಯಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ(GST) ವಿನಾಯ್ತಿಯನ್ನು ಜಿಎಸ್ ಟಿ ಮಂಡಳಿ ಹಿಂಪಡೆದ ಹಿನ್ನೆಲೆಯಲ್ಲಿ ಹಾಲಿನ ಉತ್ಪನ್ನಗಳ ಬೆಲೆ ಹೆಚ್ಚಳವಾಗಲಿದೆ. ಆದರೆ ಸದ್ಯಕ್ಕೆ ಹಾಲಿನ ಬೆಲೆ ಮಾತ್ರ ಏರಿಕೆಯಾಗುವುದಿಲ್ಲ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮೊಸರು, ಮಜ್ಜಿಗೆ, ತುಪ್ಪ ಸೇರಿದಂತೆ ಹಲವು ಹಾಲಿನ ಉತ್ಪನ್ನಗಳ ದರ ನಾಳೆಯಿಂದ ಹೆಚ್ಚಳವಾಗಲಿದೆ. ಹಾಲಿನ ಉತ್ಪನ್ನಗಳು ಮತ್ತು ಆಹಾರ ಧಾನ್ಯಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ(GST) ವಿನಾಯ್ತಿಯನ್ನು ಜಿಎಸ್ ಟಿ ಮಂಡಳಿ ಹಿಂಪಡೆದ ಹಿನ್ನೆಲೆಯಲ್ಲಿ ಹಾಲಿನ ಉತ್ಪನ್ನಗಳ ಬೆಲೆ ಹೆಚ್ಚಳವಾಗಲಿದೆ. ಆದರೆ ಸದ್ಯಕ್ಕೆ ಹಾಲಿನ ಬೆಲೆ ಮಾತ್ರ ಏರಿಕೆಯಾಗುವುದಿಲ್ಲ.

ಕಳೆದ ತಿಂಗಳು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಜಿಎಸ್ ಟಿ ಮಂಡಳಿಯ 47ನೇ ಸಭೆಯಲ್ಲಿ ಹಾಲಿನ ಉತ್ಪನ್ನಗಳು ಹಾಗೂ ಆಹಾರ ಧಾನ್ಯಗಳಿಗೆ ನೀಡಲಾಗಿದ್ದ ತೆರಿಗೆ ವಿನಾಯ್ತಿಯನ್ನು ತೆಗೆದುಹಾಕಲಾಗಿತ್ತು. ಹೀಗಾಗಿ ಜಿಎಸ್ ಟಿ ಹೊರೆ ಬೀಳಲಿದ್ದು ಅದನ್ನು ಗ್ರಾಹಕರ ಮೇಲೆ ಹಾಕಲು ಕಂಪೆನಿಗಳು ಮುಂದಾಗಿವೆ.

ಈ ಹಿನ್ನೆಲೆಯಲ್ಲಿ ಕರ್ನಾಟಕ ಹಾಲು ಉತ್ಪಾದಕ ಮಹಾಮಂಡಳವು ಮೊಸರಿನ ಮೇಲೆ 2.20 ರೂಪಾಯಿ, ಲಸ್ಸಿ ಮೇಲೆ 3.75 ರೂಪಾಯಿ, ಮಜ್ಜಿಗೆ ಮೇಲೆ 3 ರೂಪಾಯಿ, ಪನ್ನೀರ್ ಗೆ 15 ರೂಪಾಯಿ ಹೆಚ್ಚಿಸಲು ಮುಂದಾಗಿದೆ. ಇನ್ನು ಖಾಸಗಿ ಕಂಪೆನಿಗಳಾದ ದೊಡ್ಲ ಮತ್ತು ಹೆರಿಟೇಜ್ ಗಳು ಸಹ ಹಾಲಿನ ಉತ್ಪನ್ನಗಳ ದರ ಹೆಚ್ಚಿಸಲಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಈ ಮೂಲಕ ಹಲವು ಅಗತ್ಯ ವಸ್ತುಗಳು ಮತ್ತು ಸೇವೆಗಳ ಬೆಲೆ ಏರಿಕೆಯಿಂದ ಹೊರೆ ಅನುಭವಿಸುತ್ತಿರುವ ಬಡ, ಮಧ್ಯಮ ವರ್ಗದ ಜನರ ಮೇಲೆ ಈಗ ಮತ್ತೊಂದು ಬೆಲೆ ಏರಿಕೆ ಬರೆ ಬೀಳಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com