ಮೈಸೂರಿನ ಬಸ್ ನಿಲ್ದಾಣದಲ್ಲಿ ಗುಂಬಜ್ ಮಾದರಿಯ ರಚನೆ ತೆರವು: ಜಿಲ್ಲಾಧಿಕಾರಿಗೆ ಹಾಗೂ ಶಾಸಕ ರಾಮದಾಸ್ ಗೆ ಧನ್ಯವಾದ ಹೇಳಿದ ಸಂಸದ ಪ್ರತಾಪ್ ಸಿಂಹ

ಮೈಸೂರಿನಲ್ಲಿ ರಾಜಕಾರಣಿಗಳ ಮಧ್ಯೆ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಗುಂಬಜ್ ಮಾದರಿಯ ಬಸ್ ನಿಲ್ದಾಣಕ್ಕೆ ತಾರ್ಕಿಕ ಅಂತ್ಯ ಸಿಕ್ಕಿದೆ. ಶಾಸಕ ರಾಮದಾಸ್ (MLA SA Ramdas) ನಿಲ್ದಾಣದ ಮೇಲಿದ್ದ ಮೂರು ಗುಂಬಜ್​ಗಳ ಪೈಕಿ ಅಕ್ಕಪಕ್ಕದ ಎರಡು ಚಿಕ್ಕ  ಗುಂಬಜ್ ನ್ನು ತೆರವುಗೊಳಿಸಿದ್ದಾರೆ.
ಗುಂಬಜ್ ಮಾದರಿ ಹಾಗೂ ತೆರವುಗೊಂಡ ನಂತರದ ಚಿತ್ರ
ಗುಂಬಜ್ ಮಾದರಿ ಹಾಗೂ ತೆರವುಗೊಂಡ ನಂತರದ ಚಿತ್ರ
Updated on

ಮೈಸೂರು: ಮೈಸೂರಿನಲ್ಲಿ ರಾಜಕಾರಣಿಗಳ ಮಧ್ಯೆ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಗುಂಬಜ್ ಮಾದರಿಯ ಬಸ್ ನಿಲ್ದಾಣಕ್ಕೆ ತಾರ್ಕಿಕ ಅಂತ್ಯ ಸಿಕ್ಕಿದೆ. ಶಾಸಕ ರಾಮದಾಸ್ (MLA SA Ramdas) ನಿಲ್ದಾಣದ ಮೇಲಿದ್ದ ಮೂರು ಗುಂಬಜ್​ಗಳ ಪೈಕಿ ಅಕ್ಕಪಕ್ಕದ ಎರಡು ಚಿಕ್ಕ  ಗುಂಬಜ್ ನ್ನು ತೆರವುಗೊಳಿಸಿದ್ದಾರೆ.

ಬಸ್ ನಿಲ್ದಾಣದ ಮೇಲಿನ ಗುಂಬಜ್ ನಿರ್ಮಾಣ (Gumbaz Model Bus Shelter) ವಿಷಯ ರಾಮದಾಸ್ ಮತ್ತು ಸಂಸದ ಪ್ರತಾಪ್ ಸಿಂಹ (MP Pratap Simha) ಅವರ ನಡುವೆ ಶೀತಲ ಸಮರಕ್ಕೆ ಕಾರಣವಾಗಿತ್ತು. ಇದೀಗ ಗುಂಬಜ್ ತೆರವು ಬಳಿಕ ಸಂಸದ ಪ್ರತಾಪ್ ಸಿಂಹ ಟ್ವೀಟ್ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಎರಡು ಗುಂಬಜ್ ತೆರವುಗೊಳಿಸಿದ ಬಳಿಕ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದ ಶಾಸಕ ರಾಮದಾಸ್, ಹಲವು ವಿಷಯಗಳನ್ನು ಹಂಚಿಕೊಂಡಿದ್ದರು. ತಮ್ಮ ಮೂವತ್ತು ವರ್ಷದ ರಾಜಕಾರಣದಲ್ಲಿ ಈ ರೀತಿಯ ವಿವಾದ ಎಂದೂ ಸಹ ನಡೆದಿರಲಿಲ್ಲ. ಅನಾವಶ್ಯಕವಾಗಿ ಧರ್ಮದ ಲೇಪನ ಮಾಡುವ ಯತ್ನಗಳು ನಡೆದಿದ್ದವೂ ಎಂಬ ಆರೋಪವನ್ನು ತಮ್ಮ ಪ್ರಕಟಣೆಯಲ್ಲಿ ಮಾಡಿದ್ದರು. 

ಟ್ವಿಟ್ಟರ್​ನಲ್ಲಿ ಫೋಟೋ ಹಂಚಿಕೊಂಡಿರುವ ಸಂಸದ ಪ್ರತಾಪ್ ಸಿಂಹ, ಮಧ್ಯದಲ್ಲೊಂದು ದೊಡ್ಡ ಗುಂಬಜ್, ಅಕ್ಕಪಕ್ಕ ಎರಡು ಚಿಕ್ಕ ಗುಂಬಜ್ ಇದ್ದರೆ ಅದು ಮಸೀದೀನೇ, ಅದನ್ನು ತೆರವು ಮಾಡಿಸುತ್ತೇನೆ ಎಂದಿದ್ದೆ ಮತ್ತು ಅದರಂತೆ  ನಡೆದುಕೊಂಡಿದ್ದೇನೆ. ಕಾಲಾವಕಾಶ ಕೇಳಿ ಮಾತಿನಂತೆ ನಡೆದುಕೊಂಡ ಜಿಲ್ಲಾಧಿಕಾರಿಗಳಿಗೆ ಹಾಗು ವಾಸ್ತವ ಅರಿತು ಜನಾಭಿಪ್ರಾಯಕ್ಕೆ ತಲೆಬಾಗಿದ ರಾಮದಾಸ್ ಜಿ ಅವರಿಗೂ ಧನ್ಯವಾದಗಳು ಎಂದು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

 ಅವರು ಜನಾಭಿಪ್ರಾಯಕ್ಕೆ ತಲೆಬಾಗಿದ ರಾಮದಾಸ್ ಅವರಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಇದರ ಜೊತೆಗೆ ತಮ್ಮ ಹೇಳಿಕೆಯ ವಿಡಿಯೋ ಕ್ಲಿಪ್ ಟ್ವೀಟ್ ಮಾಡಿದ್ದಾರೆ.

ಪ್ರತಾಪ್ ಸಿಂಹ ಒಟ್ಟು ಮೂರು ಫೋಟೋಗಳನ್ನು ಹಂಚಿಕೊಂಡಿದ್ದು, ಒಂದು ಮಸೀದಿಯ ಮಾದರಿ ನಕ್ಷೆ. ಮತ್ತೊಂದು ಬಸ್ ನಿಲ್ದಾಣದ ಮೇಲೆ ನಿರ್ಮಾಣ ಮಾಡಲಾಗಿದ್ದ ಮೂರು ಗುಂಬಜ್ ಇರುವ ಫೋಟೋ, ಕೊನೆಯದ್ದು ಒಂದೇ ಗುಂಬಲ್ ಇರುವ ಚಿತ್ರವಾಗಿದೆ.

ಕಾಂಗ್ರೆಸ್ ವ್ಯಂಗ್ಯ: ವಿಪಕ್ಷ ಉಪನಾಯಕ ಯು.ಟಿ.ಖಾದರ್ (UT Khader), ನಮ್ಮದು ಊರು ಮತ್ತು ಜನರ ಮನಸ್ಸು ಕಟ್ಟುವ ಕೆಲಸ. ಕೆಲವರದ್ದು ಜನರ ಮನಸ್ಸು ಮತ್ತು ಊರು ಒಡೆಯುವ ಕೆಲಸ. ಅವರು ಒಡೆದುಕೊಂಡು ಹೋಗಲಿ, ನಾವು ಕಟ್ಟಿಕೊಂಡು ಹೋಗ್ತೇವೆ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು.

ಪಾಲಿಕೆಗೆ ನೋಟಿಸ್: ಇನ್ನು ಬಸ್​ ನಿಲ್ದಾಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಧ್ಯ ಪ್ರವೇಶಿಸಿದ್ದು, ಪಾಲಿಕೆ ನೋಟಿಸ್ ನೀಡಿದೆ. ಊಟಿ ಮಾರ್ಗದ ಬಲಭಾಗದಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿರುವ ಬಸ್​ ನಿಲ್ದಾಣವನ್ನು ಒಂದು ವಾರದೊಳಗೆ ತೆರವುಗೊಳಿಸುವಂತೆ ನೋಟಿಸ್ ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com