ಕೆಂಪೇಗೌಡರ ಪ್ರತಿಮೆಗೆ ಸರ್ಕಾರದ ಹಣ ಬಳಕೆ ದೊಡ್ಡ ಅಪರಾಧ: ಡಿಕೆ ಶಿವಕುಮಾರ್

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡ ಅವರ 108 ಅಡಿ ಪ್ರತಿಮೆ ಸ್ಥಾಪಿಸಲು ಸರ್ಕಾರದ ಹಣ ಬಳಸಿದ್ದು ಏಕೆ? ಎಂದು ಪ್ರಶ್ನಿನಿಸಿದ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು...
ಡಿ ಕೆ ಶಿವಕುಮಾರ್
ಡಿ ಕೆ ಶಿವಕುಮಾರ್

ಬೆಂಗಳೂರು: ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡ ಅವರ 108 ಅಡಿ ಪ್ರತಿಮೆ ಸ್ಥಾಪಿಸಲು ಸರ್ಕಾರದ ಹಣ ಬಳಸಿದ್ದು ಏಕೆ? ಎಂದು ಪ್ರಶ್ನಿನಿಸಿದ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು, ಇದು ದೊಡ್ಡ ಅಪರಾಧ ಎಂದು ಗುರುವಾರ ಹೇಳಿದ್ದಾರೆ.

ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ನಾಡಪ್ರಭು ಕೆಂಪೇಗೌಡ ಅವರ 108 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ವಹಿಸುತ್ತಿರುವ ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್(ಬಿಐಎಎಲ್) ಈ ಪ್ರತಿಮೆಯ ಕಾಮಗಾರಿಯನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಬೇಕಿತ್ತು ಎಂದು ಶಿವಕುಮಾರ್ ತಿಳಿಸಿದ್ದಾರೆ.

ಸರ್ಕಾರದಿಂದ ವಿಮಾನ ನಿಲ್ದಾಣಕ್ಕೆ ಭೂಮಿ, ಹಣ ಮತ್ತು ಇತರ ಸೌಲಭ್ಯಗಳನ್ನು ನೀಡಲಾಗಿದೆ. ಇದರಿಂದ ಆದಾಯ ಗಳಿಸುತ್ತಿರುವ ಬಿಐಎಎಲ್ ಗೆ ಹೇಳಿದ್ದರೆ ಅವರೇ ಪ್ರತಿಮೆ ನಿರ್ಮಾಣ ಮಾಡುತ್ತಿದ್ದರು. ಆದರೆ ಸರ್ಕಾರ ದುಡ್ಡು ಹಾಕಿದ್ದು ಯಾಕೆ? ಈ ವಿಚಾರವಾಗಿ ನಾನು ಶಂಕುಸ್ಥಾಪನೆ ದಿನವೇ ಪ್ರಶ್ನಿಸಿದ್ದೇ ಎಂದಿದ್ದಾರೆ.

ಈ ಯೋಜನೆಯು ಪ್ರತಿಮೆಯ ಜೊತೆಗೆ 23 ಎಕರೆ ಪ್ರದೇಶದಲ್ಲಿ ಹೆರಿಟೇಜ್ ಥೀಮ್ ಪಾರ್ಕ್ ಅನ್ನು ನಿರ್ಮಿಸಲಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರ 84 ಕೋಟಿ ರೂ.ವೆಚ್ಚ ಮಾಡಿದೆ ಎಂದು ಕೆಪಿಸಿಸಿ ಅಧ್ಯಕ್ಷರು ಹೇಳಿದರು.

“ಸರ್ಕಾರದ ಹಣವನ್ನು ಬಳಸಿ (ಪ್ರತಿಮೆ ಸ್ಥಾಪಿಸುವುದು) ಮಾಡುವುದು ದೊಡ್ಡ ಅಪರಾಧ, ನಾವು (ಕರ್ನಾಟಕ ಸರ್ಕಾರ) ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್‌ಗೆ ಭೂಮಿ ಮತ್ತು ಹಣವನ್ನು ನೀಡಿದ್ದೇವೆ.

4,200 ಎಕರೆ ಭೂಮಿಯಲ್ಲಿ 2,000 ಎಕರೆಯನ್ನು ಎಕರೆಗೆ ಕೇವಲ 6 ಲಕ್ಷ ರೂ. ಹಣದ ಜೊತೆಗೆ ಷೇರುಗಳೂ ಇವೆ. ಅದು (ಬಿಐಎಎಲ್) ತನ್ನ ಹಣವನ್ನು ಬಳಸಬೇಕಿತ್ತು, ಸರ್ಕಾರದ ಹಣವನ್ನು ಏಕೆ ಬಳಸಬೇಕು ಎಂದು ಶಿವಕುಮಾರ್ ಹೇಳಿದರು.

"ಸರ್ಕಾರದ ಹಣವನ್ನು ಬಳಸಿಕೊಂಡು ಇದನ್ನು(ಪ್ರತಿಮೆ ಸ್ಥಾಪಿಸುವುದು) ಮಾಡುವುದು ದೊಡ್ಡ ಅಪರಾಧ. ಕರ್ನಾಟಕ ಸರ್ಕಾರ ಬೆಂಗಳೂರು ಇಂಟರ್ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್‌ಗೆ ಭೂಮಿ ಮತ್ತು ಹಣ ನೀಡಿದ್ದೇವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com