'ಮದುವೆಯಾಗಲು ಹುಡುಗಿಯರು ಸಿಗುತ್ತಿಲ್ಲ, ನೀವು ಸಿಎಂ ಆದ ಕೂಡಲೇ ಕೋಲಾರದಿಂದ ಬೇರೆ ಜಿಲ್ಲೆಗೆ ಹೆಣ್ಣು ಕೊಡುವುದನ್ನು ಬ್ಯಾನ್ ಮಾಡಿ'
ಕೋಲಾರದಲ್ಲಿ ಒಕ್ಕಲಿಗ ರೈತ ಯುವಕರಿಗೆ ವಧುಗಳ ಕೊರತೆ ಎದುರಾಗಿದೆ. ನೀವು ಮುಖ್ಯಮಂತ್ರಿ ಆದ ಕೂಡಲೇ ನಮ್ಮ ಜಿಲ್ಲೆಯ ವಧುಗಳು ಬೇರೆ ಜಿಲ್ಲೆಯ ವರಗಳನ್ನು ಮದುವೆಯಾಗುವುದನ್ನು ನಿಷೇಧಿಸಿ ನಿಯಮ ಜಾರಿಗೆ ತರಬೇಕು
Published: 22nd November 2022 08:36 AM | Last Updated: 22nd November 2022 08:42 AM | A+A A-

ಎಚ್.ಡಿ ಕುಮಾರಸ್ವಾಮಿ
ಕೋಲಾರ: ಕೋಲಾರ ಜಿಲ್ಲೆಯಲ್ಲಿ ಪಂಚರತ್ನ ಯಾತ್ರೆ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಗ್ರಾಮಸ್ಥರು ಮತ್ತು ರೈತರ ಕಷ್ಟಗಳನ್ನು ಆಲಿಸುವ ಸಂದರ್ಭದಲ್ಲಿ ಮುದುವತ್ತಿ ಗ್ರಾಮದ ಯುವಕ ಧನಂಜಯ ಎನ್ನುವ ಯುವಕ, ಒಕ್ಕಲಿಗ ರೈತ ಯುವಕರಿಗೆ ಮದುವೆಗೆ ವಧುಗಳ ಸಮಸ್ಯೆಗಳ ಬಗ್ಗೆ ಪತ್ರ ಬರೆದಿದ್ದಾರೆ.
ಕೋಲಾರದಲ್ಲಿ ಒಕ್ಕಲಿಗ ರೈತ ಯುವಕರಿಗೆ ವಧುಗಳ ಕೊರತೆ ಎದುರಾಗಿದೆ. ನೀವು ಮುಖ್ಯಮಂತ್ರಿ ಆದ ಕೂಡಲೇ ನಮ್ಮ ಜಿಲ್ಲೆಯ ವಧುಗಳು ಬೇರೆ ಜಿಲ್ಲೆಯ ವರಗಳನ್ನು ಮದುವೆಯಾಗುವುದನ್ನು ನಿಷೇಧಿಸಿ ನಿಯಮ ಜಾರಿಗೆ ತರಬೇಕು ಎಂದು ಕುಮಾರಸ್ವಾಮಿಗೆ ಧನಂಜಯ ಅವಲತ್ತುಕೊಂಡಿದ್ದಾನೆ.
ಕುಮಾರಸ್ವಾಮಿ ಸಿಎಂ ಆಗುವುದು ಖಚಿತವಾಗಿದ್ದು, ಜೆಡಿಎಸ್ ಸರ್ಕಾರದಲ್ಲಿ ನಿಯಮ ಜಾರಿಗೆ ತರಲು ಕ್ರಮ ಕೈಗೊಳ್ಳುವಂತೆ ಧನಂಜಯ ಮನವಿ ಮಾಡಿದ್ದಾರೆ. ಮದುವೆ ವಯಸ್ಸು ಮೀರುತ್ತಿದ್ದರೂ ವಧು ದೊರೆಯದಿರುವ ಜಟಿಲ ಸಮಸ್ಯೆಯಾಗಿದೆ. ವಿಚಿತ್ರ ಆದರೂ ಸಾಮಾಜಿಕ ಸಮಸ್ಯೆ ಬಗ್ಗೆ ಧನಂಜಯ ಪತ್ರ ಮೂಲಕ ಎಲ್ಲರ ಗಮನಕ್ಕೆ ತಂದಿದ್ದಾರೆ