ಬೆಳಗಾವಿ: ಇಬ್ಬರನ್ನು ಕೊಲೆ ಮಾಡಿದ್ದ ಮೂವರು ಅಪರಾಧಿಗಳಿಗೆ ಮರಣದಂಡನೆ

2013ರಲ್ಲಿ ದಂಪತಿಯನ್ನು ಹತ್ಯೆಗೈದಿದ್ದ ಬೆಳಗಾವಿ ತಾಲೂಕಿನ ಮೂವರಿಗೆ ಗಲ್ಲು ಚಿಕ್ಕೋಡಿಯ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು  ಶಿಕ್ಷೆ ವಿಧಿಸಿ ಬುಧವಾರ ತೀರ್ಪು ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಳಗಾವಿ: 2013ರಲ್ಲಿ ದಂಪತಿಯನ್ನು ಹತ್ಯೆಗೈದಿದ್ದ ಬೆಳಗಾವಿ ತಾಲೂಕಿನ ಮೂವರಿಗೆ ಗಲ್ಲು ಚಿಕ್ಕೋಡಿಯ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು  ಶಿಕ್ಷೆ ವಿಧಿಸಿ ಬುಧವಾರ ತೀರ್ಪು ನೀಡಿದೆ.

ಚಿಕ್ಕೋಡಿ ತಾಲೂಕಿನ ಮಮದಾಪುರ ಕೆಕೆ ನಿವಾಸಿಗಳಾದ ಬಾಬು ಮುತ್ತಪ್ಪ, ನಾಗಪ್ಪ ಮುತ್ತಪ್ಪ ಆಕಳೆ ಮತ್ತು ಮುತ್ತಪ್ಪ ಭೀಮಪ್ಪ ಆಕಳೆ ಮೂವರು ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾರೆ.

2013ರ ಅಕ್ಟೋಬರ್ 22ರಂದು ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ದಂಪತಿಯನ್ನು ಬರ್ಬರವಾಗಿ ಕೊಂದಿದ್ದರು.

ಆರೋಪಿಗಳಲ್ಲಿ ಒಬ್ಬನಾದ ಬಾಬು ಮುತ್ತಪ್ಪ ತನ್ನ ಪತ್ನಿ ಸಂಗೀತಾ, ಮಮದಾಪುರದ ಕೆ.ಕೆ. ಬಸವರಾಜ ಬುರ್ಜಿ ಎಂಬಾತನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ, ಇಬ್ಬರು ಸಂಬಂಧಿಕರೊಂದಿಗೆ ಸಂಗೀತಾ ಮತ್ತು ಬುರ್ಜಿಯನ್ನು ಕೊಲ್ಲಲು ನಿರ್ಧರಿಸಿದ್ದ.

2013ರ ಅಕ್ಟೋಬರ್ 22ರಂದು ಸಂಗೀತಾ ಮತ್ತು ಬುರ್ಜಿಯನ್ನು ಮಮದಾಪುರ ಕೆಕೆಯಲ್ಲಿರುವ ಮನೆಯಿಂದ ಹೊರಗೆ ಕರೆತಂದ ಮೂವರು, ಇಬ್ಬರನ್ನು ಮರಕ್ಕೆ ಕಟ್ಟಿ ಹಾಕಿದ್ದರು. ನಂತರ ಅದೇ ಸ್ಥಳದಲ್ಲಿ ಇಬ್ಬರನ್ನು ಬರ್ಬರವಾಗಿ ಕೊಂದಿದ್ದರು.

ಬುರ್ಜಿಯ ಸಂಬಂಧಿ ಶಿವಾನಂದ್ ಮೂವರನ್ನು ಕೊಲ್ಲುವುದನ್ನು ತಡೆಯಲು ಪ್ರಯತ್ನಿಸಿದಾಗ, ಅವರ ಮೇಲೂ ಹಲ್ಲೆ ನಡೆಸಲಾಯಿತು.  ಮೂವರ ವಿರುದ್ಧ ಚಿಕ್ಕೋಡಿಯಲ್ಲಿ ಪ್ರಕರಣ ದಾಖಲಾದ ನಂತರ ಅಂದಿನ ಪೊಲೀಸ್ ಇನ್ಸ್ ಪೆಕ್ಟರ್ ಎಂ.ರಗಿ ಪ್ರಕರಣದ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com