ನಮ್ಮ ಮೆಟ್ರೊದಿಂದ ಸದ್ಯದಲ್ಲೇ ಆರು ಮಂದಿಯವರೆಗೆ ಗುಂಪು ಪ್ರಯಾಣಕ್ಕೆ ಏಕ ಮೆಟ್ರೋ QR ಕೋಡ್ ಆಧಾರಿತ ಟಿಕೆಟ್ ವ್ಯವಸ್ಥೆ

ನಮ್ಮ ಮೆಟ್ರೊದ ಆ್ಯಪ್ ಮತ್ತು ವಾಟ್ಸ್‌ಆ್ಯಪ್‌ನಲ್ಲಿ ಬಿಡುಗಡೆಯಾದ ಕ್ಯೂ ಆರ್ ಕೋಡ್ ಆಧಾರಿತ ಟಿಕೆಟ್‌ ವ್ಯವಸ್ಥೆ(QR code) ಯಶಸ್ಸಿನಿಂದ ಉತ್ತೇಜಿತವಾಗಿರುವ ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (BMRCL) ಶೀಘ್ರದಲ್ಲೇ ಒಂದು ಕ್ಯೂ ಆರ್ ಕೋಡ್ ಟಿಕೆಟ್ ಬಳಸಿ ಗರಿಷ್ಠ ಆರು ಮಂದಿಯವರೆಗೆ ಪ್ರಯಾಣಿಸಲು ಅನುಮತಿ ನೀಡಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾ
ನಮ್ಮ ಮೆಟ್ರೊ
ನಮ್ಮ ಮೆಟ್ರೊ

ಬೆಂಗಳೂರು: ನಮ್ಮ ಮೆಟ್ರೊದ ಆ್ಯಪ್ ಮತ್ತು ವಾಟ್ಸ್‌ಆ್ಯಪ್‌ನಲ್ಲಿ ಬಿಡುಗಡೆಯಾದ ಕ್ಯೂ ಆರ್ ಕೋಡ್ ಆಧಾರಿತ ಟಿಕೆಟ್‌ ವ್ಯವಸ್ಥೆ(QR code) ಯಶಸ್ಸಿನಿಂದ ಉತ್ತೇಜಿತವಾಗಿರುವ ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (BMRCL) ಶೀಘ್ರದಲ್ಲೇ ಒಂದು ಕ್ಯೂ ಆರ್ ಕೋಡ್ ಟಿಕೆಟ್ ಬಳಸಿ ಗರಿಷ್ಠ ಆರು ಮಂದಿಯವರೆಗೆ ಪ್ರಯಾಣಿಸಲು ಅನುಮತಿ ನೀಡಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ. 

ಮೆಟ್ರೊದಲ್ಲಿ ಗುಂಪಾಗಿ ಪ್ರಯಾಣಿಸುವವರು, ಕುಟುಂಬದ ಜೊತೆ ಹೋಗುವವರು, ಸ್ವಯಂಚಾಲಿತ ಶುಲ್ಕ ಸಂಗ್ರಹ ಗೇಟ್‌ಗಳಲ್ಲಿ ಸ್ಥಾಪಿಸಲಾದ QR ರೀಡರ್‌ನಲ್ಲಿ ಇದುವರೆಗೆ ಒಂದು ಮೊಬೈಲ್‌ನಲ್ಲಿ ಕೇವಲ ಒಂದೇ ಟಿಕೆಟ್ ನ್ನು ಸ್ಕ್ಯಾನ್ ಮಾಡಲು ಸಾಧ್ಯವಾಗುತ್ತಿತ್ತು. ಆದರೆ ಇನ್ನು ಮುಂದೆ ಒಂದು ಬಾರಿ ಕ್ಯೂ ಆರ್ ಕೋಡ್ ಬಳಸಿ ಆರು ಮಂದಿಗೆ ಟಿಕೆಟ್ ಬುಕ್ ಮಾಡಿ ಮೆಟ್ರೊದಲ್ಲಿ ಪ್ರಯಾಣಿಸಬಹುದು.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಪ್ರತಿನಿಧಿ ಜೊತೆ ಮಾತನಾಡುತ್ತಾ, ನಮ್ಮ ಮೆಟ್ರೊ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮತ್ತು ಬಿಎಂಆರ್‌ಸಿಎಲ್‌ನ ಡಿಪೋಗಳ ಮುಖ್ಯ ಇಂಜಿನಿಯರ್, ಬಿ ಎಲ್ ಯಶವಂತ ಚವಾಣ್, “ಈ ಸಂಬಂಧ ಪ್ರಸ್ತುತ ಪ್ರಯೋಗಗಳು ನಡೆಯುತ್ತಿವೆ. ನಾವು ಇನ್ನೂ ಕೆಲವು ವಾರಗಳವರೆಗೆ ಪ್ರಾಯೋಗಿಕ ಪರೀಕ್ಷೆ ಮುಂದುವರಿಸುತ್ತೇವೆ. ಬಹು ಪ್ರಯಾಣದ ಟಿಕೆಟ್ ನ್ನು ಜನವರಿ 15 ರೊಳಗೆ ಪ್ರಾರಂಭಿಸುವ ಸಾಧ್ಯತೆ ಇದೆ ಎಂದು ಹೇಳಿದರು.

ನವೆಂಬರ್ 1 ರಂದು ಪ್ರಾರಂಭಿಸಲಾದ ಕ್ಯೂಆರ್ ಟಿಕೆಟಿಂಗ್ ವ್ಯವಸ್ಥೆಯು ಇಷ್ಟು ಕಡಿಮೆ ಸಮಯದಲ್ಲಿ ಅದ್ಭುತ ಪ್ರತಿಕ್ರಿಯೆಯನ್ನು ಪಡೆದಿದೆ ಎಂದರು. ಇದುವರೆಗೆ ಸುಮಾರು 1,800 ಪ್ರಯಾಣಿಕರು ಕ್ಯೂಆರ್ ಟಿಕೆಟ್ ನ್ನು ಬಳಸಿದ್ದಾರೆ. ನವೆಂಬರ್ 20 ರಂದು 12,787 ಕ್ಯೂಆರ್ ಟಿಕೆಟ್‌ಗಳು ಖರೀದಿಸಲಾಗಿದೆ ಎಂದು ಹೇಳಿದರು.

ಇಲ್ಲಿಯವರೆಗೆ ಒಟ್ಟು 1,35,564 ಕ್ಯೂಆರ್ ಟಿಕೆಟ್‌ಗಳನ್ನು ಪ್ರಯಾಣಕ್ಕಾಗಿ ಬಳಸಲಾಗಿದೆ ಎಂದು ಚವಾಣ್ ಹೇಳಿದರು. ಸಾರ್ವಜನಿಕರು ಸಾಕಷ್ಟು ಸ್ಪಂದಿಸುತ್ತಿದ್ದು, ಇಲ್ಲಿಯವರೆಗೆ ಯಾವುದೇ ದೂರುಗಳು ಬಂದಿಲ್ಲ, ಯಾವುದೇ ಪ್ರಮುಖ ದೋಷಗಳನ್ನು ಎದುರಿಸಿಲ್ಲ ಎಂದರು. 

ಈ ಮಧ್ಯೆ, ಬೆಂಗಳೂರು ಮೆಟ್ರೋದ ಪ್ರಯಾಣಿಕರ ಸಂಖ್ಯೆ ಗಗನಕ್ಕೇರುತ್ತಿದೆ. ನವೆಂಬರ್ 14 ರಿಂದ ನವೆಂಬರ್ 19 ರವರೆಗಿನ ಪ್ರಯಾಣಿಕರ ಸಂಚಾರ ಸಂಖ್ಯೆ ಪ್ರತಿದಿನ 5.44 ಲಕ್ಷ ದಾಟಿದೆ, ಕೋವಿಡ್ ಪೂರ್ವ ಸ್ಥಿತಿಗೆ ಬಂದಿದ್ದೇವೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ. ಮೊನ್ನೆ ನವೆಂಬರ್ 19ರಂದು ಶನಿವಾರ 6,06,272 ಮಂದಿ ಮೆಟ್ರೊದಲ್ಲಿ ಪ್ರಯಾಣಿಸಿದ್ದಾರೆ ಎಂದು ಸಿಪಿಆರ್‌ಒ ತಿಳಿಸಿದೆ.

ನಮ್ಮ ಮೆಟ್ರೋದಲ್ಲಿ ಟಿಕೆಟ್​​​ಗಾಗಿ ಉದ್ದುದ್ದ ಸಾಲಿನಲ್ಲಿ ನಿಂತುಕೊಳ್ಳಬೇಕಾಗಿತ್ತು. ಆದರೆ ಇನ್ಮುಂದೆ ನಿಮ್ಮ ಮೊಬೈಲ್ ಮೂಲಕವೇ ಟಿಕೆಟ್ ಖರೀದಿಸುವ ವ್ಯವಸ್ಥೆಯನ್ನು ಮೆಟ್ರೋ ನಿಗಮ ಮಾಡುತ್ತಿದೆ. ಈ ಕ್ಯೂ ಆರ್ ಕೋಡ್​ ಆಧಾರಿತ ಟಿಕೆಟ್​ ವ್ಯವಸ್ಥೆಯಿಂದ ಚಿಲ್ಲರೆ ನೀಡುವ ಸಮಸ್ಯೆಯೂ ದೂರವಾಗಲಿದೆ. 

ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ಮಾರ್ಗದಲ್ಲಿ ಪರೀಕ್ಷೆ
ಹಂತ-2 ರ ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ಲೈನ್‌ನಲ್ಲಿ ನಡೆಯುತ್ತಿರುವ ಪರೀಕ್ಷೆ ಮತ್ತು ಕಾರ್ಯಾರಂಭವನ್ನು ವೈಟ್‌ಫೀಲ್ಡ್ ಮತ್ತು ಗರುಡಾಚಾರ್ಪಾಳ್ಯ ನಿಲ್ದಾಣಗಳ ನಡುವೆ ಒಳಗೊಂಡಿದೆ ಎಂದು ಹಿರಿಯ ಮೆಟ್ರೋ ಅಧಿಕಾರಿ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com