ಬೆಂಗಳೂರಿನಲ್ಲಿ ಕೃಷಿ ಮೇಳ: ಮಂಡ್ಯ ಜಿಲ್ಲೆಯಿಂದ ರೈತ ತಂದಿದ್ದ ಬನ್ನೂರು ಕುರಿ 2.01 ಲಕ್ಷ ರೂಪಾಯಿಗೆ ಮಾರಾಟ

ರಾಜಧಾನಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಮೇಳ ನಿನ್ನೆ ಗುರುವಾರ ಆರಂಭವಾಗಿದೆ. ಮೊದಲ ದಿನ ರೈತರೊಬ್ಬರು ತಮ್ಮ ಐದು ವರ್ಷದ ಬನ್ನೂರು ಕುರಿಯನ್ನು 2.01 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ. ರೈತರ ಪ್ರಕಾರ ಬನ್ನೂರು ತಳಿಯ ಕುರಿಗಳು ನಶಿಸಿ ಹೋಗಿವೆ. ಮಂಡ್ಯ ಜಿಲ್ಲೆಯಲ್ಲಿ ಮಾತ್ರ ಸುಮಾರು 2,500 ಕುರಿಗಳಿವೆ ಎಂದು ಹೇಳಲಾಗುತ್ತಿದೆ.
2 ಲಕ್ಷ ರೂಪಾಯಿಗೆ ಮಾರಾಟವಾದ ಬನ್ನೂರು ಕುರಿ
2 ಲಕ್ಷ ರೂಪಾಯಿಗೆ ಮಾರಾಟವಾದ ಬನ್ನೂರು ಕುರಿ

ಬೆಂಗಳೂರು: ರಾಜಧಾನಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಮೇಳ ನಿನ್ನೆ ಗುರುವಾರ ಆರಂಭವಾಗಿದೆ. ಮೊದಲ ದಿನ ರೈತರೊಬ್ಬರು ತಮ್ಮ ಐದು ವರ್ಷದ ಬನ್ನೂರು ಕುರಿಯನ್ನು 2.01 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ. ರೈತರ ಪ್ರಕಾರ ಬನ್ನೂರು ತಳಿಯ ಕುರಿಗಳು ನಶಿಸಿ ಹೋಗಿವೆ. ಮಂಡ್ಯ ಜಿಲ್ಲೆಯಲ್ಲಿ ಮಾತ್ರ ಸುಮಾರು 2,500 ಕುರಿಗಳಿವೆ ಎಂದು ಹೇಳಲಾಗುತ್ತಿದೆ.

ರೈತ ಬೋರೇಗೌಡ ಅವರು 3 ತಿಂಗಳ ಕುರಿಮರಿ ಸೇರಿದಂತೆ 22 ಕುರಿಗಳನ್ನು ಕೃಷಿ ಮೇಳಕ್ಕೆ ತಂದಿದ್ದಾರೆ. ಕಾರ್ಪೊರೇಟ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಹರೀಶ್ ಗೌಡ ಎಂಬುವವರು ಇದನ್ನು ಖರೀದಿಸಿದ್ದಾರೆ. 

ನನ್ನ ಬಳಿ ಅದೇ ತಳಿಯ ಕೆಲವು ಕುರಿಗಳು ಇವೆ. ಅದರ ಸಂರಕ್ಷಣೆಗೆ ಸಂತಾನೋತ್ಪತ್ತಿಗಾಗಿ ಖರೀದಿಸಿದ್ದೇನೆ ಎನ್ನುತ್ತಾರೆ ಬೋರೇಗೌಡ. ಇವರು ಕಳೆದ ಬಾರಿ ಕೃಷಿಮೇಳಕ್ಕೆ ಹಳ್ಳಿಕಾರ್ ತಳಿಯ ಎತ್ತುಗಳನ್ನು ತಂದಿದ್ದರು. ಅವುಗಳಿಗೆ ಮುದ್ದೆ ಚರ್ಮ ರೋಗ ಹರಡಬಹುದು ಎಂಬ ಭೀತಿಯಿಂದ ಈ ಬಾರಿ ಕೃಷಿ ಮೇಳಕ್ಕೆ ಬನ್ನೂರು ಕುರಿಗಳನ್ನು ತಂದಿದ್ದಾರೆ. 

ಬನ್ನೂರು ತಳಿ ಎಂದು ಹೇಳಿಕೊಂಡು ಕುರಿ ಮಾಂಸ ಮಾರುವ ಸ್ಟಾಲ್‌ಗಳಲ್ಲಿ ನಿಜವಾದ ಮೂಲ ಬನ್ನೂರು ಕುರಿಯ ಮಾಂಸವಾಗಿಲ್ಲದಿರಬಹುದು. ತಳಿಯು ಏಳು ಉಪ ವಿಧಗಳನ್ನು ಹೊಂದಿದ್ದು, ಎಲ್ಲಾ ಅಳಿವಿನಂಚಿನಲ್ಲಿದೆ. ನಮ್ಮ ಗ್ರಾಮವಾದ ಮಳವಳ್ಳಿಯಲ್ಲಿ ಕಳೆದ 10 ರಿಂದ 15 ವರ್ಷಗಳಿಂದ ಬನ್ನೂರು ಕುರಿಗಳನ್ನು ಸಾಕುತ್ತಿದ್ದೇನೆ. ಸುಮಾರು 50 ಕುರಿಗಳು ನನ್ನ ಬಳಿ ಇದ್ದು ಅವುಗಳಿಗೆ ತೀವ್ರ ಆರೈಕೆಯ ಅಗತ್ಯವಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com