ಬೆಂಗಳೂರು: ಚಿರತೆ ಹೆಜ್ಜೆಗುರುತು, ಸೂಳಿಕೆರೆಪಾಳ್ಯ ನಿವಾಸಿಗಳಲ್ಲಿ ಆತಂಕ

ನಾಡಪ್ರಭು ಕೆಂಪೇಗೌಡ ಬಡಾವಣೆಯ ಸೂಳಿಕೆರೆಪಾಳ್ಯ ಬ್ಲಾಕ್‌-8ರಲ್ಲಿ ಚಿರತೆ ಹೆಜ್ಜೆಗುರುತುಗಳು ಕಾಣಿಸಿಕೊಂಡಿವೆ ಎಂಬ ಸುದ್ದಿ ಹರಡಿದ ನಂತರ ನಿವಾಸಿಗಳು ಕಂಗಾಲಾಗಿದ್ದಾರೆ.
ಚಿರತೆ ಹೆಜ್ಜೆ ಗುರುತು
ಚಿರತೆ ಹೆಜ್ಜೆ ಗುರುತು

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಯ ಸೂಳಿಕೆರೆಪಾಳ್ಯ ಬ್ಲಾಕ್‌-8ರಲ್ಲಿ ಚಿರತೆ ಹೆಜ್ಜೆಗುರುತುಗಳು ಕಾಣಿಸಿಕೊಂಡಿವೆ ಎಂಬ ಸುದ್ದಿ ಹರಡಿದ ನಂತರ ನಿವಾಸಿಗಳು ಕಂಗಾಲಾಗಿದ್ದಾರೆ.

ಹೆಜ್ಜೆ ಗುರುತುಗಳು ಚಿರತೆಯದ್ದು ಎಂದು ಸ್ಥಳೀಯರು ಹೇಳಿದರೆ, ಇದು ನಾಯಿ ಅಥವಾ ದೊಡ್ಡ ಬೆಕ್ಕಿನ ಹೆಜ್ಜೆ ಗುರುತಾಗಿರಲೂಬಹುದು ಎಂದು ಕರ್ನಾಟಕ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಸೂಳಿಕೆರೆಪಾಳ್ಯ ಬಡಾವಣೆಯು ಅರಣ್ಯಕ್ಕೆ ಸಮೀಪದಲ್ಲಿರುವ ಕಾರಣ ಚಿರತೆ ಈ ಪ್ರದೇಶಕ್ಕೆ ನುಗ್ಗುವ ಸಾಧ್ಯತೆಯನ್ನು ತಳ್ಳಿಹಾಕಿಲ್ಲ.

ಈ ಸಂಬಂಧ ಈ ಭಾಗದಲ್ಲಿ ಪರಿಶೀಲನ ನಡೆಸಲಾಗಿದೆ. ನಾಗರಿಕರು ಭಯಪಡುವ ಅಗತ್ಯವಿಲ್ಲ, ಯಾವುದೇ ಸಮಸ್ಯೆಗಳಿದ್ದರೆ ಅವರು ತಕ್ಷಣ ಅದನ್ನು ವರದಿ ಮಾಡಬೇಕು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎರಡು ವರ್ಷಗಳ ಹಿಂದೆ ಭೀಮನಕುಪ್ಪೆಯಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಈಗ ಸೂಳಿಕೆರೆಪಾಳ್ಯ ಬಳಿ ಚಿರತೆ ಕಾಣಿಸಿಕೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಚಿರತೆಯನ್ನು ಹಿಡಿದು ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಲು ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ಸ್ಥಳೀಯ ನಿವಾಸಿ ಸೂರ್ಯ ಎಸ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com