ಮೈಸೂರು: ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ 'ಹೈಪರ್ ಆ್ಯಕ್ಟಿವ್' ಸರಗಳ್ಳ 'ದೇವಿ' ಬಂಧನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ವಶ

ಮೂಲತಃ ನಾಚಿಕೆ ಮತ್ತು ಅಂತರ್ಮುಖಿಯಾಗಿರುವ ಫರಾಝ್ ಅಪರಾಧ ಕೃತ್ಯಗಳನ್ನು ಆರಂಭಿಸುತ್ತಿದ್ದಂತೆಯೇ ಹೈಪರ್ ಆ್ಯಕ್ಟಿವ್ ಆಗುತ್ತಿದ್ದ. ಮಹಿಳೆಯರ ಚಿನ್ನದ ಸರ ಕಸಿಯುತ್ತಿದ್ದ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮೈಸೂರು: ಸರಸ್ವತಿಪುರಂ ಪೊಲೀಸರು ಇತ್ತೀಚೆಗೆ ಚೈನ್ ಸ್ನಾಚರ್ ಫರಾಜ್ ಎಂಬಾತನನ್ನು ಬಂಧಿಸಿದ್ದಾರೆ, ಈತ ಅಪರಾಧದ ಜಗತ್ತಿನಲ್ಲಿ ‘ದೇವಿ’ ಎಂದೂ ಕರೆಯಲ್ಪಡುತ್ತಾನೆ. ಆದರೆ ಕುತೂಹಲಕಾರಿ ಅಂಶವೆಂದರೆ ಫರಾಜ್‌ಗೆ ಆತನ ಆಪ್ತ ಮುಸ್ಲಿಂ ಸ್ನೇಹಿತರೇ   ಹಿಂದೂ ದೇವತೆಯ ಹೆಸರನ್ನು ಇಟ್ಟಿದ್ದಾರೆ.

ಮೂಲತಃ ನಾಚಿಕೆ ಮತ್ತು ಅಂತರ್ಮುಖಿಯಾಗಿರುವ ಫರಾಝ್ ಅಪರಾಧ ಕೃತ್ಯಗಳನ್ನು ಆರಂಭಿಸುತ್ತಿದ್ದಂತೆಯೇ ಹೈಪರ್ ಆ್ಯಕ್ಟಿವ್ ಆಗುತ್ತಿದ್ದ. ಮಹಿಳೆಯರ ಚಿನ್ನದ ಸರ ಕಸಿಯುತ್ತಿದ್ದ.

ಹಿಂದೂ ಸಂಪ್ರದಾಯದಂತೆ ಸಾಮಾನ್ಯವಾಗಿ ಪರಕಾಯ ಪ್ರವೇಶ ಮಾಡುವುದು ಅಂದರೆ, ಮಾನವನ ದೇಹದಲ್ಲಿ ಅಗೋಚರ ಶಕ್ತಿ ಸೇರ್ಪಡೆಯಾದಾಗ  ಅನಿಯಮತವಾಗಿ ವರ್ತಿಸುತ್ತಾನೆ. ಅದೇ ರೀತಿ ಫರಾಝ್ ಕೂಡ ಬೈಕ್ ಹತ್ತಿದ ಕೂಡಲೇ ದೇವಿ ಮೈಮೇಲೆ ಬಂದಂತೆ ವರ್ತಿಸುತ್ತಾನೆ.

ಮಂಡಿ ಮೊಹಲ್ಲಾದಲ್ಲಿ ಫರಾಜ್ ಅವರ ಸ್ವಂತ ಸ್ನೇಹಿತರು ಮತ್ತು ಸಹಚರರು ಅವನಿಗೆ 'ದೇವಿ' ಎಂದು ಹೆಸರಿಟ್ಟರು. ಫರಾಜ್ ತನ್ನ ಬೈಕ್‌ನಲ್ಲಿ ಹೋಗುವಾಗ ದೇವತೆ ತನ್ನ ದೇಹವನ್ನು ಪ್ರವೇಶಿಸಿದಂತೆ ವರ್ತಿಸುತ್ತಾನೆ ಎಂದು ಅವನ ಸ್ನೇಹಿತರು ಹೇಳುತ್ತಾರೆ, ”ಎಂದು ಪೊಲೀಸ್ ಅಧಿಕಾರಿಯೊಬ್ಬರು  ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.

ತಾನು ಬೈಕ್ ಸವಾರಿ ಮಾಡುವಾಗ ನೀವು ಏನೇ ಪ್ರಯತ್ನ ಪಟ್ಟರೂ ನನ್ನನ್ನು ಹಿಡಿಯಲು ಸಾಧ್ಯವಿಲ್ಲ ಎಂದು ವಿಚಾರಣೆ ವೇಳೆ ಪೊಲೀಸರಿಗೆ ಫರಾಜ್ ಸವಾಲು ಹಾಕಿದ್ದಾರೆ ಎಂದು ವರದಿಯಾಗಿದೆ.

31 ವರ್ಷದ ಆರೋಪಿಯನ್ನು ಬಂಧಿಸಲು ಕೃಷ್ಣರಾಜ, ಸರಸ್ವತಿಪುರಂ ಮತ್ತು ಅಶೋಕಪುರಂ ಪೊಲೀಸ್ ಠಾಣೆಗಳಿಂದ ವಿಶೇಷ ತಂಡ ರಚಿಸಲಾಗಿತ್ತು. ಕೊನೆಗೆ ಆತನ ಸಹಚರ ನೀಡಿದ ಮಾಹಿತಿ ಮೇರೆಗೆ ಸರಸ್ವತಿಪುರಂ ಪೊಲೀಸರು ಅಕ್ಟೋಬರ್ 29ರಂದು ಮೈಸೂರಿನಲ್ಲಿ ಆತನನ್ನು ಬಂಧಿಸಿದ್ದಾರೆ.

ಈತನ ಬಂಧನದೊಂದಿಗೆ ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ 8 ಚೈನ್ ಸ್ನ್ಯಾಚಿಂಗ್ ಪ್ರಕರಣಗಳನ್ನು ಭೇದಿಸಿದ ಪೊಲೀಸರು 13 ಲಕ್ಷ ಮೌಲ್ಯದ 290 ಗ್ರಾಂ ತೂಕದ 9 ಚಿನ್ನದ ಸರಗಳನ್ನು ವಶಪಡಿಸಿಕೊಂಡಿದ್ದಾರೆ. ಸರಸ್ವತಿಪುರಂ, ವಿಜಯನಗರ, ಮಂಡಿ, ವಿದ್ಯಾರಣ್ಯಪುರಂ, ಕುವೆಂಪುನಗರ ಮತ್ತು ಶ್ರೀರಂಗಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಚೈನ್ ಸ್ನ್ಯಾಚಿಂಗ್ ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದಾರೆ.

ಫರಾಜ್ ವಾಂಟೆಡ್ ಕ್ರಿಮಿನಲ್ ಎಂದು ಪೊಲೀಸರು ತಿಳಿಸಿದ್ದಾರೆ. ಮೈಸೂರು, ಮಂಡ್ಯ ಮತ್ತು ಬೆಂಗಳೂರಿನಲ್ಲಿ ಸುಮಾರು 80 ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಕೆಆರ್ ಪೊಲೀಸ್ ಠಾಣೆಯಿಂದ ವಾರೆಂಟ್ ನೀಡಿದ್ದಾರೆ. ಕೇವಲ ಐದು ತಿಂಗಳಲ್ಲಿ ಒಂಬತ್ತು ಚೈನ್ ಸ್ನಾಚಿಂಗ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ.

ಫರಾಜ್ ಬೈಕ್ ಓಡಿಸುವುದರಲ್ಲಿ ನಿಪುಣನಾಗಿದ್ದರೆ, ಅವನ ಸಹವರ್ತಿ ಸ್ಕೂಟರ್ ಓಡಿಸುವುದರಲ್ಲಿ ನಿಪುಣ. ಚಿನ್ನದ ಸರಗಳನ್ನು ಕಸಿದುಕೊಂಡು ನಗರದಲ್ಲಿ ಮಾರಾಟ ಮಾಡಿ, ಬಂದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ’ ಎಂದು ಅಧಿಕಾರಿ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com