ಟಿಪ್ಪು ಪ್ರತಿಮೆ ನಿರ್ಮಾಣ ಇಸ್ಲಾಂ ನೈತಿಕತೆಗೆ ವಿರುದ್ಧ, ಕೋಮು ಸೌಹಾರ್ದತೆಗೆ ಧಕ್ಕೆ: ಮುಸ್ಲಿಂ ಸಮುದಾಯದ ವಿಚಾರವಾದಿಗಳ ಅಸಮ್ಮತಿ!

ಮೈಸೂರು ಶಾಸಕ ತನ್ವೀರ್ ಸೇಠ್ ಟಿಪ್ಪು ಸುಲ್ತಾನ್ ಅವರ 100 ಅಡಿ ಪ್ರತಿಮೆ ನಿರ್ಮಾಣ ಮಾಡುವುದಾಗಿ ನೀಡಿರುವ ಹೇಳಿಕೆ ಬಗ್ಗೆ ಮುಸ್ಲಿಂ ಸಮುದಾಯದ ಕೆಲ ಬುದ್ದಿ ಜೀವಿಗಳು ಅಸಮ್ಮತಿ ಸೂಚಿಸಿದ್ದಾರೆ.
ಟಿಪು ಸುಲ್ತಾನ್
ಟಿಪು ಸುಲ್ತಾನ್

ಬೆಂಗಳೂರು: ಮೈಸೂರು ಶಾಸಕ ತನ್ವೀರ್ ಸೇಠ್ ಟಿಪ್ಪು ಸುಲ್ತಾನ್ ಅವರ 100 ಅಡಿ ಪ್ರತಿಮೆ ನಿರ್ಮಾಣ ಮಾಡುವುದಾಗಿ ನೀಡಿರುವ ಹೇಳಿಕೆ ಬಗ್ಗೆ ಮುಸ್ಲಿಂ ಸಮುದಾಯದ ಕೆಲ ಬುದ್ದಿ ಜೀವಿಗಳು ಅಸಮ್ಮತಿ ಸೂಚಿಸಿದ್ದಾರೆ.

ಟಿಪ್ಪು ಸುಲ್ತಾನ್ ಪ್ರತಿಮೆ ನಿರ್ಮಾಣದಿಂದ ಸಮಾಜಕ್ಕೆ ಯಾವುದೇ ಉಪಯೋಗವಿಲ್ಲ, ಆದ್ಯತೆಗಳ ತಪ್ಪಾದ ಪ್ರತಿಬಿಂಬ ಎಂದು ಹೇಳಲಾಗುತ್ತಿದೆ.  ಶಾಸಕರು ಮುಸ್ಲಿಂ ಸಮುದಾಯಕ್ಕೆ ಹೆಚ್ಚು ಹಾನಿ ಮಾಡುತ್ತಿದ್ದಾರೆ. "ಪ್ರತಿಮೆಗೆ ಬದಲಾಗಿ, ನಮ್ಮ ಸಮುದಾಯಕ್ಕೆ ಗುಣಮಟ್ಟದ ಶಿಕ್ಷಣ, ಸುಧಾರಿತ ಆರೋಗ್ಯ ಸೌಲಭ್ಯಗಳು ಮತ್ತು ಕಡಿಮೆ ವೆಚ್ಚದ ವಸತಿಗಳ ಪ್ರವೇಶದ ಅಗತ್ಯವಿದೆ. ಭವಿಷ್ಯದಲ್ಲಿ ಧ್ವಂಸಗೊಳ್ಳಬಹುದಾದ ಪ್ರತಿಮೆಯನ್ನು ಸ್ಥಾಪಿಸಲು ಸಾರ್ವಜನಿಕ ನಿಧಿಯನ್ನು ದೊಡ್ಡ ಪ್ರಮಾಣದಲ್ಲಿ ಖರ್ಚು ಮಾಡುವುದು ಅಸಂಬದ್ಧ ಹ್ಯೂಮನ್ ಟಚ್‌ ಎನ್ ಜಿಒ ಕಾರ್ಯದರ್ಶಿ ತಾಜಿಯೂನ್ ಉಮರ್ ಹೇಳಿದ್ದಾರೆ.

ಇದುವರೆಗೂ ಸುಮಾರು 2000 ಬಡವರ ಮದುವೆ ಮಾಡಿರುವ ತಾಜಿಯೂನ್ ಉಮರ್ ಮಾತನಾಡಿ,  ಟಿಪ್ಪು ಪ್ರತಿಮೆ ನಿರ್ಮಾಣದಿಂದ ಸಮಾಜಕ್ಕೆ ಪ್ರಯೋಜನವಾಗುತ್ತಿಲ್ಲ. ಇದು ಇಸ್ಲಾಮಿನ ನೈತಿಕತೆಗೆ ವಿರುದ್ಧವಾಗಿದೆ. ಅಲ್ಲದೆ, ಪ್ರತಿಮೆಯು ಕೋಮು ಸೌಹಾರ್ಧತೆಗೆ ಧಕ್ಕೆಉಂಟುಮಾಡಬಹುದು,  ಕೆಲವರು ಈ ಸಮಸ್ಯೆಯ ಲಾಭವನ್ನು ಪಡೆಯಬಹುದು ಎಂದು ಅವರು ಹೇಳಿದರು.

ಇದು ಸಂಪೂರ್ಣ ರಾಜಕೀಯ ಪ್ರೇರಿತವಾದದ್ದು, ಟಿಪ್ಪುವಿನ ಘನತೆಯನ್ನು ಪ್ರತಿಮೆ ಮಟ್ಟಕ್ಕೆ ಇಳಿಸಲು ಸಾಧ್ಯವಿಲ್ಲ, ಇದನ್ನು ರಾಜಕಾರಣಿಗಳು  ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಬಾರದು,  ಟಿಪ್ಪುವಿನ ಕೊಡುಗೆ ಮತ್ತು ಶೌರ್ಯ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಟಿಪ್ಪುವಿನ ಪ್ರತಿಮೆ ಬೇಕಿಲ್ಲ ಎಂದು CIGMA ಫೌಂಡೇಶನ್‌ನ ಸಂಸ್ಥಾಪಕ ಅಮೀನ್ ಮುದಾಸರ್ ಅಭಿಪ್ರಾಯ ಪಟ್ಟಿದ್ದಾರೆ.

ಪ್ರತಿಮೆಯ ಬದಲು ಟಿಪ್ಪುವಿನ ಬೋಧನೆ ಮತ್ತು ಶೌರ್ಯ ಕುರಿತು ವಿಚಾರ ಸಂಕಿರಣಗಳು ನಡೆಯಲಿ. ಅವರ ಜಾತ್ಯತೀತ ಮೌಲ್ಯಗಳತ್ತ ಗಮನ ಹರಿಸಲಿ. ರೇಷ್ಮೆ ಕೃಷಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಅಥವಾ ದೀನದಲಿತರು ಮತ್ತು ದಲಿತರಿಗೆ ಭೂಮಿ ನೀಡುವ ಬಗ್ಗೆ ನಾಯಕರು ಯೋಚಿಸಬಹುದು. ಈ ಕೆಲಸಗಳನ್ನು ಮಾಡಿದರೆ ಅದು ಟಿಪ್ಪುವಿನ ಗೌರವದ ಸಂಕೇತವಾಗುತ್ತದೆ. ಆದರೆ ಪ್ರತಿಮೆ ನಿರ್ಮಾಣದಿಂದ ಯಾವುದೇ ಪ್ರಯೋಜನವಿಲ್ಲ ಎಂದು ರಾಜಕೀಯ ವಿಶ್ಲೇಶಕ ಪ್ರೊ.ಮುಸ್ಸಾಫರ್ ಅಸ್ಸಾದಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com