ರವಿಕಾಂತೇಗೌಡ, ರವಿ ಚನ್ನಣ್ಣನವರ್ ಸೇರಿ 11 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ರಾಜ್ಯ ಸರ್ಕಾರ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದು, ಬಿಆರ್ ರವಿಕಾಂತೇಗೌಡ ಹಾಗೂ ರವಿ ಚನ್ನಣ್ಣನವರ್ ಸೇರಿದಂತೆ 11 ಐಪಿಎಸ್ ಅಧಿಕಾರಿಗಳ ವರ್ಗಾವಣೆಮಾಡಿ ಸೋಮವಾರ ಆದೇಶ ಹೊರಡಿಸಿದೆ.
Published: 14th November 2022 11:16 PM | Last Updated: 14th November 2022 11:16 PM | A+A A-

ರವಿಕಾಂತೇಗೌಡ
ಬೆಂಗಳೂರು: ರಾಜ್ಯ ಸರ್ಕಾರ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದು, ಬಿಆರ್ ರವಿಕಾಂತೇಗೌಡ ಹಾಗೂ ರವಿ ಚನ್ನಣ್ಣನವರ್ ಸೇರಿದಂತೆ 11 ಐಪಿಎಸ್ ಅಧಿಕಾರಿಗಳ ವರ್ಗಾವಣೆಮಾಡಿ ಸೋಮವಾರ ಆದೇಶ ಹೊರಡಿಸಿದೆ.
ಬೆಂಗಳೂರು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾಗಿದ್ದ ರವಿಕಾಂತೇಗೌಡ ಅವರನ್ನು ಸಿಐಡಿ ಡಿಐಜಿಯಾಗಿ ವರ್ಗಾವಣೆ ಮಾಡಲಾಗಿದೆ.
ಇದನ್ನು ಓದಿ: ಆಡಳಿತ ಯಂತ್ರಕ್ಕೆ ಬಿಸಿ ಮುಟ್ಟಿಸಿದ ಸರ್ಕಾರ: ಹಲವು ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಆಡಳಿತ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಬ್ದುಲ್ ಸಲೀಂ ಅವರನ್ನು ಬೆಂಗಳೂರು ಸಂಚಾರ ವಿಭಾಗದ ವಿಶೇಷ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ. ಉಮೇಶ್ ಕುಮಾರ್ ಅವರನ್ನು ಆಡಳಿತ ವಿಭಾಗದ ಎಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ದೇವಜ್ಯೋತಿ ರೇ ಅವರನ್ನು ಮಾನವ ಹಕ್ಕುಗಳ ಆಯೋಗ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ.
ಕಿಯೋನಿಕ್ಸ್ ನಿರ್ದೇಶಕರಾಗಿ ರವಿ ಡಿ ಚೆನ್ನಣ್ಣ ನವರ್, ಬಳ್ಳಾರಿ ಐಜಿ ಆಗಿ ಲೋಕೇಶ್ ಕುಮಾರ್, ಮಂಗಳೂರು ಪಶ್ಚಿಮ ವಲಯ ಐಜಿಯಾಗಿ ಚಂದ್ರಗುಪ್ತ, ಮೈಸೂರು ಸಿಟಿ ಕಮಿಷನರ್ ಆಗಿ ರಮೇಶ್ ಅವರನ್ನು ವರ್ಗಾವಣೆ ಮಾಡಲಾಗಿದೆ.