ಬೆಂಗಳೂರ: ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಭುವನೇಶ್ವರಿ ಪ್ರತಿಮೆ ಅನಾವರಣ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಭುವನೇಶ್ವರಿ ಪ್ರತಿಮೆ ಅನಾವರಣಗೊಳಿಸಿದರು.
ಭುವನೇಶ್ವರಿ ಪ್ರತಿಮೆ ಅನಾವರಣ
ಭುವನೇಶ್ವರಿ ಪ್ರತಿಮೆ ಅನಾವರಣ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಭುವನೇಶ್ವರಿ ಪ್ರತಿಮೆ ಅನಾವರಣಗೊಳಿಸಿದರು.

ಬಳಿಕ ಮಾತನಾಡಿದ ಸಿಎಂ, ಕನ್ನಡಕ್ಕೆ ಎಂದೂ ಆಪತ್ತು ಬಂದಿಲ್ಲ, ಮುಂದೆಯೂ ಬರುವುದಿಲ್ಲ. ಈ ಜಗತ್ತಿನಲ್ಲಿ ಸೂರ್ಯ, ಚಂದ್ರರು ಎಲ್ಲಿಯವರೆಗೂ ಇರುತ್ತಾರೋ, ಅಲ್ಲಿಯವರೆಗೆ ಕನ್ನಡ ಭಾಷೆ ಸಹ ಇರುತ್ತದೆ. ಒಬ್ಬ ಕನ್ನಡ ಭಾಷೆಯ ಪ್ರೇಮಿಯಾಗಿ, ಹೆಮ್ಮೆಯ ಕನ್ನಡಿಗನಾಗಿ ನಾನು ಈ ಮಾತನ್ನು ಅತ್ಯಂತ ಗರ್ವದಿಂದ ಹೇಳುತ್ತೇನೆ ಎಂದರು.

ಕನ್ನಡ ಅತ್ಯಂತ ಪ್ರಾಚೀನವಾದ, ಇತಿಹಾಸ ಹೊಂದಿದ ಭಾಷೆ. ಬದುಕಿಗೆ ಅತ್ಯಂತ ಹತ್ತಿರವಾಗುವ ಹಾಗೂ ಪ್ರಪಂಚದ ಇನ್ನ್ಯಾವುದೇ ಭಾಷೆಗಳಲ್ಲಿ ವ್ಯಕ್ತಪಡಿಸಲಾಗದ ಭಾವನೆಗಳನ್ನು ಕನ್ನಡದಲ್ಲಿ ವ್ಯಕ್ತಪಡಿಸಲು ಸಾಧ್ಯವಾದ ಕಾರಣ, ಕನ್ನಡ ಭಾಷೆ ಜಗತ್ತಿನ ಶ್ರೀಮಂತ ಭಾಷೆಯಾಗಿ ಹೊರಹೊಮ್ಮಿದೆ ಎಂದರು.

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ 2022ರ ಬಗ್ಗೆ ಸಮಗ್ರ ಚರ್ಚೆಯಾಗಲಿ ಎನ್ನುವ ಕಾರಣಕ್ಕೆ ಕಳೆದ ಅಧಿವೇಶನದಲ್ಲಿಯೇ ಮಂಡನೆ ಮಾಡಲಾಗಿದೆ. ಎಲ್ಲರ ಅಭಿಪ್ರಾಯಗಳನ್ನು ಗೌರವಪೂರ್ವಕವಾಗಿ ಸ್ವೀಕರಿಸಲಾಗುವುದು. ಈ ಮಸೂದೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪಾತ್ರ ಬಹಳ ಮುಖ್ಯ. ಮಸೂದೆಯು ಪರಿಷತ್ತನ್ನೂ ಒಳಗೊಳ್ಳಲಿದೆ. ನಮ್ಮ ಅವಧಿಯಲ್ಲಿಯೇ ಈ ಮಸೂದೆಯನ್ನು ಕಾನೂನು ಮಾಡಲಾಗುವುದು’ ಎಂದು ಸಿಎಂ ಹೇಳಿದರು.

ಬೆಂಗಳೂರಿನ ಸ್ತಪತಿ ಕ್ರಿಯೇಷನ್ಸ್‌ನ ಕಲಾವಿದ ಎನ್. ಶಿವದತ್ತ ಅವರು ಭುವನೇಶ್ವರಿ ಪ್ರತಿಮೆಯನ್ನು ನಿರ್ಮಿಸಿದ್ದು, ಪ್ರತಿಮೆ ಆರು ಕಾಲು ಅಡಿ ಎತ್ತರವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com