ಕೆಂಪೇಗೌಡರ 108 ಅಡಿ ಎತ್ತರದ 'ಪ್ರಗತಿಯ ಪ್ರತಿಮೆ' ಅನಾವರಣಗೊಳಿಸಿದ ಪ್ರಧಾನಿ ಮೋದಿ
ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಬೃಹತ್ ಕಂಚಿನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಅನಾವರಣಗೊಳಿಸಿದ್ದಾರೆ.
Published: 11th November 2022 12:32 PM | Last Updated: 11th November 2022 12:32 PM | A+A A-

108 ಅತಿ ಎತ್ತರದ ಕೆಂಪೇಗೌಡ ಪ್ರತಿಮೆ
ಬೆಂಗಳೂರು: ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಬೃಹತ್ ಕಂಚಿನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಅನಾವರಣಗೊಳಿಸಿದ್ದಾರೆ. ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸೇರಿ ದಾಖಲೆ ನಿರ್ಮಿಸಿರುವ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಕಂಚಿನ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ ಬಳಿಕ ಪ್ರತಿಮೆಗೆ ವಂದನೆ ಸಲ್ಲಿಸಿದರು.
100 ಟನ್ ಕಂಚು, 120 ಟಕ್ ಉಕ್ಕು ಬಳಸಿ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಪ್ರತಿಮೆ ಸುತ್ತಲಿನ ಸ್ಥಳದಲ್ಲಿ ಥೀಮ್ ಪಾರ್ಕ್ ಅಭಿವೃದ್ಧಿಪಡಿಸಲಾಗಿದೆ.ಇದನ್ನು ಪ್ರಗತಿಯ ಪ್ರತಿಮೆ ಎಂದು ಕರೆಯಲಾಗುತ್ತದೆ.
#WATCH | Prime Minister Narendra Modi unveils 'Statue of Prosperity', the 108-feet bronze statue of Nadaprabhu Kempegowda, in Bengaluru
(Source: DD) pic.twitter.com/75WLwM4MrY— ANI (@ANI) November 11, 2022
ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಮೃತ ಹಸ್ತದಿಂದ "ಬೆಂಗಳೂರು ನಗರ ನಿರ್ಮಾತೃ ನಾಡ ಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಭವ್ಯ ಕಂಚಿನ (ಪ್ರಗತಿಯ ಪ್ರತಿಮೆ) ಲೋಕಾರ್ಪಣೆ.#StatueofProsperity #KarnatakaWelcomesModi #ಪ್ರಗತಿಯಪ್ರತಿಮೆ
— CM of Karnataka (@CMofKarnataka) November 11, 2022
https://t.co/tVKh7ltBAA