ಕೆಂಪೇಗೌಡ ಮೆಟ್ರೊ ನಿಲ್ದಾಣದಲ್ಲಿ ಸಾಹಿತ್ಯ ಅಕಾಡೆಮಿ 'ಪುಸ್ತಕ ಮಳಿಗೆ' ಪ್ರಾರಂಭ: ಕನ್ನಡ ನೆಲ, ಭಾಷೆ, ಸಂಸ್ಕೃತಿ ಬಗ್ಗೆ ಚಂದ್ರಶೇಖರ ಕಂಬಾರ ಮಾತು

ಸಾಹಿತ್ಯ, ಪುಸ್ತಕ ಓದುಗರ ಸಂಖ್ಯೆಯನ್ನು ಹೆಚ್ಚಿಸಲು ಸಾಹಿತ್ಯ ಅಕಾಡೆಮಿ ಇತ್ತೀಚಿನ ವರ್ಷಗಳಲ್ಲಿ ಮೆಟ್ರೊ ನಿಲ್ದಾಣಗಳಲ್ಲಿ ಪುಸ್ತಕದ ಮಳಿಗೆ ಅಥವಾ ಬುಕ್ ಸ್ಟೋರ್ ಗಳನ್ನು ತೆರೆಯುವ ಅಭಿಯಾನವನ್ನು ಕೈಗೊಂಡಿದೆ.
ಸಾಹಿತ್ಯ ಅಕಾಡೆಮಿಯ ಪುಸ್ತಕ ಮಳಿಗೆ
ಸಾಹಿತ್ಯ ಅಕಾಡೆಮಿಯ ಪುಸ್ತಕ ಮಳಿಗೆ

ಬೆಂಗಳೂರು: ಸಾಹಿತ್ಯ, ಪುಸ್ತಕ ಓದುಗರ ಸಂಖ್ಯೆಯನ್ನು ಹೆಚ್ಚಿಸಲು ಸಾಹಿತ್ಯ ಅಕಾಡೆಮಿ ಇತ್ತೀಚಿನ ವರ್ಷಗಳಲ್ಲಿ ಮೆಟ್ರೊ ನಿಲ್ದಾಣಗಳಲ್ಲಿ ಪುಸ್ತಕದ ಮಳಿಗೆ ಅಥವಾ ಬುಕ್ ಸ್ಟೋರ್ ಗಳನ್ನು ತೆರೆಯುವ ಅಭಿಯಾನವನ್ನು ಕೈಗೊಂಡಿದೆ. 2014ರಲ್ಲಿ ದೆಹಲಿ ಮೆಟ್ರೊ ನಿಲ್ದಾಣದಲ್ಲಿ ಆರಂಭವಾದ ಈ ಅಭಿಯಾನ, ಬೆಂಗಳೂರಿನಲ್ಲಿ ಮೆಜೆಸ್ಟಿಕ್ ನಾಡಪ್ರಭು ಕೆಂಪೇಗೌಡ ನಿಲ್ದಾಣದಲ್ಲಿ ಇತ್ತೀಚೆಗೆ ಪುಸ್ತಕದ ಮಳಿಗೆಯನ್ನು ಅಕಾಡೆಮಿ ತೆರೆದಿದೆ.

ಮೆಟ್ರೊ ನಿಲ್ದಾಣಗಳಲ್ಲಿ ಪುಸ್ತಕದ ಮಳಿಗೆಯನ್ನು ಆರಂಭಿಸಿರುವ ಬಗ್ಗೆ ಮಾತನಾಡಿರುವ ಕನ್ನಡದ ಹಿರಿಯ ಕವಿ, ಸಾಹಿತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ, ಅಕಾಡೆಮಿಯಿಂದ ಪ್ರಕಟಗೊಂಡ ಪುಸ್ತಕಗಳು ಹೆಚ್ಚೆಚ್ಚು ಜನತೆಗೆ ಸಿಗಲು, ಜನರಿಗೆ ಹೆಚ್ಚು ಪರಿಚಯವಾಗಲು ಇದು ಸಹಾಯವಾಗಲಿದೆ. 24 ಸ್ಥಳೀಯ ಭಾಷೆಗಳಲ್ಲಿ ಸುಮಾರು 2 ಸಾವಿರ ಪುಸ್ತಕಗಳು ಮೆಟ್ರೊ ಪ್ರಯಾಣಿಕರಿಗೆ ಲಭ್ಯವಾಗಲಿದೆ ಎಂದರು.

ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗುವುದಕ್ಕೆ ಮೊದಲು ಕಂಬಾರರು ಸಾಹಿತ್ಯ ಬರವಣಿಗೆ, ಉತ್ತರ ಕರ್ನಾಟಕದ ಸಂಸ್ಕೃತಿಯನ್ನು ರಾಷ್ಟ್ರೀಯ ಭೂಪಟದಲ್ಲಿ ತಂದ ಸಾಹಿತಿ, ನಾಟಕಗಾರ ಎಂದು ಜನಪ್ರಿಯರು. ಪುರಾಣ ಮತ್ತು ಜಾನಪದದೊಂದಿಗೆ ಹೆಣೆದುಕೊಂಡಿರುವ ಸಮಕಾಲೀನ ಸಮಸ್ಯೆಗಳನ್ನು ನಿಭಾಯಿಸುವ ನಾಟಕಗಳು ಮತ್ತು ಕವಿತೆಗಳ ಪ್ರಕಾರದ ಪ್ರವರ್ತಕರು ಕಂಬಾರರು.

60 ರ ದಶಕದ ಆರಂಭದಲ್ಲಿ ನವ್ಯ (ಆಧುನಿಕ) ಚಳುವಳಿಯ ಸಮಯದಲ್ಲಿ ಮುಂಚೂಣಿಗೆ ಬಂದರೂ, ಕಂಬಾರರು ಚಳುವಳಿಯನ್ನು ತಿರಸ್ಕರಿಸಿ ತಮ್ಮದೇ ಆದ ಮಾರ್ಗವನ್ನು ಆರಿಸಿಕೊಂಡರು. "ನವ್ಯ ಕಾವ್ಯದ ಬರಹಗಾರರು ಟಿ ಎಸ್ ಎಲಿಯಟ್, ಡಿ ಎಚ್ ಲಾರೆನ್ಸ್ ಮತ್ತು ಸಾಮಾನ್ಯವಾಗಿ ಪಶ್ಚಿಮದಂತಹ ಬರಹಗಾರರ ಆದರ್ಶಗಳನ್ನು ಪ್ರತಿಪಾದಿಸಲು ಪ್ರಯತ್ನಿಸಿದರು. ಆದರೆ ನಮ್ಮ ಆದರ್ಶಗಳು ಮೂಲಭೂತವಾಗಿ ಪಶ್ಚಿಮದಿಂದ ಭಿನ್ನವಾಗಿರುವುದರಿಂದ ಅದು ನನಗೆ ಸರಿಹೊಂದುವುದಿಲ್ಲ ಎನ್ನುತ್ತಾರೆ ಚಂದ್ರಶೇಖರ ಕಂಬಾರರು.

ಪಾಶ್ಚಾತ್ಯ ಕಲೆ, ಸಂಸ್ಕೃತಿಯನ್ನು ಅಪ್ಪಿಕೊಳ್ಳುವ ಭರದಲ್ಲಿ ನಾವು ಶತಮಾನಗಳ ಸಂಪ್ರದಾಯಗಳಿಂದ ಸಮೃದ್ಧವಾಗಿರುವ ನಮ್ಮ ಸಂಸ್ಕೃತಿಯನ್ನು ನಿರ್ಲಕ್ಷಿಸಿದ್ದೇವೆ ಎನ್ನುತ್ತಾರೆ ಕಂಬಾರರು. ಇತ್ತೀಚಿನ ತಿಂಗಳುಗಳಲ್ಲಿ, ಸಂಸದೀಯ ಸಮಿತಿಯು ತಾಂತ್ರಿಕ ಮತ್ತು ತಾಂತ್ರಿಕೇತರ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದಿ ಭಾಷೆಯನ್ನು ಕಡ್ಡಾಯವಾಗಿ ಬೋಧನಾ ಮಾಧ್ಯಮವನ್ನಾಗಿ ಮಾಡಬೇಕೆಂದು ಶಿಫಾರಸು ಮಾಡಿದ ನಂತರ, ಹಿಂದಿಯನ್ನು ಅಧಿಕೃತ ಭಾಷೆಯಾಗಿ ಬಳಸುವ ಚರ್ಚೆಯು ಮತ್ತೊಮ್ಮೆ ವಿವಾದವನ್ನು ಹುಟ್ಟುಹಾಕಿದೆ.

ಸ್ಥಳೀಯ ಭಾಷೆಯ ಶಿಕ್ಷಣಕ್ಕೆ ಒತ್ತು ನೀಡಿ ಹೆಸರಾಗಿರುವ ಕಂಬಾರರು, ಇಂಗ್ಲಿಷ್ ಮತ್ತು ಹಿಂದಿ ಸಂವಹನ ಭಾಷೆಯಾಗಿ ಉಪಯುಕ್ತವಾಗಿದ್ದರೂ, ಅವು ಶಿಕ್ಷಣಕ್ಕೆ ವಾಸ್ತವಿಕ ಮಾಧ್ಯಮವಾಗಬಾರದು ಎಂದು ಹೇಳಿಕೊಂಡು ಬಂದವರು. “ಮಕ್ಕಳು ಯಾವಾಗಲೂ ತಮ್ಮ ಮಾತೃಭಾಷೆಯಲ್ಲಿ ಪ್ರತಿಯೊಂದು ವಿಷಯವನ್ನು ಕಲಿಯಬೇಕು. ಇದು ಪ್ರಾದೇಶಿಕ ಭಾಷೆಗಳನ್ನು ಉಳಿಸಿಕೊಳ್ಳಲು ಮತ್ತು ಬೆಳೆಯಲು ಸಹಾಯ ಮಾಡುತ್ತದೆ, ಎಂದು ಹೇಳಿಕೊಂಡು ಬಂದಿದ್ದಾರೆ.

ಸಮಾಜದ ಹೆಚ್ಚುತ್ತಿರುವ ಅಂತರ್ಸಂಪರ್ಕಿತ ಸ್ವರೂಪವನ್ನು ಗಮನಿಸಿದರೆ, ಈ ಕಾಲದಲ್ಲಿ ಸಾಮಾನ್ಯ ಸಂವಹನ ಭಾಷೆಯ ಅಗತ್ಯವು ಇನ್ನೂ ಹೆಚ್ಚಾಗಿದೆ ಎಂದು ಕಂಬಾರರು ಭಾವಿಸುತ್ತಾರೆ. “ನಮ್ಮ ಭಾಷೆಗಿಂತ ಬೇರೆ ಭಾಷೆಗಳನ್ನು ಬಳಸುವ ಅಗತ್ಯ ಯಾವತ್ತೂ ಇದೆ. ನಮ್ಮ ಸುತ್ತಲಿನ ಪ್ರದೇಶಗಳ ಜನರೊಂದಿಗೆ ನಾವು ಸಂವಹನ ನಡೆಸಬೇಕಾದಾಗ, ಬೇರೆ ಭಾಷೆಗಳು ಗೊತ್ತಿರಬೇಕಾಗುತ್ತದೆ ಎನ್ನುತ್ತಾರೆ.

<strong>ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ </strong>
ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ 

ಆದರೆ ಇತ್ತೀಚಿನ ವರ್ಷಗಳಲ್ಲಿ ನಮ್ಮ ಸಂವಹನ ಕ್ಷೇತ್ರದ ವ್ಯಾಪ್ತಿ ಬದಲಾಗಿದೆ. ಕರ್ನಾಟಕದಲ್ಲಿ ಹೆಚ್ಚಿನವರಿಗೆ ಪಶ್ಚಿಮ ಬಂಗಾಳದಲ್ಲಿ ಈ ಹಿಂದೆ ಸಂವಹನ ನಡೆಸುವ ಅಗತ್ಯವಿರಲಿಲ್ಲ, ಆದರೆ ಇಂದು ಕಾರ್ಯವ್ಯಾಪ್ತಿ ವಿಸ್ತಾರವಾಗಿದೆ. ವಿವಿಧ ಸಂಸ್ಕೃತಿಗಳ ಜನರೊಂದಿಗೆ ಸಂವಹನ ನಡೆಸುವ ಅಗತ್ಯವನ್ನು ಪೂರೈಸಲು ಬಹು ಭಾಷೆಗಳನ್ನು ಕಲಿಯುವುದು ಹೆಚ್ಚಿನವರಿಗೆ ಅಪ್ರಾಯೋಗಿಕವಾಗಿದೆ ಎನ್ನುವ ಕಂಬಾರರು ಹಿಂದಿಯನ್ನು ಸಾಮಾನ್ಯ ಸಂವಹನ ಭಾಷೆಯಾಗಿ ಬಳಸಬೇಕೆಂದು ನಂಬುತ್ತಾರೆ.

ಹಿಂದಿ ರಾಷ್ಟ್ರದ ಅಧಿಕೃತ ಭಾಷೆಯಾಗಿ ಅದರ ಬಳಕೆಯ ಪರವಾಗಿ ಮತ್ತು ವಿರುದ್ಧವಾಗಿ ವಿವಿಧ ವಾದಗಳು ಇದ್ದರೂ, ಇದು ಸಂವಹನ ಭಾಷೆಯಾಗಿ ಯೋಗ್ಯವಾದ ಆಯ್ಕೆಯಾಗಿದೆ. ಇಂಗ್ಲಿಷ್‌ಗಿಂತ ಖಂಡಿತವಾಗಿಯೂ ಉತ್ತಮವಾಗಿದೆ ಎಂದು ನಾನು ಭಾವಿಸುತ್ತೇನೆ ಎನ್ನುತ್ತಾರೆ, ಕಂಬಾರ ಅವರು ಹಲವು ವರ್ಷಗಳಿಂದ ದಕ್ಷಿಣ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಆದರೆ ಶಿವಪುರದಂತೆ - ಬೆಳಗಾವಿ ಜಿಲ್ಲೆಯ ಅವರ ಸ್ಥಳೀಯ ಗ್ರಾಮವನ್ನು ಆಧರಿಸಿದ ಕಾಲ್ಪನಿಕ ಮತ್ತು ಆದರ್ಶಪ್ರಾಯ ಸ್ಥಳವಾಗಿದೆ. ಇದು ಅವರ ಅನೇಕ ಕೃತಿಗಳಲ್ಲಿನ ನಿರೂಪಣೆಯ ಕೇಂದ್ರವಾಗಿದೆ, ನಗರ ಪ್ರದೇಶಗಳು ಅವರ ಕೃತಿಗಳಿಂದ ದೂರವಿರುತ್ತದೆ.

ಬಾಲ್ಯ, ಹುಟ್ಟೂರಿನ ಘಮ ಕಂಬಾರರ ಸಾಹಿತ್ಯದಲ್ಲಿ: ಬಗ್ಗೆ ಕೇಳಿದಾಗ, ನಮ್ಮ ಬಾಲ್ಯದ ಅನುಭವಗಳು ನಮ್ಮ ಪ್ರೌಢಾವಸ್ಥೆಯನ್ನು ರೂಪಿಸುತ್ತವೆ. ನಾನು ಪ್ರಪಂಚವನ್ನು ವ್ಯಾಪಕವಾಗಿ ನೋಡಿದ್ದೇನೆ, 180 ಕ್ಕೂ ಹೆಚ್ಚು ದೇಶಗಳಿಗೆ ಪ್ರಯಾಣಿಸಿದ್ದೇನೆ. ಆದರೆ ಶಿವಪುರದಂತಹ ಸುಂದರ ಸ್ಥಳವನ್ನು ನಾನು ಇನ್ನೂ ನೋಡಿಲ್ಲ. ನಾನು ನಗರಕ್ಕೆ ಭೇಟಿ ನೀಡಿದಾಗ ಚಿಕಾಗೋ ನದಿಯಿಂದ ಮಂತ್ರಮುಗ್ಧನಾಗಿದ್ದರೂ, ನನ್ನೂರಿನ ಘಟಪ್ರಭಾ ನದಿಯ ಸೌಂದರ್ಯಕ್ಕೆ ಯಾವುದೂ ಸಾಟಿಯಿಲ್ಲ ಎಂದೆನಿಸುತ್ತದೆ ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com