ಅಂಡರ್ ವೇರ್ ಇಲಾಸ್ಟಿಕ್, ಬೆಡ್ ಸ್ಪ್ರೆಡ್ ಬಳಸಿ ಮೊಬೈಲ್ ಫೋನ್ ಕಳ್ಳಸಾಗಣೆ ಮಾಡಿಕೊಂಡ ಕೈದಿಗಳು!

ಈ ಕೈದಿಗಳು ಕಳ್ಳಸಾಗಣೆ ಮಾಡಲು ಮಾಡುವ ಐಡಿಯಾಗಳು, ಹೂಡುವ ಹೊಸ ಆಲೋಚನೆಗಳು ಖಂಡಿತ ಬೆಚ್ಚಿಬೀಳಿಸದೆ ಇರದು.
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಬೆಂಗಳೂರು: ಈ ಕೈದಿಗಳು ಕಳ್ಳಸಾಗಣೆ ಮಾಡಲು ಮಾಡುವ ಐಡಿಯಾಗಳು, ಹೂಡುವ ಹೊಸ ಆಲೋಚನೆಗಳು ಖಂಡಿತ ಬೆಚ್ಚಿಬೀಳಿಸದೆ ಇರದು. ಡ್ರಗ್ಸ್, ಮೊಬೈಲ್ ಫೋನ್ ಮತ್ತು ಇತರ ವಸ್ತುಗಳನ್ನು ಕಳ್ಳಸಾಗಣೆ ಮಾಡಲು ಹೊಸ ಹೊಸ ಆಲೋಚನೆಗಳನ್ನು ಹುಡುಕುತ್ತಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿರುವ ಜಿಲ್ಲಾ ಕಾರಾಗೃಹದ ಕೈದಿಗಳು ಕವೆಗೋಲು ಅಥವಾ ಕವಣೆಯಂತ್ರ ಮಾಡಲು ಖಾಲಿ ಟೂತ್‌ಪೇಸ್ಟ್ ಟ್ಯೂಬ್‌ಗಳು ಮತ್ತು ತಮ್ಮ ಒಳ ಉಡುಪುಗಳ ಇಲ್ಯಾಸ್ಟಿಕ್ ಸ್ಟ್ರಾಪ್ ಗಳನ್ನು ಬಳಸಿರುವ ಘಟನೆ ನಡೆದಿದೆ. 

ಬೆಡ್‌ಸ್ಪ್ರೆಡ್‌ಗಳನ್ನು ಜೋಡಿಸಿ ಅವರು ಹಗ್ಗ ತಯಾರಿಸಿದ್ದಾರೆ. ಸ್ಲಿಂಗ್‌ಶಾಟ್ ನ್ನು ಬಳಸಿ, ಅವರು ಹಾಸಿಗೆಯ ಹೊದಿಕೆಯಿಂದ ಮಾಡಿದ ಹಗ್ಗದ ಒಂದು ತುದಿಯನ್ನು ಜೈಲಿನ ಆವರಣದ ಗೋಡೆಯ ಹೊರಗೆ ಎಸೆದಿದ್ದಾರೆ. 

ಗೋಡೆಯ ಹೊರಗೆ ಕಾಯುತ್ತಿದ್ದ ಅವರ ಸಹಚರರು ಹಗ್ಗವನ್ನು ಎತ್ತಿಕೊಂಡು 12 ಮೊಬೈಲ್ ಫೋನ್‌ಗಳನ್ನು ಅದಕ್ಕೆ ಕಟ್ಟಿದ್ದಾರೆ. ನಂತರ ಕೈದಿಗಳು ಹಗ್ಗವನ್ನು ಹಿಂದಕ್ಕೆ ಎಳೆದುಕೊಂಡಿದ್ದಾರೆ. ಈ ಸೃಜನಾತ್ಮಕ ಐಡಿಯಾ ತಕ್ಷಣವೇ ಜೈಲು ಸಿಬ್ಬಂದಿಯ ಗಮನಕ್ಕೆ ಬಂದಿದ್ದು, ಮೂವರು ಕೈದಿಗಳಾದ ವಿ ಅಪ್ಪು ನಾಯ್ಕ, ಎ ನವೀದ್ ಖಾನ್ ಮತ್ತು ಇ ಗಿರೀಶ್ ವಿರುದ್ಧ ದೂರು ದಾಖಲಿಸಲಾಗಿದೆ.

ಎಲ್ಲಿ ನಡೆದಿದ್ದು?: ರಾಮನಗರ ಸಮೀಪದ ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಈ ಘಟನೆ ನಡೆದಿದೆ. ಜಿಲ್ಲಾ ಕಾರಾಗೃಹ ಮತ್ತು ಸುಧಾರಣಾ ಸೇವೆಯ ಅಧೀಕ್ಷಕ ಅಂಬರೀಷ್ ಎಸ್ ಪೂಜಾರಿ ಮೊನ್ನೆ ಗುರುವಾರ ದೂರು ದಾಖಲಿಸಿದ್ದಾರೆ. ಜೈಲು ಸಿಬ್ಬಂದಿ 12 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಕೈದಿಗಳು ಮಧ್ಯರಾತ್ರಿ 1.45 ರಿಂದ 2 ರ ನಡುವೆ ತಾವು ಇರುವ ಕಾರಾಗೃಹಕ್ಕೆ ಫೋನ್‌ಗಳನ್ನು ಕಳ್ಳಸಾಗಣೆ ಮಾಡಿದ್ದಾರೆ. ಜೈಲಿನ ಸಿಬ್ಬಂದಿಗಳಾದ ದೀಪಕ್, ಪುಷ್ಪಾ ಮತ್ತು ಶ್ವೇತಾ ಅವರು ಸಹಾಯಕ ಸಿಬ್ಬಂದಿ ಪ್ರವೀಣ್ ಕುಮಾರ್ ಅವರಿಗೆ ವಿಷಯ ತಿಳಿಸಿ ಅವರು ಅಧೀಕ್ಷಕರಿಗೆ ಸುದ್ದಿ ಮುಟ್ಟಿಸಿದರು.

ಸಿಬ್ಬಂದಿ ಜೈಲಿನ ಗೋಡೆಯ ಹಿಂಬದಿ ಮೂಲಕ ಹೋಗಿ ನೋಡಿದಾಗ ಜನರು ಅಲ್ಲಿಂದ ಓಡಿಹೋಗುವುದನ್ನು ನೋಡಿದರು. ಕಾರಾಗೃಹದಲ್ಲಿ ಹುಡುಕಾಟ ನಡೆಸಲಾಯಿತು. 12 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು ಅವುಗಳಲ್ಲಿ ಹೆಚ್ಚಿನವು ಬೇಸಿಕ್ ಹ್ಯಾಂಡ್ ಸೆಟ್ ಗಳಾಗಿವೆ. ಮೂವರ ವಿರುದ್ಧ ಕಾರಾಗೃಹ ಕಾಯ್ದೆ 1894ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com