ಕಲಾಕೃತಿ, ಹಸಿರು, ಸೊಗಸಾದ ದೀಪಗಳು... ಕೆಂಪೇಗೌಡ ಏರ್ ಪೋರ್ಟ್ ನ ಟರ್ಮಿನಲ್ 2ನ ಆಕರ್ಷಣೆಗಳೇನು?

ಅದು ಕಣ್ಣಳತೆಗೆ ಮೀರಿದ ವಿಸ್ತಾರವಾದ ಝಗಮಗಿಸುವ ಜಾಗ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 2,55,661 ಚದರ ಮೀಟರ್ ವಿಸ್ತೀರ್ಣದಲ್ಲಿ ಹರಡಿರುವ ಟರ್ಮಿನಲ್ 2 ನ್ನು ಪ್ರವೇಶಿಸಿದಾಗ ವಿಭಿನ್ನ ಅನುಭವ ನಿಮಗಾಗದಿರದು. ಸೊಗಸಾದ ದೀಪಗಳ ಅಡಿಯಲ್ಲಿ ನಿಂತಾಗ ಮೈಮನ ಪುಳಕವಾಗುತ್ತದೆ.
ಟರ್ಮಿನಲ್ 2 ನ ಒಳಾಂಗಣ ವಿನ್ಯಾಸ
ಟರ್ಮಿನಲ್ 2 ನ ಒಳಾಂಗಣ ವಿನ್ಯಾಸ

ಬೆಂಗಳೂರು: ಅದು ಕಣ್ಣಳತೆಗೆ ಮೀರಿದ ವಿಸ್ತಾರವಾದ ಝಗಮಗಿಸುವ ಜಾಗ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 2,55,661 ಚದರ ಮೀಟರ್ ವಿಸ್ತೀರ್ಣದಲ್ಲಿ ಹರಡಿರುವ ಟರ್ಮಿನಲ್ 2 ನ್ನು ಪ್ರವೇಶಿಸಿದಾಗ ವಿಭಿನ್ನ ಅನುಭವ ನಿಮಗಾಗದಿರದು. ಸೊಗಸಾದ ದೀಪಗಳ ಅಡಿಯಲ್ಲಿ ನಿಂತಾಗ ಮೈಮನ ಪುಳಕವಾಗುತ್ತದೆ. 6 ದಿನಗಳಿಂದ 800 ವರ್ಷಗಳ 3,600ಕ್ಕೂ ಹೆಚ್ಚು ಜಾತಿಯ 6 ಲಕ್ಷ ಸಸ್ಯಗಳು, ಸುತ್ತುವರಿದ ಸೊಂಪಾದ ತೋಟ ನಿಮ್ಮನ್ನು ಸ್ವಾಗತಿಸುತ್ತದೆ. 

ಇಲ್ಲಿರುವ ಹೂವುಗಳಲ್ಲಿ 100 ವಿಧದ ಲಿಲ್ಲಿಗಳು ಮತ್ತು 96 ಕಮಲದ ಜಾತಿಗಳಿವೆ. ಸಸ್ಯಗಳನ್ನು ಸಂಕೀರ್ಣದ ಛಾವಣಿಯ ಮೇಲಿನ ಬೃಹತ್ ಬೆಲ್ ರಚನೆಗಳಲ್ಲಿದೆ. ಸುತ್ತಲೂ ನೇತಾಡುವ ಮತ್ತು ಲಂಬವಾದ ಉದ್ಯಾನವನಗಳನ್ನು ಸೃಷ್ಟಿಸಲಾಗಿದ್ದು, 'ಉದ್ಯಾನದೊಳಗೆ ಟರ್ಮಿನಲ್' ಸೃಷ್ಟಿಯಾಗಿದೆ. ಇದು ಏಷ್ಯಾ ಖಂಡದಲ್ಲಿಯೇ ಮೊದಲ ಗಾರ್ಡನ್ ಟರ್ಮಿನಲ್-2 ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 

ಟರ್ಮಿನಲ್‌ನ ಪ್ರವೇಶದ್ವಾರದಲ್ಲಿ, ವಿಷ್ಣುವಿನ ವಾಹನವಾದ ಗರುಡನ ಬೃಹತ್ ಶಿಲ್ಪವು 14 ಪ್ರತಿಮೆಗಳಿಂದ ಆವೃತವಾಗಿದೆ. ಸುಮಾರು 923 ಕಿಮೀ ಇಂಜಿನಿಯರ್ಡ್ ಬಿದಿರು ದೀರ್ಘಕಾಲ ಬಾಳಿಕೆ ಬರುವ ಮತ್ತು ಬೆಂಕಿ ನಿರೋಧಕವಾಗಿದೆ, ಪರಿಸರವನ್ನು ತಂಪಾಗಿಸಲು ಇದನ್ನು ಬಳಸಲಾಗಿದೆ. ಇದು ಸೌರ ಫಲಕಗಳು ಮತ್ತು ಆಕಾಶ ಬೆಳಕಿನ ಮೂಲಕ ಶೇಕಡಾ 24.9 ರಷ್ಟು ಇಂಧನವನ್ನು ಉಳಿಸುತ್ತದೆ. ಕರ್ನಾಟಕದ ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿಯನ್ನು ಪ್ರದರ್ಶಿಸುವ 60 ಕಲಾಕೃತಿಗಳನ್ನು 43 ಕಲಾವಿದರು ಪ್ರದರ್ಶಿಸಿದ್ದಾರೆ.

ಇನ್ನೆರಡು ತಿಂಗಳಲ್ಲಿ ಟರ್ಮಿನಲ್ ಕಾರ್ಯನಿರ್ವಹಣೆ: ಕೆಲವು ಕಾಮಗಾರಿಗಳು ಬಾಕಿಯಿರುವುದರಿಂದ ಎರಡನೇ ಟರ್ಮಿನಲ್ ಇನ್ನು ಎರಡು ತಿಂಗಳಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಬಿಐಎಎಲ್ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಹರಿ ಮರಾರ್ ತಿಳಿಸಿದ್ದಾರೆ. ಆದರೆ, ಮೊನ್ನೆ ಪ್ರಧಾನಿ ನರೇಂದ್ರ ಮೋದಿಯವರ ಉದ್ಘಾಟನೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಕೆಲವು ಕಾಮಗಾರಿಗಳು ತರಾತುರಿಯಲ್ಲಿ ನಡೆದಿರುವುದು ಕಂಡುಬರುತ್ತಿದೆ.

ಬಳಕೆಯ ಸ್ಥಳಗಳು, ವಿದ್ಯುತ್ ಮತ್ತು ನೀರಿನ ವ್ಯವಸ್ಥೆಗಳನ್ನು ಇಲ್ಲಿ ಸಿದ್ಧಗೊಳಿಸಬೇಕಾಗಿದೆ. ನಾವು ಈಗ ವಿಮಾನ ನಿಲ್ದಾಣ ಮತ್ತು ನಗರದ ನಡುವೆ ಬಳಸುತ್ತಿದ್ದ ಲೇನ್‌ಗಳ ಸಂಖ್ಯೆಯನ್ನು 5+5 ಲೇನ್‌ಗಳಿಗೆ ಹೆಚ್ಚಿಸಿದ್ದೇವೆ. ಮುಂದಿನ ದಶಕದಲ್ಲಿ ವಿಮಾನ ನಿಲ್ದಾಣದೊಳಗೆ ಹೆಚ್ಚಬಹುದಾದ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸುವ ಸಾಮರ್ಥ್ಯವನ್ನು ಟರ್ಮಿನಲ್ ಹೊಂದಿದೆ ಎಂದು ಮರಾರ್ ಸುದ್ದಿಗಾರರಿಗೆ ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com