ಮಂಗಳೂರಿನ ಸುರತ್ಕಲ್ ಟೋಲ್ ಗೇಟ್ ರದ್ದು: ಕೇಂದ್ರದ ನಿರ್ಧಾರಕ್ಕೆ ಧನ್ಯವಾದ ತಿಳಿಸಿದ ಸಂಸದ ಕಟೀಲ್ 

ಸುರತ್ಕಲ್ ಟೋಲ್ ಗೇಟ್ (Surathkal Toll Gate) ನ್ನು ರದ್ದುಗೊಳಿಸುವುದಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಮಂಗಳೂರಿನ ಸ್ಥಳೀಯರ ಬಹುದಿನಗಳ ಬೇಡಿಕೆ ಈಡೇರಿದೆ.
ಸುರತ್ಕಲ್ ಟೋಲ್ ಗೇಟ್
ಸುರತ್ಕಲ್ ಟೋಲ್ ಗೇಟ್

ಸುರತ್ಕಲ್: ಸುರತ್ಕಲ್ ಟೋಲ್ ಗೇಟ್ (Surathkal Toll Gate) ನ್ನು ರದ್ದುಗೊಳಿಸುವುದಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಮಂಗಳೂರಿನ ಸ್ಥಳೀಯರ ಬಹುದಿನಗಳ ಬೇಡಿಕೆ ಈಡೇರಿದೆ.

ಕೇಂದ್ರದ ನಿರ್ಧಾರಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮೂಲಕ ಈ ಮಾಹಿತಿ ನೀಡಿದ್ದು, ಪ್ರಧಾನಿ ಮೋದಿ, ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. 

ಕಳೆದ ಕೆಲವು ದಿನಗಳಿಂದ ಸುರತ್ಕಲ್ ಟೋಲ್ ಗೇಟ್ ರದ್ದುಗೊಳಿಸುವ ಕುರಿತು ಹಲವು ಸಂಘಟನೆಗಳು ಹೋರಾಟ ನಡೆಸಿತ್ತು. ನ.7 ರ ವೇಳೆಗೆ ಟೋಲ್ ನ್ನು ರದ್ದುಗೊಳಿಸದೇ ಇದ್ದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಟೋಲ್ ವಿರೋಧಿ ಹೋರಾಟ ಸಮಿತಿ ಎಚ್ಚರಿಸಿತ್ತು. 

60 ಕಿಲೋ ಮೀಟರ್ ವ್ಯಾಪ್ತಿಯಲ್ಲಿ 4 ಟೋಲ್ ಗೇಟ್​ಗಳು ಇದ್ದು, ಕಾನೂನು ಬಾಹಿರವಾಗಿ ನಡೆಯುತ್ತಿದ್ದ ಸುರತ್ಕಲ್ ಟೋಲ್ ಗೇಟ್ ನಡೆಯುತ್ತಿದೆ. ಆದ್ದರಿಂದ ಈ ಟೋಲ್ ನ್ನು ರದ್ದುಗೊಳಿಸಬೇಕೆಂಬುದು ಸ್ಥಳೀಯರ ಬಲವಾದ ಆಗ್ರಹವಾಗಿತ್ತು.

ತಾಂತ್ರಿಕ ಅಂಶಗಳ ಕಾರಣದಿಂದ ಟೋಲ್ ರದ್ದು ತಡ

ತಾಂತ್ರಿಕ ಅಂಶಗಳ ಕಾರಣ ಟೋಲ್ ರದ್ದು ತಡವಾಗಿತ್ತು. ಇದೀಗ ಟೋಲ್ ತೆರವಿನ ತಾಂತ್ರಿಕ ಅಂಶ ಪೂರ್ಣವಾಗಿರುವ ಕುರಿತು ಸಂಸದ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಈ ಮುನ್ನವೇ ಸುರತ್ಕಲ್ ಟೋಲ್ ಗೇಟ್ ರದ್ದುಗೊಳ್ಳುವುದು ತಾಂತ್ರಿಕ ಅಂಶಗಳಿಂದ ನಿಧಾನವಾಗಿತ್ತು, ಆದರೆ ಇದೀಗ ಟೋಲ್ ಗೇಟ್ ರದ್ದುಗೊಳಿಸಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com