ಬೆಂಗಳೂರು: ಡಿಕೆ ಶಿವಕುಮಾರ್ ಒಡೆತನದ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಸ್ಕೂಲ್ ಗೆ ಬಾಂಬ್ ಬೆದರಿಕೆ!

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಒಡೆತನದ ನ್ಯಾಷನಲ್ ಹಿಲ್ ವ್ಯೂವ್ ಪಬ್ಲಿಕ್ ಶಾಲೆ ಬಾಂಬ್‌ ಬೆದರಿಕೆ ಸಂದೇಶ ಬಂದಿದೆ. ಆರ್ ಆರ್ ನಗರದಲ್ಲಿರುವ ಈ ಶಾಲೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಇ ಮೇಲ್ ಮೂಲಕ ಬೆದರಿಕೆ ಹಾಕಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಒಡೆತನದ ನ್ಯಾಷನಲ್ ಹಿಲ್ ವ್ಯೂವ್ ಪಬ್ಲಿಕ್ ಶಾಲೆ ಬಾಂಬ್‌ ಬೆದರಿಕೆ ಸಂದೇಶ ಬಂದಿದೆ. ಆರ್ ಆರ್ ನಗರದಲ್ಲಿರುವ ಈ ಶಾಲೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಇ ಮೇಲ್ ಮೂಲಕ ಬೆದರಿಕೆ ಹಾಕಿದ್ದಾರೆ.

ನಿನ್ನೆ ಸಂಜೆ ವೇಳೆ ಇ ಮೇಲ್ ಬಂದಿದ್ದು, ಇಂದು ಬೆಳಿಗ್ಗೆ ಶಾಲೆಗೆ ಬಂದಾಗ ಸಂಗತಿ ಬಯಲಾಗಿದೆ. ಆರ್‌ ಆರ್‌ ನಗರ ಠಾಣೆ ಪೊಲೀಸರು ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಬಾಂಬ್‌ ಬೆದರಿಕೆ ಹಿನ್ನೆಲೆ ಶಾಲೆಯಿಂದ ಮಕ್ಕಳನ್ನ ಬೇರೊಂದು ಯೂನಿಟ್ ಗೆ ಶಿಫ್ಟ್ ಮಾಡಲಾಗಿದ್ದು, ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳ ಪರಿಶೀಲನೆ ನಡೆಸುತ್ತಿದೆ.

ನ್ಯಾಷನಲ್ ಹಿಲ್ ವ್ಯೂವ್ ಸ್ಕೂಲ್​ನ ಯೂನಿಟ್ 3ಗೆ ಮೇಲ್ ಬಂದಿದೆ. ಶಾಲಾ ಸಿಬ್ಬಂದಿ ಯೂನಿಟ್ 1, ಯೂನಿಟ್ 2ಗೆ ಒಂದೂವರೆ ಸಾವಿರ ಮಕ್ಕಳನ್ನ ಶಿಫ್ಟ್ ಮಾಡಿದ್ದಾರೆ. ಬೆದರಿಕೆ ಮೇಲ್ ಬಂದಿರುವುದು ತಿಳಿದ ಕೂಡಲೇ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ.  

"Huchcha venkat, hachaswamyvenkat96@gmail.com" ಐಡಿಯಿಂದ ಮೇಲ್ ಬಂದಿದೆ. ಮೇಲ್ ಸಾರಾಂಶ ಹೀಗಿದೆ: "ಶಾಲೆಯ ಆವರಣದಲ್ಲಿ ಬಾಂಬ್ ಇಡಲಾಗಿದೆ, ಅದು ನಾಳೆ 10 ಗಂಟೆಗೆ ಸ್ಫೋಟಗೊಳ್ಳುತ್ತದೆ, ನಿಮ್ಮ ಕೈಲಾದಷ್ಟು ಪ್ರಯತ್ನಿಸಿ. ಅದರ ಪರಿಣಾಮವು 200 ಅಡಿ ವ್ಯಾಪ್ತಿಯವರೆಗೆ ಇರುತ್ತದೆ".

ಈ ವಿಚಾರದ ಬಳಿಕ  ಶಿಕ್ಷಕರು ಹಾಗೂ ಮಕ್ಕಳು ಆತಂಕಗೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಆರ್.ಆರ್.ನಗರ, ಜ್ಞಾನ ಭಾರತಿ ,ಬ್ಯಾಟರಾಯನಪುರ ಸುತ್ತಮುತ್ತಲಿನ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಕೂಲ್ ಬಳಿ ಪರಿಶೀಲನೆ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com