ಸಿಗರೇಟು, ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಕಡ್ಡಾಯ ಪರವಾನಗಿ ನಿಯಮ ಜಾರಿ: ಬಿಬಿಎಂಪಿ

ಕರ್ನಾಟಕದಲ್ಲಿ ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಮಾರಾಟವು ಪರವಾನಗಿ ಪಡೆದ ಮಾರಾಟಗಾರರ ಮೂಲಕ ಮಾತ್ರ ಮಾರಾಟವಾಗಲಿದೆ. 
ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು ಬೆಂಗಳೂರಿನಲ್ಲಿ ವಶಪಡಿಸಿಕೊಂಡ ಮಾದಕ ದ್ರವ್ಯಗಳನ್ನು ಪರಿಶೀಲಿಸಿದರು
ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು ಬೆಂಗಳೂರಿನಲ್ಲಿ ವಶಪಡಿಸಿಕೊಂಡ ಮಾದಕ ದ್ರವ್ಯಗಳನ್ನು ಪರಿಶೀಲಿಸಿದರು

ಬೆಂಗಳೂರು: ಕರ್ನಾಟಕದಲ್ಲಿ ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಮಾರಾಟವು ಪರವಾನಗಿ ಪಡೆದ ಮಾರಾಟಗಾರರ ಮೂಲಕ ಮಾತ್ರ ಮಾರಾಟವಾಗಲಿದೆ. 

ತಂಬಾಕು ಉತ್ಪನ್ನಗಳ ಮಾರಾಟಗಾರರ ಪರವಾನಗಿ ನಿಯಮವನ್ನು ನಗರಾಭಿವೃದ್ಧಿ ಇಲಾಖೆ (ಯುಡಿಡಿ) ಶೀಘ್ರದಲ್ಲೇ ಜಾರಿಗೆ ತರಲಿದೆ. ಅನಿಯಂತ್ರಿತ ತಂಬಾಕು ಮಾರುಕಟ್ಟೆಯ ಮೇಲೆ ತಪಾಸಣೆ ನಡೆಸುವುದು ಮಾತ್ರವಲ್ಲದೆ ಉಲ್ಲಂಘನೆಯಾಗಿದ್ದು ಕಂಡುಬಂದಲ್ಲಿ ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಅಡಿಯಲ್ಲಿ ಕೇಸು ದಾಖಲಿಸಲಾಗುತ್ತದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP), ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ ತಿಳಿಸಿದ್ದಾರೆ.

ನಗರ ಸ್ಥಳೀಯ ಸಂಸ್ಥೆಯು ತಂಬಾಕು ಉತ್ಪನ್ನಗಳಿಗೆ ಮಾರಾಟಗಾರರ ಪರವಾನಗಿ ಪ್ರಾಧಿಕಾರವಾಗಿರುತ್ತದೆ. ಬೆಂಗಳೂರಿನ ವಿಚಾರದಲ್ಲಿ ಅದು ಬಿಬಿಎಂಪಿಯಾಗಿರುತ್ತದೆ. ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಅನಿಯಂತ್ರಿತ ಮಾರುಕಟ್ಟೆಯು ಯುವಜನರಲ್ಲಿ ಅವುಗಳ ಸುಲಭ ಲಭ್ಯತೆ ಮತ್ತು ಬಳಕೆಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ, ಅವರಲ್ಲಿ ಹೆಚ್ಚಿನವರು ಕಾಲೇಜು ವಿದ್ಯಾರ್ಥಿಗಳಾಗಿದ್ದು, ವಿದ್ಯಾರ್ಥಿ ಸಮುದಾಯ ಹಾಗೂ ಯುವಕರಲ್ಲಿ ತಂಬಾಕು ಸೇವನೆಯ ಉಲ್ಬಣವನ್ನು ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ವಿದ್ಯಾರ್ಥಿ ಸಮುದಾಯದಲ್ಲಿ ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಎನ್‌ಸಿಸಿ ಮತ್ತು ಎನ್‌ಎಸ್‌ಎಸ್ ಕೆಡೆಟ್‌ಗಳ ಬೆಂಬಲವನ್ನು ಪಡೆಯಲು ಯೋಜಿಸುತ್ತಿದೆ. ಯುವ ಸಬಲೀಕರಣ ಸಚಿವ ನಾರಾಯಣ ಗೌಡ ಅವರ ಮಾರ್ಗದರ್ಶನದಲ್ಲಿ ಇಲಾಖೆಯು ಸುಮಾರು ಐದು ಲಕ್ಷ ಎನ್‌ಸಿಸಿ/ಎನ್‌ಎಸ್‌ಎಸ್ ಸ್ವಯಂಸೇವಕರ ಬೆಂಬಲವನ್ನು ಪಡೆಯಲಿದೆ ಎಂದು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ತಿಳಿಸಿದರು.

"ನಾವು ಯುವಜನರಲ್ಲಿ, ವಿಶೇಷವಾಗಿ ವಿದ್ಯಾರ್ಥಿ ಸಮುದಾಯದಲ್ಲಿ ಎನ್‌ಸಿಸಿ/ಎನ್‌ಎಸ್‌ಎಸ್ ಕೆಡೆಟ್‌ಗಳು, ಪೋಷಕ-ಶಿಕ್ಷಕ ಸಮುದಾಯ ಮತ್ತು ಇತರ ಮಧ್ಯಸ್ಥಗಾರರ ಸಹಾಯದಿಂದ ಜಾಗೃತಿ ಮೂಡಿಸಲು ಮತ್ತು ಜಾಗರೂಕತೆಯನ್ನು ಹೆಚ್ಚಿಸಲು ಬಹು-ಹಂತದ ವಿಧಾನವನ್ನು ಅಳವಡಿಸುತ್ತೇವೆ. ಸ್ವಯಂಸೇವಕರು ಸಹ ಕಾಲೇಜು ಕ್ಯಾಂಪಸ್‌ಗಳಲ್ಲಿ ಮತ್ತು ಸುತ್ತಮುತ್ತಲಿನ ತಂಬಾಕು ಮಾರಾಟಗಾರರು ಮತ್ತು ಡ್ರಗ್ ಪೆಡ್ಲರ್‌ಗಳ ವಿರುದ್ಧ ತಡೆಗಟ್ಟುವ ಕ್ರಮಕ್ಕಾಗಿ ರಾಜ್ಯ ಅಬಕಾರಿ ಇಲಾಖೆಯ ಮಾದಕ ದ್ರವ್ಯ ಬಳಕೆ ವಿರೋಧಿ ವಿಭಾಗದೊಂದಿಗೆ ಸಂಪರ್ಕದಲ್ಲಿರಲಿದ್ದಾರೆ ಎಂದರು.

ಶೇಕಡಾ 80ರಷ್ಟು ಮಾದಕ ವ್ಯಸನಿಗಳು ತಂಬಾಕು ಸೇವನೆ ಮೂಲಕ ಚಟ ಪ್ರಾರಂಭಿಸುತ್ತಾರೆ. "ಚಿಕ್ಕ ವಯಸ್ಸಿನಲ್ಲೇ ತಂಬಾಕು ಸೇವನೆಯು ವ್ಯಕ್ತಿಯನ್ನು ಮಾದಕ ವ್ಯಸನಕ್ಕೆ ಗುರಿಯಾಗುವಂತೆ ಮಾಡುತ್ತದೆ. ಅವರು ಕೊಕೇನ್, ಹೆರಾಯಿನ್ ಮತ್ತು ಇತರ ಮಾದಕ ಮತ್ತು ಸೈಕೋಟ್ರೋಪಿಕ್ ಡ್ರಗ್ಸ್‌ಗಳನ್ನು ಪ್ರಯೋಗಿಸುವ ಸಾಧ್ಯತೆ ಹೆಚ್ಚು. ಡ್ರಗ್‌ಗಳು ಕಾನೂನುಬಾಹಿರ ಮತ್ತು ಸುಲಭವಾಗಿ ಲಭ್ಯವಿಲ್ಲ. ಆದಾಗ್ಯೂ, ವ್ಯಸನಿಗಳನ್ನು ಅವರ ಕಡೆಗೆ ಕರೆದೊಯ್ಯುವ ಏಕೈಕ ವಸ್ತುವೆಂದರೆ ತಂಬಾಕು. ಯುವಕರು ಮಾದಕ ವ್ಯಸನದ ವಿರುದ್ಧದ ಅಭಿಯಾನಕ್ಕೆ ಸೇರಬೇಕು, ಇದು ಮಾದಕ ವ್ಯಸನದ ಏಕೈಕ ಅತ್ಯಂತ ತಡೆಗಟ್ಟುವ ಕಾರಣವಾಗಿದೆ ಎಂದು ತಂಬಾಕು ನಿಯಂತ್ರಣದ ಮೇಲಿನ ರಾಜ್ಯ ಉನ್ನತ-ಶಕ್ತಿ ಸಮಿತಿಯ ಸದಸ್ಯ ಡಾ ವಿಶಾಲ್ ರಾವ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com