'ಕಾಂತಾರ' ಚಿತ್ರದ ಯಶಸ್ಸು ನೋಡಿ ಕಲಿಯಿರಿ: ಹೂಡಿಕೆದಾರರಿಗೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ಕಿವಿಮಾತು

ಕನ್ನಡದ ಬ್ಲಾಕ್ ಬಸ್ಟರ್ ಸಿನೆಮಾ ‘ಕಾಂತಾರ’ ಬಾಕ್ಸ್ ಆಫೀಸ್ ನಲ್ಲಿ ಬಿರುಗಾಳಿ ಎಬ್ಬಿಸಿದೆ. ಪ್ರಪಂಚದಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರವು ಅದರ ಕಥಾಹಂದರ, ನಿರ್ದೇಶನ, ಛಾಯಾಗ್ರಹಣ ಮತ್ತು ಸಂಗೀತಕ್ಕಾಗಿ ಪ್ರಶಂಸೆ ಪಡೆಯುತ್ತಿದೆ.
ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ಬೆಂಗಳೂರಿನಲ್ಲಿ ಉದ್ಘಾಟಿಸಿದ ಕೇಂದ್ರ ಸಚಿವ ಪಿಯೂಶ್ ಗೋಯಲ್, ಪ್ರಹ್ಲಾದ್ ಜೋಷಿ, ಸಿಎಂ ಬೊಮ್ಮಾಯಿ ಮತ್ತಿತರರು
ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ಬೆಂಗಳೂರಿನಲ್ಲಿ ಉದ್ಘಾಟಿಸಿದ ಕೇಂದ್ರ ಸಚಿವ ಪಿಯೂಶ್ ಗೋಯಲ್, ಪ್ರಹ್ಲಾದ್ ಜೋಷಿ, ಸಿಎಂ ಬೊಮ್ಮಾಯಿ ಮತ್ತಿತರರು
Updated on

ಬೆಂಗಳೂರು: ಕನ್ನಡದ ಬ್ಲಾಕ್ ಬಸ್ಟರ್ ಸಿನೆಮಾ ‘ಕಾಂತಾರ’ (Kantara film) ಬಾಕ್ಸ್ ಆಫೀಸ್ ನಲ್ಲಿ ಬಿರುಗಾಳಿ ಎಬ್ಬಿಸಿದೆ. ಪ್ರಪಂಚದಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರವು ಅದರ ಕಥಾಹಂದರ, ನಿರ್ದೇಶನ, ಛಾಯಾಗ್ರಹಣ ಮತ್ತು ಸಂಗೀತಕ್ಕಾಗಿ ಪ್ರಶಂಸೆ ಪಡೆಯುತ್ತಿದೆ.

ನಿನ್ನೆ ಬುಧವಾರ ಬೆಂಗಳೂರಿನಲ್ಲಿ ಆರಂಭವಾದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ (GIM) ಕೈಗಾರಿಕೋದ್ಯಮಿಗಳು ಮತ್ತು ಹೂಡಿಕೆದಾರರಿಗೆ ‘ಕಾಂತಾರ’ ಯಶಸ್ಸಿನ ಕಥೆಯನ್ನು ಉಲ್ಲೇಖಿಸಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಚಿತ್ರದ ಮತ್ತೊಬ್ಬ ಅಭಿಮಾನಿ ಎಂಬುದು ವಿಶೇಷ. (Piyush Goyal)

ಕರ್ನಾಟಕದ ಸ್ಥಳೀಯ ಕಲೆ ಮತ್ತು ಸಂಸ್ಕೃತಿಯನ್ನು ಸುಂದರವಾಗಿ ಹಿಡಿದಿಟ್ಟುಕೊಳ್ಳುವ ‘ಕಾಂತಾರ’ವನ್ನು 16 ಕೋಟಿ ರೂಪಾಯಿಗಳ ಸಾಧಾರಣ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ. ಆದರೆ ಇಂದು ಅದು ಗಳಿಸಿದ್ದು 300 ಕೋಟಿ ರೂಪಾಯಿ ಎಂದು ಕೇಂದ್ರ ಸಚಿವರು ಹೇಳಿದರು. ಕಾಂತಾರ'ದ ಯಶಸ್ಸು ಇಲ್ಲಿಯ ಹಲವು ಕಂಪನಿಗಳ ನಾಯಕರ ಗಮನ ಸೆಳೆದಿರಬಹುದು ಎಂದು ನಾನು ಭಾವಿಸುತ್ತೇನೆ ಎಂದು ನಗುತ್ತಾ ಹೇಳಿದರು.

ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿ ಕರ್ನಾಟಕದ ಅನುಭವ ಪಡೆಯಲು ಆಸಕ್ತಿ ವ್ಯಕ್ತಪಡಿಸಿದ್ದನ್ನು ಗೋಯಲ್ ನೆನಪಿಸಿಕೊಂಡರು. ಬೆಂಗಳೂರಿನ ಹೆಸರು ಮಾಹಿತಿ ತಂತ್ರಜ್ಞಾನ, ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ನಾವೀನ್ಯತೆ ಕ್ಷೇತ್ರಕ್ಕೆ ಹೆಸರಾಗಿದೆ ಎಂದರು. 

ಕರ್ನಾಟಕದ ಕೈಗಾರಿಕೋದ್ಯಮಿಗಳ ಹೂಡಿಕೆ ಯೋಜನೆಗಳು ಮತ್ತು ಅವರು ಇಲ್ಲಿ ತಮ್ಮ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಲು ಬಯಸುವ ವಿಧಾನದ ಬಗ್ಗೆ ತಿಳಿದುಕೊಂಡ ನಂತರ, ‘ಕಾಂತಾರ’ ಯಶಸ್ಸು ಇಂದಿಗೆ ಪ್ರಸ್ತುತವಾಗಿದೆ ಎಂದರು. ಕೇಂದ್ರ ಸಚಿವರ ಈ ಮಾತಿಗೆ ಸಭಿಕರು ಚಪ್ಪಾಳೆ ಮೂಲಕ ಪ್ರಶಂಸೆ ವ್ಯಕ್ತಪಡಿಸಿದರು.

₹7 lakh crore investment potential in Karnataka is like Kantara re-run!#InvestKarnataka2022 pic.twitter.com/Nl8CmdhECZ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com