ಮಹಾರಾಷ್ಟ್ರದಲ್ಲಿ ಕೆಎಸ್ ಆರ್ ಟಿಸಿ ಬಸ್ಸುಗಳ ಮೇಲೆ ಕಲ್ಲು ತೂರಾಟ: ಮೀರಜ್ ಮಾರ್ಗವಾಗಿ ಸಂಚರಿಸುವ ಬಸ್ ಸಂಚಾರ ಸ್ಥಗಿತ
ಬೆಳಗಾವಿ/ಬೆಂಗಳೂರು: ಮಹಾರಾಷ್ಟ್ರದಲ್ಲಿ KSRTC ಬಸ್ಗಳ ಮೇಲೆ ಕಲ್ಲುತೂರಾಟ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿ, ಮಹಾರಾಷ್ಟ್ರ ಗೃಹ ಸಚಿವರ ಜತೆ ನಮ್ಮ ಗೃಹ ಸಚಿವರು ಚರ್ಚಿಸುತ್ತಾರೆ. ಅಗತ್ಯ ಕ್ರಮ ಕೈಗೊಳ್ಳುವಂತೆ ಗೃಹ ಸಚಿವರಿಗೆ ಸೂಚನೆ ನೀಡಿದ್ದೇನೆ. ಎರಡು ರಾಜ್ಯಗಳ ಸಾಮರಸ್ಯ ಹಾಳುಮಾಡುವುದು ಬೇಡ ಎಂದಿದ್ದಾರೆ.
ಕರ್ನಾಟಕದ ಬಸ್ ಮೇಲೆ ಮಹಾರಾಷ್ಟ್ರದ ಗೂಂಡಾಗಳಿಂದ ಕಲ್ಲು ತೂರಾಟವಾಗಿದೆ. ಮಹಾರಾಷ್ಟ್ರ-ಕರ್ನಾಟಕ ಗಡಿಯಲ್ಲಿ ಕಿಡಿಗೇಡಿಗಳು ಪುಂಡಾಟ ನಡೆಸುತ್ತಿದ್ದು, ನಿನ್ನೆ ಮಸಿ ಬಳಿದಿದ್ದು, ಇಂದು ಕರ್ನಾಟಕ ಬಸ್ಗಳ ಮೇಲೆ ಕಲ್ಲು ತೂರಾಟ ನಡೆಸಿದ್ಧಾರೆ.
ಮೀರಜ್- ಕಾಗವಾಡ ಮಧ್ಯೆ ಸಂಚಾರ ಮಾಡುತ್ತಿದ್ದ ಕೆಎಸ್ ಆರ್ ಟಿಸಿ ಬಸ್ಗೆ ಕಲ್ಲು ತೂರಾಟ ನಡೆಸಿದ್ಧಾರೆ. ಬಸ್ಸು ಪುಣೆಯಿಂದ ಅಥಣಿ ಕಡೆಗೆ ಬರುತ್ತಿತು. ಕಳೆದ ರಾತ್ರಿ 10.30ಕ್ಕೆ ಪುಣೆಯಿಂದ ಹೊರಟಿದೆ. KSRTC ಬಸ್ ಮುಂಭಾಗದ ಗಾಜು ಜಖಂಗೊಂಡಿದೆ. ಕಾಗವಾಡ-ಮೀರಜ್ ಮಾರ್ಗದ ಬಸ್ ಸಂಚಾರ ಬಂದ್ ಆಗಿದೆ. ಬೆಳಗಾವಿ ಜಿಲ್ಲಾ ಪೊಲೀಸರ ಸೂಚನೆ ಮೇರೆಗೆ ಬಸ್ ಸೇವೆ ಸ್ಥಗಿತವಾಗಿದೆ.
ಬಸ್ಸಿನಲ್ಲಿ ಕೇವಲ ಕರ್ನಾಟಕದ ಜನರು ಮಾತ್ರ ಇರುವುದಲ್ಲ, ಮಹಾರಾಷ್ಟ್ರದ ಜನರು ಕೂಡ ಪ್ರಯಾಣ ಮಾಡುತ್ತಾರೆ. ಪ್ರಯಾಣಿಕರ ಜೀವಕ್ಕೆ ಹಾನಿಯಾದರೆ ಅದಕ್ಕೆ ಯಾರು ಹೊಣೆ ಮಹಾರಾಷ್ಟ್ರದ ಗೂಂಡಾಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಮಹಾರಾಷ್ಟ್ರ ಸರ್ಕಾರಕ್ಕೆ ತಾಕೀತು ಮಾಡಬೇಕು ಎಂದು ಬೆಳಗಾವಿಯ ಜನರು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ