ತುಮಕೂರು: ಕಡೆಗೂ ಸಿಕ್ಕ 'ರುಸ್ತುಮ್'; ಗಿಳಿ ಹುಡುಕಿಕೊಟ್ಟವರಿಗೆ ಸಿಕ್ಕಿತು 85 ಸಾವಿರ ಉಡುಗೊರೆ!

ಪ್ರೀತಿಯ ಮುದ್ದಿನ 'ರುಸ್ತುಮ್', ಬೂದು ಆಫ್ರಿಕನ್ ಗಂಡು ಗಿಳಿ, ಒಂದು ವಾರದ ನಂತರ ಅದರ ಸ್ತ್ರೀ ಸಂಗಾತಿಯಾದ 'ರಿಯೊ' ನೊಂದಿಗೆ ಮತ್ತೆ ಸೇರಿಕೊಂಡಿದ್ದರಿಂದ ಅರ್ಜುನ್ ಕುಟುಂಬದ ಸಂತೋಷಕ್ಕೆ ಮಿತಿಯೇ ಇರಲಿಲ್ಲ.
ಗಿಳಿ ಹುಡುಕಿಕೊಟ್ಟವರಿಗೆ 85 ಸಾವಿರ ಬಹುಮಾನ
ಗಿಳಿ ಹುಡುಕಿಕೊಟ್ಟವರಿಗೆ 85 ಸಾವಿರ ಬಹುಮಾನ

ತುಮಕೂರು: ಪ್ರೀತಿಯ ಮುದ್ದಿನ 'ರುಸ್ತುಮ್', ಬೂದು ಆಫ್ರಿಕನ್ ಗಂಡು ಗಿಳಿ, ಒಂದು ವಾರದ ನಂತರ ಅದರ ಸ್ತ್ರೀ ಸಂಗಾತಿಯಾದ 'ರಿಯೊ' ನೊಂದಿಗೆ ಮತ್ತೆ ಸೇರಿಕೊಂಡಿದ್ದರಿಂದ ಅರ್ಜುನ್ ಕುಟುಂಬದ ಸಂತೋಷಕ್ಕೆ ಮಿತಿಯೇ ಇರಲಿಲ್ಲ.

ಸುಮಾರು ಒಂದು ವಾರದ ಹಿಂದೆ ಗಿಳಿ ನಾಪತ್ತೆಯಾಗಿತ್ತು. ಮನೆಯಿಂದ ಹಾರಿ ಹೋದ ರುಸ್ತುಂ ತುಮಕೂರು ಹೊರವಲಯದ ಬಂಡೆಪಾಳ್ಯ ನಿವಾಸಿ ಶ್ರೀನಿವಾಸ್ ಎಂಬುವರಿಗೆ ಸಿಕ್ಕಿತ್ತು. ಗಿಳಿ ಬಗ್ಗೆ ಅರಿವಿಲ್ಲದ ಅವರು ಇದನ್ನ ಮನೆಯಲ್ಲೇ ಸಾಕಿಕೊಂಡಿದ್ದರು. ನಿನ್ನೆ ದಿಢೀರ್​ ಅಂತ ಜಾಹೀರಾತು ಕಂಡ ತಕ್ಷಣ ಅರ್ಜುನ್​ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದ ಕೂಡಲೇ ಇಡೀ ಕುಟುಂಬ ಓಡೋಡಿ ಬಂದು ಪ್ರೀತಿಯ ಗಿಳಿಯನ್ನು ಕಂಡು ಭಾವುಕವಾಗಿದೆ. ಮಾತ್ರವಲ್ಲದೆ ಗಿಳಿ ಹುಡುಕಿಕೊಟ್ಟವರಿಗೆ 85,000 ಬಹುಮಾನವನ್ನೂ ನೀಡಿದ್ದಾರೆ.

<strong>ಗ್ರೇ ಆಫ್ರಿಕನ್ ಗಿಳಿ ರುಸ್ತುಮ್ ಜೊತೆ ಅರ್ಜುನ್ ಕುಟುಂಬ</strong>
ಗ್ರೇ ಆಫ್ರಿಕನ್ ಗಿಳಿ ರುಸ್ತುಮ್ ಜೊತೆ ಅರ್ಜುನ್ ಕುಟುಂಬ

ತುಮಕೂರಿನ ಜಯನಗರ ಬಡಾವಣೆಯ ಅರ್ಜುನ್ ಎಂಬುವರ ಆಫ್ರಿಕನ್ ಗ್ರೇ ತಳಿಯ ಗಿಳಿ ರುಸ್ತುಮ್ ಜುಲೈ 19 ರಂದು ಪುರ್ ಎಂದು ಹಾರಿ ಹೋಗಿತ್ತು. ಇಡೀ ಕುಟುಂಬವೇ ಗಿಳಿಗಾಗಿ ಬೀದಿ ಬೀದಿ ಅಲೆದಿತ್ತು. ಆತಂಕಗೊಂಡ ಅರ್ಜುನ್ ಗಿಣಿ ಪತ್ತೆಗೆ 1.45 ಲಕ್ಷ ರೂ.  ಖರ್ಚು ಮಾಡಿ ಡ್ರೋಣ್ ಕ್ಯಾಮೆರಾ ಮೂಲಕ ಹುಡುಕಾಟ ನಡೆಸಿದ್ದರು.

ಮಾಧ್ಯಮದಲ್ಲಿನ ಭಾರೀ ಪ್ರಚಾರವು ಮಾಲೀಕ ಮತ್ತು ರಕ್ಷಕನನ್ನು ಸಂಪರ್ಕಿಸಲು ಸಹಾಯ ಮಾಡಿತು. ಈಗ, ರುಸ್ತುಮ್ ಮತ್ತು ರಿಯೊ ಎರಡೂ ಗುಜರಾತ್‌ನ ಕೆವಾಡಿಯಾದಲ್ಲಿರುವ ಜಿಯೋಡೆಸಿಕ್ ಏವಿಯರಿ ಡೋಮ್‌ಗೆ ಸ್ಥಳಾಂತರಗೊಳ್ಳಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com