ರಾಜೀವ್ ಹಂತಕರು ಬಂಧ ಮುಕ್ತ: ಬಾಂಬ್ ಸ್ಪೋಟಿಸಿದಾಗ ನನ್ನ ಪುತ್ರಿ 10 ದಿನದ ಮಗಳು; ಘಟನೆಯಲ್ಲಿ ಬದುಕಿದ್ದೇ ಪವಾಡ, ನಿವೃತ್ತ ಐಪಿಎಸ್ ಅಧಿಕಾರಿ
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿಗಳಾದ ನಳಿನಿ ಶ್ರೀಹರನ್ ಮತ್ತು ಇತರೆ ಐವರನ್ನು 31 ವರ್ಷಗಳ ಜೈಲು ವಾಸದ ಬಳಿಕ ಸುಪ್ರೀಂಕೋರ್ಟ್ ಶುಕ್ರವಾರ ಬಿಡುಗಡೆ ಮಾಡಿದೆ.
Published: 12th November 2022 11:45 AM | Last Updated: 12th November 2022 02:02 PM | A+A A-

ಚುನಾವಣಾ ರ್ಯಾಲಿಯಲ್ಲಿ ರಾಜೀವ್ ಗಾಂಧಿ
ಬೆಂಗಳೂರು: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿಗಳಾದ ನಳಿನಿ ಶ್ರೀಹರನ್ ಮತ್ತು ಇತರೆ ಐವರನ್ನು 31 ವರ್ಷಗಳ ಜೈಲು ವಾಸದ ಬಳಿಕ ಸುಪ್ರೀಂಕೋರ್ಟ್ ಶುಕ್ರವಾರ ಬಿಡುಗಡೆ ಮಾಡಿದೆ.
ಸುದೀರ್ಘ ಕಾನೂನು ಹೋರಾಟದ ನಂತರ ರಾಜೀವ್ ಹಂತಕರನ್ನು ಬಿಡುಗಡೆ ಮಾಡಲಾಗಿದೆ ಎಂದು ಅಂದಿನ ಕಾಂಚೀಪುರಂ ಪೊಲೀಸ್ ಅಧಿಕಾರಿಯಾಗಿದ್ದ ಪ್ರತೀಪ್ ಫಿಲಿಪ್ ಹೇಳಿದ್ದಾರೆ.
1991 ಮೇ 21 ರ ಸಂಜೆ ದುರಂತ ನಡೆಯುವ ವೇಳೆಗೆ ಪಿಲಿಪ್ ಅವರಿಗೆ 10 ದಿನಗಳ ಹಿಂದೆ ಮಗಳು ಜನಿಸಿದ್ದಳು, ಅವರನ್ನು ಶ್ರೀ ಪೆರಂಬದೂರಿಗೆ ವಿಐಪಿ ಭದ್ರತೆಗಾಗಿ ನಿಯೋಜಿಸಲಾಗಿತ್ತು. ರೆಯ ಶ್ರೀಲಂಕಾದಲ್ಲಿ ಸಕ್ರಿಯವಾಗಿದ್ದ ಲಿಬರೇಷನ್ ಟೈಗರ್ಸ್ ಆಫ್ ತಮಿಳ್ ಈಳಂ (ಎಲ್‌ಟಿಟಿಇ) ಗುಂಪಿನ ಮಹಿಳಾ ಆತ್ಮಾಹುತಿ ಬಾಂಬರ್ ಧನು ಈ ಕೃತ್ಯ ಎಸಗಿದ್ದಳು. ಈ ದುರಂತದಲ್ಲಿ ರಾಜೀವ್ ಗಾಂಧಿ ಸೇರಿದಂತೆ 17 ಮಂದಿ ಸಾವನ್ನಪ್ಪಿದ್ದರು. ಅದರಲ್ಲಿ 9 ಮಂದಿ ಪೊಲೀಸರು ಇದ್ದರು. ಚುನಾವಣಾ ರ್ಯಾಲಿಯಲ್ಲಿ ಸುಮಾರು 40 ಮಂದಿ ಗಾಯಗೊಂಡಿದ್ದರು.
ಸದ್ಯ ಮೋಟಿವೇಶನಲ್ ಸ್ಪೀಕರ್ ಆಗಿರುವ ಪ್ರತೀಪ್ ಪಿಲಿಪ್ ತಮ್ಮ ಜೀವನ ಚರಿತ್ರೆ ಬರೆಯುತ್ತಿದ್ದಾರೆ. ವಿಶ್ವದ ಮೊದಲ ಮಾನವ ಮತ್ತು ಮಹಿಳೆ ಆತ್ಮಾಹುತಿ ಬಾಂಬರ್‌ನಲ್ಲಿ ಬದುಕುಳಿದವರಾಗಿದ್ದಾರೆ.
ಪ್ರಕರಣದಲ್ಲಿ ನ್ಯಾಯ ಮತ್ತು ಕರುಣೆಯ ಕಾರಣವನ್ನು ನೀಡಲಾಗಿದೆ ಎಂದು ನಾನು ವೈಯಕ್ತಿಕವಾಗಿ ಭಾವಿಸುತ್ತೇನೆ. ಕಳೆದ ವರ್ಷ ನಾನು ನಿವೃತ್ತರಾಗುವ ಮೊದಲು, ಹಂತಕರಿಗೆ ಸಾಯುವವರೆಗೆ ಜೀವಾವಧಿ ಶಿಕ್ಷೆ ವಿಧಿಸಬೇಕೆಂದು ನಾನು ಭಾವಿಸುತ್ತಿದ್ದೆ.
ಪ್ರಾಸಿಕ್ಯೂಷನ್ ಸಾಕ್ಷಿಗಾಗಿ ವಿಚಾರಣಾ ನ್ಯಾಯಾಲಯದ ವಶದಲ್ಲಿರುವ ನನ್ನ ರಕ್ತದ ಕಲೆಯುಳ್ಳ ಕ್ಯಾಪ್ ಮತ್ತು ನೇಮ್ ಬ್ಯಾಡ್ಜ್ ಅನ್ನು ನನ್ನ ನಿವೃತ್ತಿಯ ದಿನದಂದು ಮತ್ತೊಮ್ಮೆ ಧರಿಸುವಂತೆ ನಾನು ವಿಶೇಷವಾಗಿ ಗೊತ್ತುಪಡಿಸಿದ ಟಾಡಾ ನ್ಯಾಯಾಲಯದ ಮುಂದೆ ಮನವಿ ಮಾಡಿದ್ದೇನೆ. ನ್ಯಾಯಾಲಯವು ನನ್ನ ಭಾವೋದ್ರಿಕ್ತ ಮನವಿಗೆ ಮಣಿದಿದೆ ಎಂದಿದ್ದಾರೆ.
ಇದನ್ನೂ ಓದಿ: ರಾಜೀವ್ ಗಾಂಧಿ ಹತ್ಯೆ ಪ್ರಕರಣ: ಆರು ಹಂತಕರ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶ
ನನ್ನ ಟೋಪಿಯನ್ನು ಶಾಶ್ವತವಾಗಿ ನನ್ನ ಬಳಿಯಿರಿಸಿಕೊಳ್ಳಲು ನಾನು ನ್ಯಾಯಾಲಯಕ್ಕೆ ಮನವಿ ಮಾಡಿದ್ದೆ, ಕೋರ್ಟ್ ನನ್ನ ಮನವಿಯನ್ನು ಅಂಗೀಕರಿಸಿದೆ, "ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಇದು ಮೊದಲ ಬಾರಿಗೆ ಇಂತಹ ಅರ್ಜಿಯನ್ನು ಮಾನವೀಯ ಆಧಾರದ ಮೇಲೆ ನೀಡಲಾಯಿತು.
ನಾನು ನಿವೃತ್ತಿಯ ನಂತರ, ನಾನು ಹಿಂದಿನದನ್ನುಮರೆತುಬಿಡಬೇಕು ಎಂಬ ಭಾವನೆ ಹೊಂದಿದ್ದೆ. ಈ ವರ್ಷ ಮೇ 18 ರಂದು ನ್ಯಾಯಾಲಯವು ಪೆರಾರಿವಾಲನ್ (ಗಾಂಧಿ ಹಂತಕ) ಬಿಡುಗಡೆ ಮಾಡಿದ ನಂತರ, ಜೈಲಿನಲ್ಲಿ ತಮ್ಮ ಜೀವನದ ಅತ್ಯುತ್ತಮ ವರ್ಷಗಳನ್ನು ಕಳೆದಿರುವ ಇತರ ಹಂತಕರನ್ನು ಸಹ ಬಿಡುಗಡೆಗೊಳಿಸಬೇಕೆಂದು ನಾನು ಭಾವಿಸಿದೆ.
ಕರ್ತವ್ಯದ ವೇಳೆ ಪ್ರಾಣ ಕಳೆದುಕೊಂಡ ಒಂಬತ್ತು ಪೊಲೀಸರಿದ್ದರು, ವಿಐಪಿ ಕರ್ತವ್ಯಕ್ಕೆ ಅವರನ್ನು ೇಕೊನೆಯ ಕ್ಷಣದಲ್ಲಿ ನಿಯೋಜಿಸಿದ್ದರು, ಅಂದು ನಮ್ಮ ಎಸ್ ಪಿ ಇಲ್ಲದಿದ್ದರೇ ಸತ್ತವರ ಪಟ್ಟಿಯಲ್ಲಿ ನನ್ನ ಹೆಸರು ಇರುತ್ತಿತ್ತು, ನನ್ನ ಎಸ್ ಪಿ ದಿವಂಗತ ಮೊಹಮದ್ ಇಕ್ಬಾಲ್ ನನ್ನನ್ನು ಮುಂದೆ ಹೋಗುವಂತೆ ಹೇಳಿದರು, ಅವರ ಸೂಚನೆ ಮೇರೆಗೆ ನಾನು ದಿವಂಗತ ಪ್ರಧಾನಿ ರಾಜೀವ್ ಗಾಂಧಿ ಅವರಿಂದ 3 ಅಡಿ ಮುಂದೆ ಹೋದೆ, ಅದರಿಂದಾಗಿ ನಾನಿಲ್ಲಿದ್ದೇನೆ ಎಂದು ಪ್ರತೀಪ್ ಹೇಳಿದ್ದಾರೆ.
ಇದೆಲ್ಲಾ ಕೆಲವೇ ಸೆಕೆಂಡುಗಳಲ್ಲಿ ಸಂಭವಿಸಿತು. ನಾನು ಪ್ರಜ್ಞೆ ತಪ್ಪಿ ಬಿದ್ದಿದ್ದೆ, ಎಚ್ಚರವಾದಾಗ ನನ್ನ ಮುಖದ ಮೇಲೆ ರಕ್ತದ ಕಲೆಗಳಿದ್ದವು, ನನ್ನನ್ನು ಜೀಪಿಗೆ ಕರೆದೊಯ್ಯಲು ಬಂದಿದ್ದ ಪೊಲೀಸ್ ಇನ್ಸ್ ಪೆಕ್ಟರ್ ಬಳಿ ರಾಜೀವ್ ಗಾಂಧಿ ಹೇಗಿದ್ದಾರೆ ಎಂದು ಕೇಳಿದೆ, ಸರ್ ಹೋಗ್ಬಿಟ್ರು ಎಂದರು, ಎಲ್ಲವೂ ಮುಗಿದು ಹೋಗಿದೆ ಎನಿಸಿತು, ಇನ್ಸ್ ಪೆಕ್ಟರ್ ನನ್ನನ್ನು ಹಳೇಯ ಪೊಲೀಸ್ ಜೀಪ್ ನಲ್ಲಿ ಹಾಕಿದರು. ಏಕೆಂದರೆ ನನ್ನ ಜೀಪಿನಲ್ಲಿದ್ದ ಸ್ಪೋಟದ ನಂತರ ಅಲ್ಲಿಂದ ಕೆಲವರ ಜೊತೆ ಓಡಿ ಹೋಗಿದ್ದ. ನನ್ನ ಮುಖ ಮತ್ತು ದೇಹದ ಬಲಭಾಗ ಶೇ.20 ರಷ್ಚು ಸುಟ್ಟು ಹೋಗಿತ್ತು. 2,000 ಡಿಗ್ರಿ ಸೆಂಟಿಗ್ರೇಡ್ ಶಾಖದಲ್ಲಿ ಚೂರುಗಳು ನನ್ನ ದೇಹವನ್ನು ಪ್ರವೇಶಿಸಿವೆ ಎಂದು ವೈದ್ಯರು ನಂತರ ನನಗೆ ಹೇಳಿದರು.
ನನಗೆ ತುಂಬಾ ಬಾಯಾರಿಕೆಯಾಗಿತ್ತು ನೀರು ಕೇಳಿದೆ, ಹರಿದ ಬಟ್ಟೆಗಳನ್ನು ಹಾಕಿದ್ದ ವ್ಯಕ್ತಿಯೊಬ್ಬ ಜೀಪಿನೊಳಗೆ ಬಂದು, ಅವನ ಮಡಿಲಲ್ಲಿ ನನ್ನ ರಕ್ತಸಿಕ್ತ ತಲೆಯನ್ನು ಇಟ್ಟುಕೊಂಡು ನನಗೆ ಸ್ವಲ್ಪ ನೀರು ಕೊಟ್ಟನು. ನಾನು ಅವನ ಹೆಸರನ್ನು ಕೇಳಿದೆ, ಅವನು ಹೇಳಿದನು, ಪುರುಷೋತ್ತಮನ್ ಎಂದ. ನಾನು ಬದುಕುಳಿದಿರುವುದೇ ನನ್ನ ಅದೃಷ್ಟ ಎಂದು ನನಗೆ ಮನವರಿಕೆಯಾಯಿತು. ಪಿಲಿಪ್ ಬೆಂಗಳೂರು ಮೂಲದವರು, 1987ರ ತಮಿಳುನಾಡು ಐಪಿಎಸ್ ಕೇಡರ್ ಗೆ ಸೇರಿದವರಾಗಿದ್ದರು.